Home » Baburao Chinchanasur: ಮತದಾರೇ ನನಗೆ ವೋಟ್ ಮಾಡದಿದ್ರೆ ನಾನು, ನನ್ನ ಹೆಂಡತಿ ವಿಷ ಕುಡಿಯುತ್ತೇವೆ: ಬಾಬುರಾವ್‌ ಚಿಂಚನಸೂರ್‌

Baburao Chinchanasur: ಮತದಾರೇ ನನಗೆ ವೋಟ್ ಮಾಡದಿದ್ರೆ ನಾನು, ನನ್ನ ಹೆಂಡತಿ ವಿಷ ಕುಡಿಯುತ್ತೇವೆ: ಬಾಬುರಾವ್‌ ಚಿಂಚನಸೂರ್‌

by ಹೊಸಕನ್ನಡ
1 comment
Baburao Chinchanasur

Baburao Chinchanasur: ‘ಮತದಾರ ಪ್ರಭುಗಳೇ ನೀವು ನನಗೆ ವೋಟ್​ ಹಾಕದಿದ್ದರೆ, ನಾನು, ನನ್ನ ಹೆಂಡತಿ ವಿಷ ಕುಡಿಯುತ್ತೇವೆ’ ಅಬ್ಬಬ್ಬಾ ಹೀಗೂ ಮತ ಕೇಳುತ್ತಾರಾ ಎಂದು ನೀವು ಹುಬ್ಬೇರಿಸಬಹುದು. ಆದರೆ ನಿಜವಾಗಿಯೂ ನಮ್ಮ ಉತ್ತರ ಕರ್ನಾಟಕ ಕ್ಷೇತ್ರದ ಮತದಾರರೊಬ್ಬರು ಹೀಗೆ ಮತಯಾಚನೆ ಮಾಡಿದ್ದಾರೆ.

ಹೌದು, ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಗುರುಮಠಕಲ್(Gurumatakal) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ್‌(Baburao Chinchanasur) ಹಾಗೂ ಅವರ ಪರ ಪತ್ನಿ ಪ್ರಚಾರಕ್ಕೆ ಇಳಿದಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡುವಾಗ ಬಾಬುರಾವ್‌ ಚಿಂಚನಸೂರ್ ಅವರು “ಮತದಾರ ಪ್ರಭುಗಳೇ ನೀವು ನನಗೆ ವೋಟ್​ ಹಾಕದಿದ್ದರೆ, ನಾನು, ನನ್ನ ಹೆಂಡತಿ ವಿಷ ಕುಡಿಯುತ್ತೇವೆ” ಎಂದು ಹೇಳುವ ಮೂಲಕ ಕಣ್ಣೀರಿಟ್ಟಿದ್ದಾರೆ.

ಬಾಬುರಾವ್ ಅವರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವುದರಿಂದ ಅವರ ಪತ್ನಿ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಶೇಕಡಾ 50ರಷ್ಟು ಚೇತರಿಸಿಕೊಂಡಿದ್ದೇನೆ, ಇನ್ನು 6 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ನೀವು ವೀಲ್‌ ಚೇರ್‌ ಮೇಲೂ ಕೂಡ ಹೋಗುವಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ನನ್ನ ಪತ್ನಿ ಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ ಮತದಾರ ದೇವರುಗಳು ಆಶೀರ್ವಾದ ಮಾಡಲಿಲ್ಲ ಅಂದರೆ ನಾನು ಮತ್ತು ನನ್ನ ಹೆಂಡತಿ ವಿಷ ಕುಡಿದು ಸಾಯುತ್ತೇವೆ ಎಂದು ಹೇಳುವ ಮೂಲಕ ಕಣ್ಣೀರಿಟ್ಟಿದ್ದಾರೆ.

ಅಂದಹಾಗೆ ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಗುರುಮಿಠಕಲ್ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. ಇನ್ನು ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಚಿಂಚನಸೂರ್‌ ಅವರು 2008, 2013ರಲ್ಲಿ ಸತತ ಎರಡು ಬಾರಿ ಜಯ ಸಾಧಿಸಿ, 2018ರಲ್ಲಿ ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದರು. ನಂತರ ಅನೇಕ ಕಸರತ್ತುಗಳ ಮೂಲಕ ಬಿಜೆಪಿ ಸೇರಿದ್ದ ಅವರು, ಅಲ್ಲಿ ಮುನಿಸಿಕೊಂಡು ಮರಳಿ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಈ ಬಾರಿ ಗೆಲುವು ಸಾಧಿಸಲು ಇನ್ನಿಲ್ಲದ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ:  ವೋಟರ್ ಐಡಿ ಕಳೆದು ಹೋಗಿದ್ದರೆ ಚಿಂತೆ ಬೇಡ! ಹೀಗೆ ಡುಪ್ಲಿಕೇಟ್ ಐಡಿ ಪಡೆದುಕೊಳ್ಳಿ!

You may also like

Leave a Comment