Traveling by car: ಲಾಂಗ್ ಡ್ರೈವ್ ಹೋಗುವುದು ಎಂದ್ರೆ ಯಾರು ತಾನೇ ಬೇಡ ಹೇಳುತ್ತಾರೆ ನೋಡಿ. ಪ್ರತಿಯೊಬ್ಬರೂ ಕೂಡ ಪ್ರಯಾಣ ಬೆಳೆಸಲು ಇಷ್ಟ ಪಡುತ್ತಾರೆ. ಹೀಗಾಗಿ ಲಾಂಗ್ ಡ್ರೈವ್ ಅಂದಾಗ ತಕ್ಷಣ ನೆನಪಾಗೋದೇ ಕಾರು. ಆದ್ರೆ, ಕಾರಿನಲ್ಲಿ ಲಾಂಗ್ ಡ್ರೈವ್ ಹೋಗೋ ಮುಂಚೆ ಯೋಚಿಸೋದು ಉತ್ತಮ. ಯಾಕಂದ್ರೆ, ಕಾರಿನಲ್ಲಿ(Traveling by car) ಲಾಂಗ್ ಡ್ರೈವ್ ಹೋದ್ರೆ ಗಂಭೀರ ಆರೋಗ್ಯ ಸಮಸ್ಯೆ ಕಾಡುತ್ತದೆ.
ಹೌದು. ಈಗಿನ ಉರಿ ಬಿಸಿಲಿಗೆ ಅಂತೂ ಕೂಲ್ ಆಗಿ ಇರಬಹುದೆಂದು ಎಸಿ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾರೆ. ಆದ್ರೆ, ಸಂಶೋಧನೆಯೊಂದರ ಪ್ರಕಾರ ಹೊಸ ಮಾಹಿತಿಯೊಂದು ಹೊರ ಬಂದಿದ್ದು, ಕಾರಿನ ಕಿಟಕಿ ಗಾಜುಗಳನ್ನು ಯಾವಾಗ್ಲೂ ಮುಚ್ಚಿಕೊಂಡೇ ಪ್ರಯಾಣಿಸುವುದು ಆರೋಗ್ಯಕ್ಕೆ ಹಾನಿಕಾರ ಎಂದು ತಿಳಿದು ಬಂದಿದೆ.
ಸಂಶೋಧನೆಯೊಂದರ ಪ್ರಕಾರ ಕಾರಿನ ಕ್ಯಾಬಿನ್ ನಲ್ಲೇ ಸಾಕಷ್ಟು ಹಾನಿಕಾರಕ ಕಣಗಳಿದ್ದು, ಅಧಿಕ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಹಾಗೂ ರಾಸಾಯನಿಕಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ, ಕಾರಿನಲ್ಲಿರುವ ಬ್ಯಾಕ್ಟೀರಿಯಾ, ಧೂಳು ಮತ್ತು ರಾಸಾಯನಿಕಗಳಿಂದ ಶ್ವಾಸ ಮತ್ತು ಹೃದಯದ ತೊಂದರೆ, ಕ್ಯಾನ್ಸರ್, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ.
ಅವು ಆಕ್ಸಿಡೀಕರಣದ ಒತ್ತಡ ಸೃಷ್ಟಿಸಬಹುದು. ಕಾರಿನಲ್ಲಿರೋ ಹಾನಿಕಾರಕ ಕಣಗಳು ನಮ್ಮ ಜೀವಕೋಶ ಮತ್ತು ಡಿಎನ್‌ಎ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ವಿಜ್ಞಾನಿಗಳ ಸಂಶೋಧನೆ ಪ್ರಕಾರ ಕಾರಿನಲ್ಲಿ ಜನಸಂದಣಿ ಹೆಚ್ಚಿದ್ದಷ್ಟು ರೋಗಗಳ ಆತಂಕವೂ ಹೆಚ್ಚು. ಹಾಗಾಗಿ ಸೇಫ್ ಸೈಡ್ ಎಂಬಂತೆ ಕಾರಿನ ವಿಂಡೋ ಗ್ಲಾಸ್ ತೆರೆದೆ ಪ್ರಯಾಣ ಬೆಳೆಸುವುದು ಒಳಿತು.
ಇದನ್ನು ಓದಿ : Rakesh Adiga: ಬಿಗ್ ಬಾಸ್ ರನ್ನರ್ ಅಪ್ ಕಪ್ ಗೆದ್ದ ರಾಕೇಶ್ ಅಡಿಗ ಈಗ ಏನು ಮಾಡ್ತಾ ಇದ್ದಾರೆ ಗೊತ್ತಾ?
