Home » Samantha: ಮತ್ತೆ ಆಸ್ಪತ್ರೆಗೆ ದಾಖಲಾದ ಸಮಂತಾ! ವೆಂಟಿಲೇಟರ್‌ನಲ್ಲಿರೋ ಫೋಟೋ ಕಂಡು ಅಭಿಮಾನಿಗಳಲ್ಲಿ ಆತಂಕ!

Samantha: ಮತ್ತೆ ಆಸ್ಪತ್ರೆಗೆ ದಾಖಲಾದ ಸಮಂತಾ! ವೆಂಟಿಲೇಟರ್‌ನಲ್ಲಿರೋ ಫೋಟೋ ಕಂಡು ಅಭಿಮಾನಿಗಳಲ್ಲಿ ಆತಂಕ!

by ಹೊಸಕನ್ನಡ
3 comments
Samantha

Samantha Hospitalised: ನಟಿ ಸಮಂತಾ(Samantha) ಮಯೋಸೈಟಿಸ್ ಸಮಸ್ಯೆ ಎದುರಿಸಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ!! ಇತ್ತೀಚೆಗೆ ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದ ಸಮಂತಾ ಮತ್ತೆ ನಟನೆಯಲ್ಲಿ ಬ್ಯುಸಿಯಾಗಿದ್ರು. ಆದರೆ ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿರೋ ಸಮಂತಾ ಇದೀಗ ಮತ್ತೆ ತನ್ನ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು, ನಿನ್ನೆಯವರೆಗೂ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಸಮಂತಾ ಇದ್ದಕ್ಕಿದ್ದಂತೆ ಆಸ್ಪತ್ರೆಯಲ್ಲಿ (Samantha Hospitalised) ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಸಮಂತಾ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮುಖದಲ್ಲಿ ವೆಂಟಿಲೇಟರ್‌ ರೀತಿಯದ್ದೇನೋ ಕಾಣಿಸಿಕೊಂಡಿದ್ದು, ಎಲ್ಲರೂ ಇದ್ದಕ್ಕಿದ್ದಂತೆ ಆತಂಕಗೊಂಡಿದ್ದಾರೆ. ಸಮಂತಾ ಮತ್ತೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಚರ್ಚೆಗಳು ಶುರುವಾಗಿದೆ.

ಅಂದಹಾಗೆ ಎಂದಿನಂತೆ ನಿನ್ನೆವರೆಗೂ ಸೋಷಿಯಲ್ ಮೀಡಿಯಾಗಳಲ್ಲಿ ಒಂದಿಲ್ಲೊಂದು ವಿಷಯವಾಗಿ ಸುದ್ಧಿಯಾಗುತ್ತಾ, ತನ್ನ ಬಗ್ಗೆ ಕುಹುಕ ಆಡುವವರಿಗೆ ಟಾಂಗ್ ಕೊಡುತ್ತಿದ್ದ ಸ್ಯಾಮ್, ಸದ್ಯ ಇದ್ದಕ್ಕಿದ್ದಂತೆ ಮತ್ತೆ ಟ್ರೀಟ್ ಮೆಂಟ್ ಪಡೆಯುತ್ತಿರುವಂತೆ ಕಂಡು ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ಫೋಟೋದಿಂದ ಆಘಾತಕ್ಕೊಳಗಾದ ಅಭಿಮಾನಿಗಳು ನಟಿಗೆ ಪ್ರೋತ್ಸಾಹದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.

ಇನ್ನು ಇತ್ತೀಚೆಗಷ್ಟೇ ‘ಶಾಕುಂತಲಂ’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ಸಮಂತಾ ಅವರ ಮೂವಿ ಫ್ಲಾಫ್ ಆಗಿದೆ. ಸನಣತಾ ವೃತ್ತಿಜೀವನದಲ್ಲಿ ಅವರ ಮೊದಲ ಪೌರಾಣಿಕ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಫೇಲ್ ಆಯಿತು. ಆದರೂ ಸಮಂತಾ ಯಾವುದೇ ನಿರಾಸೆಯಿಲ್ಲದೆ ತಮ್ಮ ಮುಂದಿನ ಚಿತ್ರಗಳನ್ನು ಮಾಡುತ್ತಿದ್ದಾರೆ.

ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಮಂತಾ ಗಟ್ಟಿಯಾಗುತ್ತಿದ್ದಾರೆ. ಯಾವಾಗಲೂ ಧನಾತ್ಮಕವಾಗಿ ಯೋಚಿಸಿ ವೃತ್ತಿಜೀವನದ ವಿಷಯದಲ್ಲಿ ಮುನ್ನಡೆಯುತ್ತಿದ್ದಾರೆ. ಪ್ರಸ್ತುತ ಸಮಂತಾ ರಾಜ್-ಡಿಕೆ ನಿರ್ಮಾಣದ ಸಿಟೆಡಾಲ್ ವೆಬ್ ಸಿರೀಸ್ ಮಾಡುತ್ತಿದ್ದಾರೆ. ಮತ್ತೊಂದೆಡೆ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಖುಷಿ ಸಿನಿಮಾ ಶೂಟಿಂಗ್ ಪ್ರಗತಿಯಲ್ಲಿದೆ. ಬ್ಯೂಟಿಫುಲ್ ಲವ್ ಸ್ಟೋರಿಯಾಗಿ ಮೂಡಿಬರಲಿರುವ ಈ ಚಿತ್ರದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾದ ಮೇಲೆ ಸಮಂತಾ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: A techie who left Infosys and grew aubergine : ಬದನೆಕಾಯಿ ಬೆಳೆಯಲು ಇನ್ಫೋಸಿಸ್ ಕೆಲಸವನ್ನೇ ತೊರೆದ ಟೆಕ್ಕಿ! ಅಬ್ಬಬ್ಬಾ, ಈತನ ಗಳಿಕೆ ಕೇಳಿದ್ರೆ ಶಾಕ್ ಆಗ್ತೀರಾ!

You may also like

Leave a Comment