High heels: ಇಂದಿನ ಫ್ಯಾಷನ್ ಯುಗದಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸ್ಟೈಲಿಶ್ ಲುಕ್ ನಲ್ಲಿ ಕಾಣಲು ಇಷ್ಟ ಪಡುತ್ತಾರೆ. ಹೀಗಾಗಿ ವಿಧ-ವಿಧವಾದ ಉಡುಗೆ ತೊಡಿಗೆಯಲ್ಲಿ ಕಾಣಸಿಗುತ್ತಾರೆ. ಅದರಲ್ಲೂ ಮಹಿಳೆಯರು ಒಂದು ಕೈ ಮೇಲೆಯೇ ಅನ್ನಬಹುದು. ಫ್ಯಾಷನ್ ಅಂದಾಗ ಮಹಿಳೆಯರಿಗೆ ಮೊದಲು ನೆನಪಾಗೋದೇ ಹೀಲ್ಸ್ ಅನ್ನಬಹುದು.
ಯಾಕೆಂದರೆ ಹೆಚ್ಚಿನ ಮಹಿಳೆಯರು ಈ ಲುಕ್ ಅನ್ನು ಇಷ್ಟ ಪಡುತ್ತಾರೆ. ಆದ್ರೆ, ಹೀಲ್ಸ್ ಧರಿಸೋದು ಎಷ್ಟು ಸೂಕ್ತ ಎಂಬುದು ಮೊದಲು ತಿಳಿದುಕೊಳ್ಳೋದು ಉತ್ತಮ. ಹೌದು. ಹೈ ಹೀಲ್ಸ್(high heels) ಸಾಕಷ್ಟು ಸಮಸ್ಯೆ ಉಂಟು ಮಾಡುತ್ತದೆ. ಅದರಲ್ಲೂ ಮೂವತ್ತರ ನಂತರದ ಮಹಿಳೆಯರು ಈ ಕುರಿತು ಹೆಚ್ಚಿನ ಕಾಳಜಿ ವಹಿಸೋದು ಮುಖ್ಯ. ಹಾಗಿದ್ರೆ ಬನ್ನಿ ಹೈ ಹೀಲ್ಸ್ ಧರಿಸುವರಿಂದ ಉಂಟಾಗೋ ಸಮಸ್ಯೆಗಳ ಕುರಿತು ತಿಳಿಯೋಣ.
ಮೂವತ್ತರ ನಂತರವೂ ಹೈ ಹೀಲ್ಸ್ ಧರಿಸುತ್ತಿದ್ದರೆ, ಇದು ಮೂಳೆಯ ಆರೋಗ್ಯಕ್ಕೆ ಪರಿಣಾಮ ಬೀಳುತ್ತದೆ. ಇದರಿಂದ ಮೂಳೆಗೆ ಪೆಟ್ಟು ಮಾತ್ರವಲ್ಲದೆ, ದೇಹದ ಕೆಳಭಾಗಕ್ಕೆ ಗಂಭೀರ ಗಾಯ ಉಂಟು ಮಾಡುವ ಸಾಧ್ಯತೆಯೂ ಇದೆ. ಎತ್ತರದ ಹಿಮ್ಮಡಿಗಳು ಪಾದಗಳನ್ನು ಮಾತ್ರವಲ್ಲದೆ ನಿಮ್ಮ ಬೆನ್ನುಮೂಳೆ ಮತ್ತು ಸೊಂಟದ ಮೂಳೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
ಹೈ ಹೀಲ್ಸ್ ಧರಿಸಿದರೆ ಕಾಲುಗಳು ತೆಳ್ಳಗೆ ಮತ್ತು ಉದ್ದವಾಗಿ ಕಾಣುತ್ತವೆ. ಪಾದದ ಮುಂಭಾಗ ಚಿಕ್ಕ ಜಾಗದಲ್ಲಿ ದೀರ್ಘಕಾಲ ಇರಬೇಕಾಗುತ್ತದೆ. ಇದು ಪಾದಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪಾದಗಳು ಹೈ ಹೀಲ್ಸ್ ನೀಂದ ರಕ್ತದ ಹರಿವು ತೊಂದರೆ ಆಗುತ್ತದೆ. ಅಸ್ಥಿರಜ್ಜು ದುರ್ಬಲವಾಗುತ್ತದೆ. ಕೀಲು ನೋವು, ಅಸ್ಥಿ ಸಂಧಿವಾತ, ಮೊಣಕಾಲು ನೋವುಂಟು ಮಾಡುತ್ತದೆ. ರಕ್ತನಾಳಗಳನ್ನು ಕಿರಿದಾಗಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಕಾಲಿನ ಸಿರೆಗಳು ಏಳುತ್ತವೆ. ಇದು ಅತ್ಯಂತ ನೋವಿನಿಂದ ಕೂಡಿದೆ. ಕಣಕಾಲುಗಳಲ್ಲಿ ನೋವು ಉಂಟಾಗುತ್ತದೆ. ಹೈ ಹೀಲ್ಸ್ ಅನ್ನು ನಿಮ್ಮ ಪಾದದ ಆಕಾರಕ್ಕೆ ಅನುಗುಣವಾಗಿ ತಯಾರಿಸುತ್ತಾರೆ. ಆದರೆ ಎಲ್ಲರೂ ಒಂದೇ ಪಾದದ ಗಾತ್ರ ಮತ್ತು ಕಮಾನು ಹೊಂದಿಲ್ಲ. ಈ ಎತ್ತರದ ಶೂಗಳು ಕಣಕಾಲುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಕಾಲ್ಬೆರಳುಗಳ ನೋವಿಗೂ ಕಾರಣವಾಗುತ್ತದೆ.
ಗಂಟೆಗಟ್ಟಲೇ ಹೀಲ್ಸ್ ಧರಿಸಿ ನೃತ್ಯ ಮತ್ತು ಇತರೆ ದೈಹಿಕ ಚಟುವಟಿಕೆ ಮಾಡುವುದರಿಂದ ಪಾದಗಳನ್ನು ಹೆಚ್ಚು ಘಾಸಿಗೊಳಿಸುತ್ತದೆ. ವಿಶೇಷವಾಗಿ 30 ವರ್ಷ ವಯಸ್ಸಿನ ನಂತರ ನೀವು ಹೈ ಹೀಲ್ಸ್ ಧರಿಸುವುದು ಹೆಚ್ಚು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಲವು ಸಮಸ್ಯೆ ಉಂಟು ಮಾಡುತ್ತದೆ.
ಇದನ್ನೂ ಓದಿ: ನಿದ್ರೆಯ ಗುಣಮಟ್ಟದ ಕುರಿತು ಅಧ್ಯಯನ : ಈ ರೀತಿ ಮಲಗೋದ್ರಿಂದ ಹೆಚ್ಚು ವರ್ಷ ಬದುಕಬಹುದು ಅನ್ನುತ್ತಾರೆ ತಜ್ಞರು!
