Crime News: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ದಾ ಹತ್ಯೆಯ ಪ್ರಕರಣ ಬಯಲಾದ ಬಳಿಕ ಅನೇಕ ರೀತಿಯ ಬರ್ಬರ ಹತ್ಯೆಗಳು(Crime News)ವರದಿಯಾಗುತ್ತಲೇ ಇವೆ. ಯಾದಗಿರಿಯ ಜನರಲ್ಲಿ ನಡುಕ ಹುಟ್ಟಿಸಿದ ಟಿಕ್ ಟಾಕ್(Tiktok) ಹುಡುಗಿಯೊಬ್ಬಳ (Girl)ಹತ್ಯೆಯ ಜಾಡು ಹೊರಟ ಖಾಕಿ ಪಡೆಗೆ ರೋಚಕ ಮಾಹಿತಿ ಲಭ್ಯವಾಗಿದೆ.
ಇದು ಇತ್ತೀಚೆಗೆ ನಡೆದ ಮುಂಬೈಯಿಂದ ಯಾದಗಿರಿಗೆ ಬಂದ ಜೋಡಿಯ ಕಹಾನಿ! ಇತ್ತೀಚೆಗೆ ಅಂತಿಮಾ ವರ್ಮಾ (25) ಎಂಬಾಕೆ ಕೊಲೆಯಾಗಿದ್ದಳು. ಕೊಂದಿದ್ದು(Murder Case) ಬೇರಾರೂ ಅಲ್ಲ! ಪ್ರೀತಿ ಪ್ರೇಮ ಎಂದು ಎರಡು ವರ್ಷ ಪ್ರೀತಿಸಿದ ಪ್ರಿಯಕರ. ಅಷ್ಟಕ್ಕೂ ಕೊಲೆಯ ಹಿಂದಿನ ಕಾರಣ ತಿಳಿದರೆ ಅಚ್ಚರಿಯಾಗದಿರದು.
ಸಣ್ಣ ಪುಟ್ಟ ವಿಚಾರಕ್ಕೂ ಜಗಳಗಳಾಗಿ ಮನಸ್ತಾಪ ಉಂಟಾಗಿ ಸಾವಿನ ದವಡೆಗೆ ಸಿಲುಕಿದ ಅದೆಷ್ಟೋ ಯುವತಿಯರ ಕಥೆಗಳನ್ನು ನಾವೆಲ್ಲ ಕೇಳಿದ್ದೇವೆ. ಅದೇ ಲಿಸ್ಟ್ ಗೆ ಸೇರ್ಪಡೆ ಆಗುವ ಈ ಕಥೆಯಲ್ಲಿ ಆರೋಪಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಯುವತಿಯನ್ನು ಹತ್ಯೆ ಮಾಡಿ, ಸುಟ್ಟು ಹಾಕಿದ್ದಾನೆ ಭೂಪ. ಅಂತಿಮಾ ವರ್ಮಾ ಮುಂಬೈನಲ್ಲಿ(Mumbai) ಸಹೋದರನ ಮನೆಯಲ್ಲಿ ನೆಲೆಸಿದ್ದಳು ಎನ್ನಲಾಗಿದೆ. ಆಕೆಯ ಮನೆಯ ಪಕ್ಕದಲ್ಲೇ ಮಾರುತಿ ರಾಠೋಡ್ ವಾಸವಿದ್ದನಂತೆ.
ಮಾರುತಿ ರಾಠೋಡ್ ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಉತ್ತರ ಪ್ರದೇಶ ಮೂಲದ ಅಂತಿಮಾ ವರ್ಮಾನನ್ನು 2 ವರ್ಷದಿಂದ ಪ್ರೀತಿಸುತ್ತಿದ್ದ. ಆದರೆ ಅಂತಿಮಾ ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಳು.ಬೇರೆ ಸ್ನೇಹಿತರ ಜೊತೆ ಟಿಕ್ ಟಾಕ್ ಮಾಡುವ ಹವ್ಯಾಸವಿತ್ತಂತೆ. ಆದರೆ ಅಂತಿಮಾ ವರ್ಮಾ ಬೇರೆ ಸ್ನೇಹಿತರ ಜೊತೆ ಬೆರೆತು ಟಿಕ್ ಟಾಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದನ್ನು ಕಂಡು ಮಾರುತಿ ಪ್ರಿಯತಮೆ ಅಂತಿಮಾ ಮೇಲೆ ಕೆಂಡಾಮಂಡಲನಾಗಿದ್ದಾನೆ. ಈ ವಿಚಾರಕ್ಕೆ ಆಕೆಯ ಜೊತೆಗೆ ಜಗಳ ಕೂಡ ಮಾಡುತ್ತಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಟಿಕ್ ಟಾಕ್ ಮಾಡುತ್ತಾ ಎಲ್ಲಿ ತನ್ನ ಪ್ರಿಯತಮೆ ನನ್ನಿಂದ ದೂರವಾಗಿ ಬಿಡುವಳೋ ಎಂಬ ಭಯದಿಂದ ಮಾರುತಿ ಆಕೆಯನ್ನು ಮುಂಬೈನಿಂದ ತನ್ನೂರಾದ ಯಾದಗಿರಿಗೆ ಕರೆದುಕೊಂಡು ಬಂದು ಬೇರೆಯವರೊಂದಿಗೆ ಟಿಕ್ ಟಾಕ್ ಮಾಡಿದ್ದರಿಂದ ಜಗಳವಾಡಿದ್ದಾನೆ. ಇದರ ಜೊತೆಗೆ ಮಾರುತಿ ಮದುವೆ ಮಾಡಿಕೊಳ್ಳಲು ಒತ್ತಾಯ ಮಾಡಿದ್ದು ಇದಕ್ಕೆ ಅಂತಿಮಾ ವರ್ಮಾ ನಿರಾಕರಿಸಿದ್ದುಇದರಿಂದ ಕೋಪಗೊಂಡ ಮಾರುತಿ ಯಾದಗಿರಿ ತಾಲೂಕಿನ ಪಂಚಶೀಲ ನಗರದ ತಾಂಡಾದ ತನ್ನ ದೊಡ್ಡಪ್ಪನ ಜಮೀನಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟೆ ಅಲ್ಲದೇ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಶವ ಒಯ್ದು ಜಮೀನಿನಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ ಎನ್ನಲಾಗಿದೆ. ಆದರೆ ಸುಟ್ಟು ಕರಕಲಾಗಿದ್ದ ಹೆಣದ ಗುರುತು ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಅಂತಿಮವಾಗಿ, ಆರೋಪಿಯನ್ನು ಪತ್ತೆ ಮಾಡುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.
ಇದನ್ನು ಓದಿ: Health Checkup for women: ಮಹಿಳೆಯರೇ ಗಮನಿಸಿ! ಈ ವೈದ್ಯಕೀಯ ತಪಾಸಣೆಗಳನ್ನು ನೀವು ಮಾಡದಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ!
