Home » Dog Attack Boy: ಏಳು ನಾಯಿಗಳ ದಾಳಿಯಿಂದ ಗೆದ್ದು ಬಂದ ಬಾಲಕ! ಅಷ್ಟಕ್ಕೂ ಈ ಬಾಲಕ ದಾಳಿಯಿಂದ ಪಾರಾಗಲು ಮಾಡಿದ್ದೇನು ಗೊತ್ತಾ?

Dog Attack Boy: ಏಳು ನಾಯಿಗಳ ದಾಳಿಯಿಂದ ಗೆದ್ದು ಬಂದ ಬಾಲಕ! ಅಷ್ಟಕ್ಕೂ ಈ ಬಾಲಕ ದಾಳಿಯಿಂದ ಪಾರಾಗಲು ಮಾಡಿದ್ದೇನು ಗೊತ್ತಾ?

2 comments
Dog Attack Boy

Dog Attack Boy: ಇತ್ತೀಚೆಗೆ ಬೀದಿ ನಾಯಿಗಳ (street dogs) ಹಾವಳಿ ಹೆಚ್ಚಾಗಿದೆ. ನಾಯಿಗಳ ದಾಳಿಗೆ ತುತ್ತಾಗಿ ಪುಟ್ಟ ಮಕ್ಕಳು ಪ್ರಾಣ ಕಳೆದುಕೊಳ್ಳುವಂತಹ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಅಂತಹ ಮನಕಲಕುವ ಘಟನೆಯೊಂದು ಕೋಲಾರದಲ್ಲಿ (Kolar) ನಡೆದಿದೆ.

ಹೌದು, 9 ವರ್ಷದ ಬಾಲಕ ಜಾಫರ್ ರಂಜಾನ್ ಕೊನೆಯ ದಿನದ ಉಪವಾಸದ ಪ್ರಾರ್ಥನೆಗೆ ಮಸೀದಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ನಾಯಿಗಳ ಗುಂಪು ಬಂದು ಬಾಲಕನ ಮೇಲೆ ದಾಳಿ ನಡೆಸಿರುವ (Dog Attack Boy) ಘಟನೆ ಕೋಲಾರದ ರಹಮತ್ ನಗರದಲ್ಲಿ ನಡೆದಿದೆ.

ರಸ್ತೆಯಲ್ಲಿ ತೆರಳುವ ವೇಳೆ ಒಂದು ಬೀದಿ ನಾಯಿ ಆತನ ಬಳಿ ಬಂದಿದ್ದು, ನಂತರ 7,8 ನಾಯಿಗಳು ಪುಟ್ಟ ಬಾಲಕನನ್ನು ಅಟ್ಟಾಡಿಸಿ, ಎಳೆದಾಡಿದ್ದಾವೆ. ಅಬ್ಬಾ!! ಈ ವಿಡಿಯೋ ನೋಡಿದ್ರೆ ಅಯ್ಯೋ!! ಅನಿಸುವುದು ಖಂಡಿತ. ಆದರೆ, ಅದೃಷ್ಟವಶಾತ್ ಬಾಲಕ ಏಳು ನಾಯಿಗಳ ದಾಳಿಯಿಂದ ಗೆದ್ದು ಬಂದಿದ್ದಾನೆ. ಹೇಗೆ?

ಬೀದಿನಾಯಿಗಳು ತಮ್ಮ ಆಹಾರವೆಂಬಂತೆ ಬಾಲಕನನ್ನು (boy) ಕಚ್ಚಿ ಕಚ್ಚಿ, ಆತನ ದೇಹವನ್ನು ಸೀಳುತ್ತಿರಬೇಕಾದರೆ ಈತ ಜೋರಾಗಿ ಚೀರಲಾರಂಭಿಸಿದ್ದಾನೆ. ಬಾಲಕನ ಕೂಗು ಕೇಳಿ ಪೊಲೀಸ್ ಪೇದೆಯೊಬ್ಬರು ಆತನ ರಕ್ಷಣೆಗೆ ಧಾವಿಸಿದ್ದಾರೆ. ರಾಕ್ಷಸ ನಾಯಿಗಳಿಂದ ಬಾಲಕನನ್ನು ರಕ್ಷಿಸಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.

ಆದರೆ, ಕೋಲಾರದಲ್ಲಿ ಇದು ಮೊದಲನೇ ಪ್ರಕರಣ ಅಲ್ಲವಂತೆ. ಆಶ್ಚರ್ಯವಾದರೂ ಮಾಹಿತಿ ಪ್ರಕಾರ ಈ ಮೊದಲೇ ಕೋಲಾರದಲ್ಲಿ ನಾಯಿಗಳ ಕಾಟ ಇದ್ದು, ಕಳೆದ 6 ತಿಂಗಳಲ್ಲಿ ಸುಮಾರು 93 ಜನರು ನಾಯಿ ಕಡಿತಕ್ಕೆ ಒಳಗಾಗಿ, ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ನಗರಸಭೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂಬುದು ಸ್ಥಳೀಯರ ಆಶಯ.

ಇದನ್ನೂ ಓದಿ: Bengaluru: ಕಾರಿನ ಮೇಲೆ ಗಾಲ್ಫ್ ಬಾಲ್ ಬಿದ್ದು ಗಾಜು ಪುಡಿ, ಚಾಲಕನಿಗೆ ಗಾಯ ; ಗಾಲ್ಫ್ ಕ್ಲಬ್ ವಿರುದ್ಧ ಎಫ್ ಐಆರ್ ದಾಖಲು!!!

You may also like

Leave a Comment