Home » Shivamogga: ಶಿವಮೊಗ್ಗ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ ಆಹ್ವಾನಿಸಿದ ಈಶ್ವರಪ್ಪ : ಹೆಲಿಕಾಪ್ಟರ್ ಖರ್ಚು ನಾನೇ ಭರಿಸುತ್ತೇನೆ ಎಂದ ಬಿಜೆಪಿ ನಾಯಕ

Shivamogga: ಶಿವಮೊಗ್ಗ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ ಆಹ್ವಾನಿಸಿದ ಈಶ್ವರಪ್ಪ : ಹೆಲಿಕಾಪ್ಟರ್ ಖರ್ಚು ನಾನೇ ಭರಿಸುತ್ತೇನೆ ಎಂದ ಬಿಜೆಪಿ ನಾಯಕ

by Praveen Chennavara
1 comment
Shivamogga

Eshwarappa- Rahul Gandhi : ಶಿವಮೊಗ್ಗ : ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಶಿವಮೊಗ್ಗಕ್ಕೆ ಬರಬೇಕು ಎಂದು ಬಿಜೆಪಿ ನಾಯಕ,ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಬರುವುದಾದರೆ ಹೆಲಿಕಾಪ್ಟರ್‌ ಖರ್ಚನ್ನು ನಾನೇ ಭರಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು. ಅವರು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ರಾಹುಲ್‌ ಎಲ್ಲೆಲ್ಲಿ ಪ್ರಚಾರ ಮಾಡುತ್ತಾರೋ ಅಲ್ಲಿ ಕಾಂಗ್ರೆಸ್‌‌ಗೆ ಸೋಲು ನಿಶ್ಚಿತ. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಅವರು ಪ್ರಚಾರ ಮಾಡಿದ್ದರು.ಅಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿದೆ.

ಕರ್ನಾಟಕಕ್ಕೂ ಕಾಂಗ್ರೆಸ್‌ ಪರ ಪ್ರಚಾರ ನಡೆಸಲು ರಾಹುಲ್ ಪದೇ ಪದೇ ಬರಬೇಕು.ಇದರಿಂದ ಬಿಜೆಪಿಗೆ ಗೆಲುವು ಸುಲಭವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Mukesh Ambani: ಮುಖೇಶ್ ಅಂಬಾನಿ ಉದ್ಯೋಗಿಗೆ ಕೊಟ್ರು 1500 ಕೋಟಿ ರೂ. ಮನೆ ಗಿಫ್ಟ್: ಕೊಟ್ಟದ್ದು ಯಾಕ್ ಗೊತ್ತಾ ?

You may also like

Leave a Comment