Home » Telugu actor Allu Ramesh: ತೆಲುಗು ನಟ ಅಲ್ಲು ರಮೇಶ್ ಹೃದಯ ಸ್ತಂಭನದಿಂದ ನಿಧನ

Telugu actor Allu Ramesh: ತೆಲುಗು ನಟ ಅಲ್ಲು ರಮೇಶ್ ಹೃದಯ ಸ್ತಂಭನದಿಂದ ನಿಧನ

by Mallika
1 comment
Telugu actor Allu Ramesh

Telugu actor Allu Ramesh: ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ 52 ವರ್ಷದ ಅಲ್ಲು (Telugu actor Allu Ramesh)ರಮೇಶ್ ಅವರು ಹೃದಯ ಸ್ತಂಭನದಿಂದ ಇಂದು, ಬುಧವಾರ ಬೆಳಿಗ್ಗೆ ವಿಶಾಖಪಟ್ಟಣದಲ್ಲಿ ಮೃತಪಟ್ಟಿದ್ದಾರೆ.

ಅವರಿಗೆ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡಿತ್ತು. ತೀವ್ರ ಎದೆನೋವಿನಿಂದ ಮನೆಯಲ್ಲಿ ಕುಸಿದು ಬಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಮೂಲತಃ ವಿಶಾಖಪಟ್ಟಣಂ ನ ಅಲ್ಲು ರಮೇಶ್ ಅವರು ನೆಪೋಲಿಯನ್ ಚಿರು ಜಲ್ಲು, ವೇದಿ, ಬ್ಲೇಡ್ ಬಾಬ್ಜಿ, ಸೇರಿದಂತೆ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅವರು ಹೆಚ್ಚಾಗಿ ಹಾಸ್ಯ ನಟರಾಗಿ.ಅಭಿನಯಿಸಿದ್ದು, ಹಲವು ಚಿತ್ರಗಳಲ್ಲಿ ಪೋಷಕ ನಟನಾಗಿಯೂ ಅಭಿನಯಿಸಿದ್ದಾರೆ.

ಮೃತ ಅಲ್ಲು ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದು ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ತೆಲುಗು ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

 

ಇದನ್ನು ಓದಿ : Traveling by car : ಕಾರಿನಲ್ಲಿ ಪ್ರಯಾಣ ಬೆಳೆಸುವುದು ಎಷ್ಟು ಸೂಕ್ತ? : ಸಂಶೋಧನೆಯಲ್ಲಿ ಬಯಲಾಗಿದೆ ಈ ಕುರಿತಾದ ಶಾಕಿಂಗ್ ಮಾಹಿತಿ! 

You may also like

Leave a Comment