Home » Tapori Satya: ಸ್ಯಾಂಡಲ್‌ ವುಡ್‌ ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

Tapori Satya: ಸ್ಯಾಂಡಲ್‌ ವುಡ್‌ ನಟ, ನಿರ್ದೇಶಕ ಟಪೋರಿ ಸತ್ಯ ನಿಧನ

2 comments
Sandalwood actor Tapori Satya

Sandalwood actor Tapori Satya: ಸ್ಯಾಂಡಲ್‌ ವುಡ್‌ ಚಿತ್ರರಂಗಕ್ಕೆ ಮತ್ತೊಂದು ಆಘಾತ ಸಂಭವಿಸಿದೆ. ನಟ ಹಾಗೂ ನಿರ್ದೇಶಕ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಅವರಿಗೆ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಪತ್ನಿ, ಮೂವರು ಹೆಣ್ಣುಮಕ್ಕಳನ್ನ ಅಗಲಿದ್ದಾರೆ.ಟಪೋರಿ ಸತ್ಯ ಅವರು ಮನೆಗೆ ಆಧಾರವಾಗಿದ್ದರು. ಅವರ ನಿಧನದಿಂದ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ. ಬನಶಂಕರಿ ಮೂರನೇ ಹಂತದಲ್ಲಿ ಇರುವ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇನ್ನು ಅವರು ಸುಮಾರು 30ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ನಟನೆ ಜೊತೆ ನಿರ್ದೇಶನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರಿಗೆ, ಲೂಸ್ ಮಾದ ಮೊದಲ ಬಾರಿಗೆ ಯೋಗಿ ನಾಯಕನಾಗಿ ನಟಿಸಿದ್ದ ‘ನಂದ ಲವ್ಸ್ ನಂದಿತಾ’ ಇವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಈ ಸಿನಿಮಾದಲ್ಲಿ ಟಪೋರಿ ಸತ್ಯ (Sandalwood actor Tapori Satya) ಕ್ವಾಟ್ರು ಅನ್ನೋ ಪಾತ್ರದಲ್ಲಿ ನಟಿಸಿದ್ದರು.ಈ ಪಾತ್ರ ಮೂಲಕ ಚಿತ್ರರಂಗದಲ್ಲಿ ಮತ್ತಷ್ಟು ಜನಪ್ರಿಯರಾಗಿದ್ದರು.

 

ಇದನ್ನು ಓದಿ : Gola ice: ಕಲ್ಲರ್​ ಕಲ್ಲರ್​ ಗೋಲಾಗಳನ್ನು ತಿನ್ನೋ ಆಸೆನಾ? ಎಚ್ಚರ, ಎಚ್ಚರ! 

You may also like

Leave a Comment