Divorce photoshoot: ಮದುವೆಗೂ ಮುನ್ನ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ನಲ್ಲಿದೆ. ಆದರೆ ವಿಚ್ಛೇದನ ಆಗಿದ್ದನ್ನು ಸಂಭ್ರಮಿಸಲು ತಮಿಳಿನ ಖ್ಯಾತ ಕಿರುತೆರೆ ನಟಿ (Actress) ಶಾಲಿನಿ (Shalini) ಡಿವೋರ್ಸ್ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಹಾಗಾದರೆ, ಈ ಶಾಲಿನಿ ಯಾರು? ಯಾರನ್ನು ಮದುವೆಯಾಗಿದ್ದರು ಎನ್ನುವ ಕುರಿತು ನಿಮಗೇನಾದರೂ ಗೊತ್ತಿದೆಯಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಹೌದು, ‘ಪತಿಯ ತೊಂದರೆಯಿಂದ ಮುಕ್ತ’ ಎಂಬರ್ಥ ಬರುವ ರೀತಿಯಲ್ಲಿ ಶಾಲಿನಿ ಅವರು ಫೋಟೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ಧ್ವನಿ ಇಲ್ಲದವರಿಗೆ ವಿಚ್ಛೇದಿತ ಮಹಿಳೆಯ ಸಂದೇಶ. ಕೆಟ್ಟ ದಾಂಪತ್ಯವನ್ನು ಬಿಟ್ಟುಬಿಡಬೇಕು. ಏಕೆಂದರೆ ನೀವು ಸಂತೋಷವಾಗಿರಲು ಅರ್ಹರಾಗಿದ್ದೀರಿ. ನಿಮಗಾಗಿ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲು ಬದಲಾವಣೆ ಅತ್ಯಗತ್ಯ. ವಿಚ್ಛೇದನ ಅನ್ನೋದು ನಿಮ್ಮ ವಿಫಲತೆ ಅಲ್ಲ. ವಿಚ್ಛೇದನದಿಂದ ನಿಮ್ಮ ಬದುಕಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ. ವೈವಾಹಿಕ ಜೀವನ ಬಿಟ್ಟು ಒಬ್ಬಂಟಿಯಾಗಿ ನಿಲ್ಲಲು ಸಾಕಷ್ಟು ಧೈರ್ಯ ಬೇಕು. ವಿಚ್ಛೇದನ ಪಡೆದ ಧೈರ್ಯಶಾಲಿ ಮಹಿಳೆಯರಿಗೆ ನಾನು ಇದನ್ನು ಅರ್ಪಿಸುತ್ತಿದ್ದೇನೆ’ ಎಂದು ಅವರು ಬರೆದುಕೊಂಡ ಅವರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಫೋಟೋಗಳನ್ನು ಹರಿಬಿಟ್ಟಿದ್ದರು.
ಅಂದಹಾಗೆ ಶಾಲಿನಿ ಹಲವು ವರ್ಷಗಳಿಂದ ತಮಿಳಿನ ಕಿರುತೆರೆಯಲ್ಲಿ ನಟಿಯಾಗಿ ಸಕ್ರೀಯರಾಗಿದ್ದಾರೆ. ಸಾಕಷ್ಟ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರೂ, ಫೇಮಸ್ ಆಗಿದ್ದು ‘ಮುಲ್ಲಮ್ ಮರುಲಮ್’ ಧಾರಾವಾಹಿ ಮೂಲಕ. ಮೂರು ವರ್ಷಗಳ ಹಿಂದೆಯಷ್ಟೇ ರಿಯಾಜ್ (Riyaz) ಎನ್ನುವವರ ಜೊತೆ ಮದುವೆಯಾಗಿದ್ದರು. ತಮಗೆ ಗಂಡನಿಂದ ದೈಹಿಕ ಕಿರುಕುಳ ಆಗುತ್ತಿದೆ ಎಂದು ಆರೋಪ ಮಾಡಿದ್ದರು. ಸೂಪರ್ ಮಾಮ್ ರಿಯಾಲಿಟಿ ಶೋನಲ್ಲಿ ಹಲವು ವಿಚಾರಗಳನ್ನೂ ಅವರು ಹಂಚಿಕೊಂಡಿದ್ದರು.
ಶಾಲಿನಿ ಮತ್ತು ರಿಯಾಜ್ ದಂಪತಿಗೆ ಒಂದು ಮಗು ಕೂಡ ಇದೆ. 2020 ಜೂನ್ ಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಕೇವಲ ಎರಡೂವರೆ ವರ್ಷದಲ್ಲೇ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದ್ದಾರೆ. ಇದೀಗ ಶಾಲಿನಿ ರಿಯಾಜ್ ಅವರಿಂದ ವಿಚ್ಚೇದನ ಪಡೆದುಕೊಂಡಿದ್ದು ,ಆ ಸಂಭ್ರಮವನ್ನು ಫೋಟೋಶೂಟ್ ಮೂಲಕ ವ್ಯಕ್ತ ಪಡಿಸಿದ್ದರು. ಆ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು.
ಸೋಶಿಯಲ್ ಮೀಡಿಯಾದಲ್ಲಿ ಶಾಲಿನಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಸದ್ಯ ಅವರು ಹಂಚಿಕೊಂಡಿರುವ ಈ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ಈ ಫೋಟೋಶೂಟ್ (Photoshoot)ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದರೆ, ಇನ್ನೂ ಹಲವರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಟಿಯನ್ನು ಬಹುತೇಕರು ಟೀಕೆ ಮಾಡಿದ್ದಾರೆ. ‘ವಿಚ್ಛೇದನ ಮಾಡಿಕೊಂಡಿದ್ದನ್ನು ಈ ರೀತಿ ಸಂಭ್ರಮಿಸುವ ಅಗತ್ಯ ಇತ್ತೇ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ನಟಿಯನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಬೆಂಡೆಕಾಯಿ ಲೋಳೆಯಾಗದಂತೆ ಅಡುಗೆ ಮಾಡಲು, ಈ ಟಿಪ್ಸ್ ಫಾಲೋ ಮಾಡಿ !
