Home » Divorce photoshoot: ಡಿವೋರ್ಸ್ ಫೋಟೋಶೂಟ್​ ಮಾಡಿಸಿದ ನಟಿ! ಪತಿಯ ಫೋಟೋ ಹರಿದು, ಕಾಲಲ್ಲಿ ಹೊಸಕಿ ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ’ ಅಂದ್ಲು

Divorce photoshoot: ಡಿವೋರ್ಸ್ ಫೋಟೋಶೂಟ್​ ಮಾಡಿಸಿದ ನಟಿ! ಪತಿಯ ಫೋಟೋ ಹರಿದು, ಕಾಲಲ್ಲಿ ಹೊಸಕಿ ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ’ ಅಂದ್ಲು

by ಹೊಸಕನ್ನಡ
1 comment
Divorce photoshoot

Divorce photoshoot: ಇತ್ತೀಚಿನ ದಿನಗಳಲ್ಲಿ ಮದುವೆಯ (Wedding) ಮುಂಚೆ ಪ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್‍ಗಳು ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಹೆಚ್ಚಾಗಿ ಹೇಳುವುದಾದರೆ ಅದೊಂದು ಮದುವೆಯ ಭಾಗವೇ ಎನ್ನುವಂತಾಗಿದೆ. ಆದರೆ ಇಲ್ಲೊಂದೆಡೆ ಮಹಿಳೆಯೊಬ್ಬಳು ಗಂಡನಿಂದ ವಿಚ್ಛೇದನ (Divorce) ಪಡೆದಿದ್ದು, ಅದನ್ನು ಸಂಭ್ರಮಿಸಲು ಫೋಟೋಶೂಟ್ (Divorce photoshoot) ಮಾಡಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಅದು ಸಾಕಷ್ಟು ವೈರಲ್ ಆಗುತ್ತಿದೆ.

ಹೌದು, ಅಂದಹಾಗೆ ಫ್ಯಾಷನ್ ಡಿಸೈನರ್ ಹಾಗೂ ನಟಿಯೂ ಆಗಿರುವ ಶಾಲಿನಿ ಎಂಬಾಕೆ ವಿಚ್ಛೇದನ ಪಡೆದಿದ್ದಕ್ಕೆ ಈ ರೀತಿಯ ವಿಶೇಷವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಈಕೆ ಅದರಲ್ಲಿ ವಿಚ್ಛೇದಿತ ಮಹಿಳೆಯ ಸಂದೇಶವನ್ನೂ ತಿಳಿಸಿದ್ದಾಳೆ. ಐರಿಸ್ ಫೋಟೋಗ್ರಫಿ ಎನ್ನುವ ಸಂಸ್ಥೆ ಈ ಫೋಟೋಶೂಟ್ ನಡೆಸಿದ್ದು, ವಿಚ್ಛೇದನವನ್ನೂ ಸಂಭ್ರಮಿಸುತ್ತಿರುವ ಈ ಮಹಿಳೆಯ ಫೋಟೋಗಳು ವೈರಲ್ ಆಗಲಾರಂಭಿಸಿವೆ.

ಅಂದಹಾಗೆ ಸೋಷಿಯಲ್ ಮೀಡಿಯಾಗಳಲ್ಲಿ ಶಾಲಿನಿ ಅವರು ತೆಗಿಸಿಕೊಂಡ 4 ಫೋಟೋಗಳು ಹರಿದಾಡುತ್ತಿವೆ. ಒಂದರಲ್ಲಿ ‘ಡೈವೋರ್ಸ್ಡ್’ ಎಂಬ ಫಲಕ ಹಿಡಿದಿದ್ದಾರೆ. ಎರಡನೇ ಪೋಟೋದಲ್ಲಿ ಪತಿಯೊಂದಿಗೆ ಇದ್ದ ಫೋಟೋದಲ್ಲಿನ ಪತಿಯ ಮುಖದ ಭಾಗವನ್ನು ಹರಿದು ಪ್ರತ್ಯೇಕಿಸುತ್ತಿದ್ದಾರೆ. ಮೂರನೇ ಫೋಟೋದಲ್ಲಿ ಪತಿ-ಪತ್ನಿ ಇಬ್ಬರೂ ಜೊತೆಗಿದ್ದ ಫೋಟೋವನ್ನು ಚಪ್ಪಲಿ ಕಾಲಿನಲ್ಲಿ ತುಳಿದು ಹೊಸಕಿ ಹಾಕಿದ್ದಾರೆ ಹಾಗೂ ಕೊನೆಯದರಲ್ಲಿ ‘ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!’ ಎಂಬ ಫಲಕವನ್ನು ಹಿಡಿದಿದ್ದಾರೆ.

ಹೀಗೆ ಸಂತಸದಿಂದ ಬೀಗುವಂಥ ಫೋಟೋ ಮೂಲಕ ಶಾಲಿನಿ ಅವರು ‘ಪತಿ ಎಂಬ ಒಂದು ಸಮಸ್ಯೆಯನ್ನು ನಿವಾರಿಸಿಕೊಂಡಿದ್ದೇನೆ’ ಎಂಬ ಸಂದೇಶವನ್ನೂ ಸಾರಿದ್ದಾರೆ. ಆ ಸಂದೇಶಗಳು ಹೀಗಿವೆ.

• ವಿಚ್ಛೇದನವು ವೈಫಲ್ಯವಲ್ಲ!!! ಇದು ನಿಮಗೆ ಒಂದು ತಿರುವು ಮತ್ತು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ.
• ಕೆಟ್ಟ ವಿವಾಹವನ್ನು ಬಿಡುವುದು ಸರಿ. ಏಕೆಂದರೆ ನೀವು ಸಂತೋಷವಾಗಿರಲು ಅರ್ಹರು ಮತ್ತು ಎಂದಿಗೂ ಸಣ್ಣತನದಲ್ಲಿ ನೆಲೆಸುವುದಿಲ್ಲ. ನಿಮ್ಮ ಜೀವನದ ಮೇಲೆ ನಿಯಂತ್ರಣ ಸಾಧಿಸಿ ಮತ್ತು ನಿಮಗಾಗಿ ಹಾಗೂ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರಚಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಿ.
• ಮದುವೆಯನ್ನು ತೊರೆದು ಏಕಾಂಗಿಯಾಗಿ ನಿಲ್ಲಲು ಸಾಕಷ್ಟು ಧೈರ್ಯ ಬೇಕು. ಆದ್ದರಿಂದ ನನ್ನ ಎಲ್ಲ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಪ್ರೀತಿಯಿಂದ ಅರ್ಪಿಸುತ್ತೇನೆ.

 

ಇದನ್ನು ಓದಿ: Boy Earned 100 Crores: ಕೇವಲ 23 ರ ವಯಸ್ಸಿಗೆ 100 ಕೋಟಿ ಒಡೆಯನಾದ ಹುಡುಗ, ಹೇಗೆ ಅಂತೀರಾ, ಈ ಸ್ಟೋರಿ ಓದಿ !

You may also like

Leave a Comment