PAN Card : ಸರ್ಕಾರ (government) ಹಲವು ಯೋಜನೆಗಳ ಮೂಲಕ ಜನರ ಆರ್ಥಿಕ ಸಮಸ್ಯೆಗೆ ನೆರವಾಗುತ್ತಿದೆ. ರೈತರ (former) ಕಷ್ಟಕ್ಕೆ ಬೆಂಗಾವಲಾಗಿದೆ. ಇನ್ನು ಪಾನ್ ಕಾರ್ಡ್ (PAN Card) ವಿಷಯಕ್ಕೆ ಬರೋದಾದ್ರೆ ಇದು ಎಲ್ಲಾ ಬ್ಯಾಂಕ್ (bank) ವ್ಯವಹಾರಗಳಿಗೂ ಅತಿಮುಖ್ಯ. ಆದರೆ, ಈ ಪಾನ್ ಕಾರ್ಡ್ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ. ಹೌದು, ಸರ್ಕಾರ ಇದೀಗ ಪ್ಯಾನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ 15 ಸಾವಿರ ರೂಪಾಯಿ ನೀಡುತ್ತಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರಿಗೆ ₹ 15,000 ಮೊತ್ತ ನೀಡುತ್ತಿದೆ ಎಂದು ಹೇಳುವ ಸುದ್ದಿ ಹರಿದಾಡುತ್ತಿದೆ. ಅಲ್ಲದೆ, ಪಿಐಬಿ ತನ್ನ ಅಧಿಕೃತ ಟ್ವೀಟ್‌ನಲ್ಲಿ ಬರೆದಿದೆ.
ಆದರೆ, ಇದು ಸುಳ್ಳು ಸುದ್ದಿ. ಮಹಿಳೆಯರಿಗೆ ₹ 15,000 ಮೊತ್ತ ಸಿಗುತ್ತದೆ ಎಂದು ನಂಬಿ ಮೋಸ ಹೋಗದಿರಿ. ಇದು ಸುಳ್ಳು ಸುದ್ದಿಯಾಗಿದ್ದು, ಕೇಂದ್ರ ಸರ್ಕಾರದಿಂದ ಅಂತಹ ಯಾವುದೇ ಯೋಜನೆ ಜಾರಿಯಾಗುತ್ತಿಲ್ಲ ಎಂದು ಹೇಳಲಾಗಿದೆ.
ಇಂತಹ ಯಾವುದೇ ಸುದ್ದಿ ನಂಬಬೇಡಿ. ಅಥವಾ ಇಂತಹ ಸುದ್ದಿಯನ್ನು ಹಂಚಬೇಡಿ, ಸರ್ಕಾರಿ ವೆಬ್‌ಸೈಟ್ ಅನ್ನು ಮಾತ್ರ ನಂಬಿ ಎಂದು ಸರ್ಕಾರ ತಿಳಿಸಿದೆ. ಹೌದು, ಇಂತಹ ನಕಲಿ ವಿಚಾರಗಳ ಬಗ್ಗೆ ಎಚ್ಚರದಿಂದಿರಿ.
ಇಂತಹ ನಕಲಿ ಸುದ್ಧಿಯನ್ನು ನೀವು ಪರಿಶೀಲಿಸಬಹುದು. ಹೇಗೆ ಅಂತೀರಾ? ಅಧಿಕೃತ ವೆಬ್ ಸೈಟ್ https://factcheck.pib.gov.in/ ಗೆ ಭೇಟಿ ನೀಡಿ. ಅಥವಾ ಇ-ಮೇಲ್ pibfactcheck@gmail.com ಗೆ ನಕಲಿ ವಿಡಿಯೋ ಕಳುಹಿಸಿ.
