Home » Yediyurappa And Shruti: ಪುತ್ರನ ನಾಮಪತ್ರ ಸಲ್ಲಿಕೆ ವೇಳೆ ನಟಿ ಶೃತಿಯ ತುಂಬು ಕೆನ್ನೆ ಚುವುಟಿದ ಯಡಿಯೂರಪ್ಪ

Yediyurappa And Shruti: ಪುತ್ರನ ನಾಮಪತ್ರ ಸಲ್ಲಿಕೆ ವೇಳೆ ನಟಿ ಶೃತಿಯ ತುಂಬು ಕೆನ್ನೆ ಚುವುಟಿದ ಯಡಿಯೂರಪ್ಪ

1 comment
Yediyurappa And Shruti

Yediyurappa- Shruti : ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಈ ವರೆಗೆ ಕಮಲ ಪಾಳಯದ ಮುತ್ಸದ್ದಿ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿನಿಧಿಸುತ್ತಿದ್ದರು. ಆದರೆ,ಇದೇ ಪ್ರಪ್ರಥಮ ಬಾರಿಗೆ ಬಿಎಸ್‌ವೈ ಪುತ್ರ, ಶಿಕಾರಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ ವಿಜಯೇಂದ್ರ (vijayendra) ಅವರು ಚುನಾವಣಾ ಕಣಕ್ಕಿಳಿದಿದ್ದಾರೆ. ಹೀಗಾಗಿ ಬಿ.ವೈ. ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನೊಳಗೊಂಡಂತೆ ಅನೇಕ ಮಂದಿ ಬೆಂಬಲಿಗರು ಸಾಥ್ ನೀಡಿದ್ದರು. ಈ ಸಂದರ್ಭದಲ್ಲಿ ಅನೇಕ ವಿಶೇಷ ಘಟನೆಗಳು ಜರುಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ(B.S Yediyurappa) ಅವರು ಬುಧವಾರ ತಮ್ಮ ಪುತ್ರನ ನಾಮಪತ್ರ (Nomination) ಸಲ್ಲಿಕೆಗೆ ಸಾಥ್ ನೀಡಿದ್ದು,ತಮ್ಮ ಹಳೆಯ ಅಂಬಾಸಿಡರ್ (Ambassador Car) ಕಾರಿನಲ್ಲಿ ತೆರಳಿದ್ದರು.ಈ ಬೃಹತ್ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಸೇರಿದ್ದರು. ಶಾಸಕ ಪಿ.ರಾಜೀವ್, ನಾರಾಯಣಸ್ವಾಮಿ ಸೇರಿದಂತೆ ಹಲವರು ಈ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ಮುಖಂಡೆ, ಸಿನಿಮಾ ನಟಿ ಶ್ರುತಿ ಅವರು ಜನರತ್ತ ಕೈ ಬೀಸಿ ನಗು ಬೀರಿದ್ದು, ಆಗ ಪಕ್ಕದಲ್ಲಿದ್ದ ಬಿಎಸ್‌ವೈ ಅವರು ಈ ಸಂದರ್ಭದಲ್ಲಿ ನಟಿಯ ಕೆನ್ನೆ ಹಿಂಡಿ ಆತ್ಮೀಯವಾಗಿ ಏನೋ ಮಾತನಾಡಿದ ಫೋಟೋ ಎಲ್ಲೆಡೆ ವೈರಲ್ ಆಗಿ ಸಂಚಲನ ಮೂಡಿಸಿದೆ.

ಪುತ್ರನ ನಾಮಪತ್ರ ಸಲ್ಲಿಕೆ ವೇಳೆ ನಟಿ ಶೃತಿಯ ತುಂಬು ಕೆನ್ನೆ ಚುವುಟಿದ ಯಡಿಯೂರಪ್ಪ( Yediyurappa- Shruti )ಅವರ ಕಂಡು ನಟಿ ಮುಗುಳ್ನಗೆ ಬೀರಿದ್ದಾರೆ. ಬಿಎಸ್‌ ಯಡಿಯೂರಪ್ಪನವರು ತಮ್ಮನ್ನು ಗಮನಿಸುತ್ತಿದ್ದಂತೆ ನಟಿ ಶೃತಿ ಕೈ ಮುಗಿದು ನಮಸ್ಕರಿಸುವ ಸಲುವಾಗಿ ನಟಿ ಶೃತಿ ಅವರು ಬಿಎಸ್‌ವೈ ಅವರ ಆಶೀರ್ವಾದ ಪಡೆಯಲು ಮುಂದಾಗಿದ್ದು, ಆಗ ಶೃತಿ ಅವರ ತಲೆಗೆ ಕೈ ಹಾಕಿ ಆಪ್ತತೆಯಿಂದ ಕಿವಿಯಲ್ಲಿ ಬಿಎಸ್‌ವೈ ಏನೋ ಹೇಳಿದ್ದು ಕಂಡುಬಂದಿದೆ.

You may also like

Leave a Comment