Home » Pratap Simha: ಸೋಮಣ್ಣ ಪರ ಮತಯಾಚನೆ, ಸಾರ್ವಜನಿಕರಿಂದ ತೀವ್ರ ತರಾಟೆ, ಮೂಕರಾಗಿ ನಿಂತ ಪ್ರತಾಪ್ ಸಿಂಹ!!!

Pratap Simha: ಸೋಮಣ್ಣ ಪರ ಮತಯಾಚನೆ, ಸಾರ್ವಜನಿಕರಿಂದ ತೀವ್ರ ತರಾಟೆ, ಮೂಕರಾಗಿ ನಿಂತ ಪ್ರತಾಪ್ ಸಿಂಹ!!!

1 comment
Pratap Simha

Pratap Simha : ಈಗಾಗಲೇ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ (Varuna assembly constituency) ಪ್ರಚಾರ ನಡೆಸುತ್ತಿರುವ ವಿ ಸೋಮಣ್ಣಗೆ , ಮೈಸೂರು(Mysuru) ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದೀರಿ? ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಈಗ ಮತ ಕೇಳಲು ಬಂದಿದ್ದೀರಿ ಎಂದು ಲಲಿತಾದ್ರಿಪುರ ಗ್ರಾಮದಲ್ಲಿ ಮೊನ್ನೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದರು.

ಇದೇ ವೇಳೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರತಾಪ್ ಸಿಂಹ ಹಾಗೂ ಸೋಮಣ್ಣ ತೆಡೆದು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದರು. ಆದರೂ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಮುಜುಗರ ಅನುಭವಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇಂದು(ಏಪ್ರಿಲ್ 21) ಮತ್ತೆ ಸೋಮಣ್ಣ ಪರ ಮತಯಾಚನೆಗೆ ತೆರಳಿದ್ದ ಸಂಸದ ಪ್ರತಾಪ್​ಸಿಂಹಗೆ(Pratap Simha )ಸ್ಥಳೀಯ ನಿವಾಸಿಗಳು ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.​

ಅಂಬೇಡ್ಕರ್ ಬರೆದ ಸಂವಿಧಾನವನ್ನೇ ಬದಲಿಸುತ್ತೇವೆ ಅಂತೀರಾ? ಬಿಜೆಪಿಯ ಅಕ್ಕಿ, ಚೀಲ ಮಾತ್ರ ಸಿದ್ದರಾಮಯ್ಯರದ್ದು ಹೇಳುತ್ತೀರಿ ರಾಜ್ಯದಲ್ಲಿ ಈಗ ಯಾಕೆ ಪಡಿತರ ಅಕ್ಕಿ ಕಡಿಮೆ ಕೊಡ್ತೀದ್ದೀರಾ? ರಸ್ತೆಗಳ ಮುಖ್ಯಸ್ಥ ಎಂದು ಮಹದೇವಪ್ಪಗೆ ಬಿರುದು ಕೊಡುತ್ತೀರಾ, ಅದೇ ಮಹದೇವಪ್ಪ ವಿರುದ್ಧ ಈಗ ಮಾತನಾಡುತ್ತೀರಾ ಎಂದು ಪ್ರತಾಪ್​ ಸಿಂಹಗೆ ಸ್ಥಳೀಯ ನಿವಾಸಿಗಳು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ ಜನರು ಕ್ಲಾಸ್ ತೆಗೆದುಕೊಂಡರು. ಇದರಿಂದ ಬಿಜೆಪಿ ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ.

ಒಟ್ಟಿನಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಮೇಲೆ ಜನರು ಹರಿಹಾಯ್ದು ಬೀಳುತ್ತಿದ್ದು ನಾಯಕರು ಕಕ್ಕಾಬಿಕ್ಕಿಯಾಗಿದ್ದಾರೆ. ಅದಲ್ಲದೆ ಅನ್ನವನ್ನೇ ಕಿತ್ತುಕೊಂಡ ಆರೋಪ ಮತ್ತು ಇನ್ನಿತರ ಬೆಲೆ ಏರಿಕೆ ಆರೋಪ ಬಿಜೆಪಿ ಮೇಲೆ ಇದೆ. ಹೀಗಿರುವಾಗ ಸೋಮಣ್ಣ ಅವರ ನಿಲುವಿಗೆ ಪ್ರತಾಪ್ ಸಿಂಹ ಅವರ ಮುಂದಿನ ಪ್ಲಾನ್ ಎನ್ನುವುದು ನೋಡಬೇಕಿದೆ.

ಇದನ್ನೂ ಓದಿ: Mammootty mother passes away : ಮಲಯಾಳಂ ನಟ ಮಮ್ಮುಟ್ಟಿ ತಾಯಿ ವಿಧಿವಶ!

You may also like

Leave a Comment