Home » Film Industry: ಸಿನಿರಂಗದ ಇಬ್ಬರು ಯುವ ನಟರಿಗೆ ಬ್ಯಾನ್ ಕರೆ ; ಕಾರಣ‌ ಏನು ಗೊತ್ತಾ?

Film Industry: ಸಿನಿರಂಗದ ಇಬ್ಬರು ಯುವ ನಟರಿಗೆ ಬ್ಯಾನ್ ಕರೆ ; ಕಾರಣ‌ ಏನು ಗೊತ್ತಾ?

1 comment
Film Industry

Malayalam Film Industry: ಸಿನಿ ಕಲಾವಿದರು ಏನಾದರೊಂದು ಸುದ್ದಿಯಲ್ಲಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಮಲಯಾಳಂ (Malayalam Film Industry) ಸಿನಿಮಾದ ಇಬ್ಬರು ಯುವ ನಟರು ತಮ್ಮ‌ ಸಿನಿಜರ್ನಿಯನ್ನು ಹಾಳು ಮಾಡಿಕೊಂಡಿದ್ದಾರೆ. ಹೌದು, ನಟರಾದ ಶ್ರೀನಾಥ್ ಬಾಸಿ (Sreenath Bhasi) ಮತ್ತು ಶೇನ್ ನಿಗಮ್ (Shane Nigam) ಎನ್ನುವ ಇಬ್ಬರು ಕಲಾವಿದರಿಗೆ ನಿಷೇಧ ಹೇರಲಾಗಿದೆ. ಕಾರಣ ಏನು ಗೊತ್ತಾ?

ನಿರ್ಮಾಪಕರ ಸಂಘ ಇವರಿಬ್ಬರಿಗೆ ನಿಷೇಧ ಹೇರಿದ್ದು, ಇದಕ್ಕೆ ಕಾರಣ, ಚಿತ್ರೀಕರಣದ ಸೆಟ್ ನಲ್ಲಿ ಇವರ ವರ್ತನೆ. ಸೆಟ್ ನಲ್ಲಿ ಈ ನಟರಿಬ್ಬರು ಮಾದಕ ವ್ಯಸನದ ಗುಂಗಿನಲ್ಲಿರುತ್ತಿದ್ದರು. ಇದರಿಂದ ಚಿತ್ರತಂಡಕ್ಕೆ ಇತರರಿಗೆ ತೊಂದರೆಯಾಗುತ್ತಿತ್ತು.

ತಮ್ಮ ವರ್ತನೆ ಸರಿ ಇಲ್ಲ ಎಂದು ಎಷ್ಟೇ ಹೇಳಿದರೂ ಸರಿಪಡಿಸಿಕೊಳ್ಳದೇ ಇದ್ದಾಗ, ಸಂಘ ಎಚ್ಚರಿಕೆ ನೀಡಿದ್ದು, ಆದರೂ ಇವರಿಬ್ಬರು ಯಾವುದನ್ನೂ ಲೆಕ್ಕಕ್ಕಿಟ್ಟಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಇವರಿಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡಬಾರದು ಎಂದು ನಿರ್ಮಾಪಕರ ಸಂಘ ಮತ್ತು ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಜಂಟಿಯಾಗಿ ತೀರ್ಮಾನಿಸಿದೆ.

ಇದನ್ನೂ ಓದಿ: Gardening Tips: ಬೇಸಿಗೆಯಲ್ಲಿ ಗಿಡಗಳು ಬಾಡಿಹೋಗದಿರಲು ಈ ರೀತಿ ಆರೈಕೆ ಮಾಡಿ!!

You may also like

Leave a Comment