Home » Naked Wanderings : ಟ್ರಿಪ್ ಹೋಗೋದನ್ನೇ ಫ್ಯಾಷನ್ ಮಾಡ್ಕೊಂಡಿರೋ ಈ ದಂಪತಿ ಬೆತ್ತಲಾಗೆ ಪ್ರಪಂಚ ಸುತ್ತುತ್ತಾರೆ!

Naked Wanderings : ಟ್ರಿಪ್ ಹೋಗೋದನ್ನೇ ಫ್ಯಾಷನ್ ಮಾಡ್ಕೊಂಡಿರೋ ಈ ದಂಪತಿ ಬೆತ್ತಲಾಗೆ ಪ್ರಪಂಚ ಸುತ್ತುತ್ತಾರೆ!

by ಹೊಸಕನ್ನಡ
1 comment
Naked Wanderings

Naked Wanderings: ಟ್ರಿಪ್ ಮಾಡುತ್ತಾ ರಾಜ್ಯ, ದೇಶ ಸುತ್ತೋದು ಅಂದ್ರೆ ಹಲವರಿಗೆ ಬಲು ಪ್ರೀತಿ. ಹೀಗೆ ಹೋಗುವಾಗ ಕೆಲವರು ಕೆಲವು ವಿಶೇಷತೆಗಳನ್ನು ತೋರ್ಪಡಿಸುತ್ತಾರೆ. ಅಂದ್ರೆ ಸೈಕಲ್ ಸವಾರಿ ಮಾಡುತ್ತಾ ಸುತ್ತಾಡೋದು, ಕಾಲ್ನಡಿಗೆಯಲ್ಲೇ ಹೋಗೋದು, ಹೋದಲ್ಲೆಲ್ಲ ರೂಮ್ ಮಾಡಿ ಉಳಿಯದೆ ಟೆಂಟ್ ಹಾಕುತ್ತಾ ಉಳಿಯೋದು ಹೀಗೆ ಬೇರೆ ಬೇರೆ ವಿಶೇಷತೆಗಳು ಇರುತ್ತವೆ. ಆದರೆ ಇಲ್ಲೊಂದೆಡೆ ಟ್ರಿಪ್ ಮಾಡೋ ದಂಪತಿ ಬಗ್ಗೆ ಕೇಳಿದ್ರೆ ನಿಮಗೆ ನಿಜಕ್ಕೂ ಶಾಕ್ ಅಗ್ಬೋದು. ಯಾಕೆಂದರೆ ಟ್ರಿಪ್​ ಹೋದಾಗ ಇವರಿಬ್ಬರೂ ಬಟ್ಟೆಯನ್ನೇ ಹಾಕೋದಿಲ್ವಂತೆ.

ಹೌದು, ಹಲವರಿಗೆ ಟ್ರಿಪ್​ ಹೋಗುವಂತ ಕ್ರೇಜ್​ ಇರುತ್ತೆ. ಮಳೆಯೇ ಇರಲಿ ಬಿಸಿಲೇ ಇರಲಿ ಒಟ್ಟಿನಲ್ಲಿ ಸುತ್ತಾಡಬೇಕು ಅನ್ನೋ ಆಸೆ. ಅಂತೆಯೇ ಇಲ್ಲೊಂದು ದಂಪತಿಗೆ ಟ್ರಿಪ್​ ಹೋಗೋದು ಅಂದ್ರೆ ಸಖತ್​ ಕ್ರೇಜ್​ ಅಂತೆ. ಇವ್ರು ಕೇವಲ ಟ್ರಿಪ್​ ಹೋಗಿ, ಮೋಜು ಮಾಡಿಕೊಂಡು ಬಂದಿದ್ರೆ ಬಹುಶಃ ಸುದ್ಧಿ ಆಗ್ತಾ ಇರಲಿಲ್ಲ. ಆದ್ರೆ ಸದ್ಯ ಇವರು ಸುದ್ದಿಯಾಗ್ತಿರೋದು ಯಾಕೆ ಗೊತ್ತಾ? ಅದೇನೆಂದರೆ ಟ್ರಿಪ್​ ಹೋದಾಗ ಇವರಿಬ್ಬರೂ (Naked Wanderings) ಬಟ್ಟೆಯನ್ನೇ ಹಾಕೋದಿಲ್ವಂತೆ!
ನಿಮಗೆ ಇದು ವಿಚಿತ್ರ ಅಂತ ಅನಿಸಿದ್ರೂ ಕೂಡ ನಿಜ. ನಂಬಲೇ ಬೇಕು.

ಇವರ ಹೆಸರು ಫಿಯೋನಾ ಮತ್ತು ಅವರ ಪತಿ ಮೈಕೆಲ್ ಡಿಸ್ಕಾಮ್. ಸುಮಾರು 50 ವರ್ಷ ವಯಸ್ಸಾಗಿದೆ. ಪ್ರವಾಸಕ್ಕಾಗಿ ಅವರು ಹಣ ಖರ್ಚು ಮಾಡಲು ಹಿಂದೆ ಮುಂದೆ ನೋಡೋದಿಲ್ಲ. ಇವರು ಈವರೆಗೆ ಪ್ರವಾಸಕ್ಕೆಂದೇ ಈ ದಂಪತಿ 19,000 ಡಾಲರ್ ಅಂದ್ರೆ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಒಟ್ಟಿನಲ್ಲಿ ಇವರಿಗೆ ಪ್ರವಾಸ ಅಂದ್ರೆ ಅವರಿಗೆ ಒಂದು ರೀತಿಯ ಫ್ಯಾಷನ್ (Fashion).

ಅಂದ ಹಾಗೆ ಇವರು ಪ್ರವಾಸದಲ್ಲೆಲ್ಲ ಬೆತ್ತಲೆಯಾಗಿ ಓಡಾಡೋ ಹಿಂದೆ ಒಂದು ಕಥೆ ಇದೆ. ಹಿಂದೆ ಇವರು ಹೀಗಿರಲಿಲ್ಲ.ಸತ್ಯ ಏನಪ್ಪಾ ಅಂದ್ರೆ ಫಿಯೋನಾ ಮತ್ತು ಮೈಕೆಲ್ ಹನಿಮೂನ್ ಗೆ ಗ್ರೀಸ್ ಗೆ ಹೋಗಿದ್ದರಂತೆ. ಅಲ್ಲಿ ಒಂದು ದಂಪತಿ ನಗ್ನ ಸ್ಥಿತಿಯಲ್ಲಿರೋದನ್ನು ಫಿಯೋನಾ ಮತ್ತು ಮೈಕೆಲ್ ನೋಡಿದ್ದಾರೆ. ಆ ದಂಪತಿ ನೋಡಿ ಇವರಿಗೆ ಮೊದಲು ಆಘಾತವಾಗಿದೆ. ನಂತ್ರ ನಾವೂ ಯಾಕೆ ಹಾಗೆ ಇರಬಾರದು ಅನ್ನೋ ಕ್ರೇಜಿ ಆಲೋಚನೆ ಅವರಿಗೆ ಹುಟ್ಟಿದೆ. ತಕ್ಷಣ ಫಿಯೋನಾ ಮತ್ತು ಮೈಕೆಲ್ ಕೂಡ ನಗ್ನವಾಗಿ ಓಡಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲಿಂದ ನಂತರ ಅವರಿಗೆ ಮೈಯಲ್ಲಿನ ಉಡುಪು ಭಾರ ಭಾರ ಅನಿಸುತ್ತಿದೆ. ಮನಸ್ಸು ಯಾವತ್ತಿಗಿಂತಲೂ ಹಗುರ ಹಗುರ.

ಅಂದು ಅವರು ಮೊದಲ ಬಾರಿಗೆ ಸಮುದ್ರದ ಹತ್ತಿರ ಇಬ್ಬರೂ ಬಟ್ಟೆ ಇಲ್ಲದೇ ಓಡಾಡಿದ್ದಾರೆ. ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತೆ ಭಾಸವಾಗಿದೆ. ಆ ನಂತ್ರ ಫಿಯೋನಾ ಮತ್ತು ಮೈಕೆಲ್ ನಗ್ನವಾಗಿ ಸುತ್ತಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಈ ದಂಪತಿ ಬಟ್ಟೆಯಿಲ್ಲದೆ ಸುತ್ತಾಡೋದನ್ನು ರೂಢಿಸಿಕೊಂಡಿದ್ದಾರೆ. ಹೀಗಾಗಿ ಟ್ರಿಪ್​ಗೆ ಹೋಗೋದಾದ್ರೆ ಇವರಿಬ್ಬರಿಗೆ ಜಾಸ್ತಿ ಬ್ಯಾಗ್​ ಬೇಡ್ವಂತೆ. ಬಟ್ಟೆಯ ಭಾರ ಮತ್ತು ಮನಸ್ಸಿನ ಭಾರ ಇಟ್ಕೊಂಡು ಯಾಕೆ ದೇಶ ಸುತ್ಬೇಕು ಅನ್ನೋದು ಅವರ ನಿಲುವು.

ಹಾಗಂತ ಅವ್ರು ಎಲ್ಲಾ ಸಮಯಗಳಲ್ಲಿ ಬೆತ್ತಲೆ ಇರಲ್ಲ. ದೇಶ ಕಾಲ ನೋಡಿಕೊಂಡು, ಅಲ್ಲಿನ ಕಾನೂನು ಕಟ್ಟಳೆ ತಿಳಿದುಕೊಂಡು ನಗ್ನವಾಗಿ ಇರ್ತಾರೆ. ಹೀಗೆ ನಗ್ನವಾಗಿ ಇರೋ ವಿಚಾರ ಹಂಚಿಕೊಳ್ಳಲು ಈ ಜೋಡಿ ಸೋಷಿಯಲ್ ಮೀಡಿಯಾದಲ್ಲೂ ಸಕತ್ ಆಕ್ಟೀವ್. ಅದಕ್ಕಾಗೇ ಒಂದು ವೆಬ್ಸೈಟ್ ಕೂಡಾ ತೆರೆದಿದ್ದಾರೆ ಈ ಕಪಲ್ಸ್.

 

ಇದನ್ನು ಓದಿ: Coconut water: ಪ್ರತಿದಿನ 1 ಕಪ್ ತೆಂಗಿನ ನೀರನ್ನು ಕುಡಿದರೆ ಇಷ್ಟೆಲ್ಲಾ ಒಳ್ಳೆದಾಗುತ್ತಾ? ಇಲ್ಲಿದೆ ಫುಲ್​ ಡೀಟೇಲ್ಸ್​ 

You may also like

Leave a Comment