Home » Accident: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಮದುಮಗಳು ಭೀಕರ ಅಪಘಾತಕ್ಕೆ ದಾರುಣ ಸಾವು!!!

Accident: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಮದುಮಗಳು ಭೀಕರ ಅಪಘಾತಕ್ಕೆ ದಾರುಣ ಸಾವು!!!

2 comments
Accident

Bride died in Accident : ಔರಾದ್ ತಾಲೂಕಿನ ಕೌಠಾ ಬಳಿ ಶುಕ್ರವಾರ ಸಂಜೆ ವೇಳೆಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಾಗಿದ್ದ ಯುವತಿ ಜವರಾಯನ ಸುಳಿಗೆ ಸಿಲುಕಿ ಸಾವಿನ ಮನೆಗೆ ಆಮಂತ್ರಣ ಪಡೆದ ಘಟನೆ ನಡೆದಿದ್ದು (Bride died in Accident), ಈಕೆಯ ಜೊತೆಗೆ ಆಕೆಯ ಸಹೋದರಿ ಕೂಡ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಮೇ 9ರಂದು ಶ್ರದ್ಧಾ ಜುಲ್ಫೆ ಅವರ ಮದುವೆ ನಿಗದಿಯಾಗಿದ್ದ ಹಿನ್ನೆಲೆ ತಂದೆಯಾದ ದಿಲೀಪ ಅವರು ತಮ್ಮಿಬ್ಬರು ಸುಪುತ್ರಿಯರೊಂದಿಗೆ ಮದುವೆ ಆಮಂತ್ರಣ ಪತ್ರಿಕೆ (Marriage Invitation) ಹಂಚಲು ಬೀದರ್ ನಿಂದ ಔರಾದ್‌ ತಾಲೂಕಿನ ಎಕಂಬಾ ಗ್ರಾಮಕ್ಕೆ ಬೈಕ್‌ ಮೇಲೆ ತೆರಳುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಕೌಠಾ ಸಮೀಪ ಎದುರಿಗೆ ಬಂದ ಬೊಲೇರೋ ಪಿಕಪ್ ವಾಹನ ಡಿಕ್ಕಿ (accident)ಹೊಡೆದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಶ್ರದ್ಧಾ ಮತ್ತು ಸಂಸ್ಕೃತಿಯವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ದುರ್ಘಟನೆಯ ಪರಿಣಾಮ ಭಾಲ್ಕಿ ತಾಲೂಕಿನ ನಿಟ್ಟೂರ (ಬಿ) ಗ್ರಾಮದ ಶ್ರದ್ಧಾ ಜುಲ್ಫೆ (22) ಮತ್ತು ಸಂಸ್ಕೃತಿ ಜುಲ್ಫೆ (19) ಅವರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಅವರ ತಂದೆ ದಿಲೀಪ ಜುಲ್ಫೆ ತೀವ್ರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನೂರಾರು ಕನಸು ಹೊತ್ತು ಹೊಸ ಜೀವನಕ್ಕೆ ಮುನ್ನುಡಿ ಬರೆಯಬೇಕಿದ್ದ ಯುವತಿ ಮದುವೆಗೂ ಮುನ್ನವೇ ಇಹಲೋಕ ತ್ಯಜಿಸಿದ್ದು, ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಈ ಘಟನೆಯ ಕುರಿತಂತೆ ಸಂತಪೂರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ದಂಪತಿಗಳು ಖುಷಿ ಪಡಲು ಇದೆ ವಿಶೇಷ ಕಾರಣ, ಮನೆ ಬಾಗಿಲಿಗೇ ತಲುಪಿಸಲು ಆಗಿದೆ ಹೊಸ ವ್ಯವಸ್ಥೆ !

You may also like

Leave a Comment