Home » Pooja Dadlani salary: ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಾದ್ಲಾನಿ ಕೋಟಿ ಲೆಕ್ಕದ ಸಂಬಳ ಕೇಳಿದ್ರೆ ನೀವ್ ಪಕ್ಕಾ ಶಾಕ್, ಅಷ್ಟಕ್ಕೂ ಆಕೆ ಮಾಡೋ ಕೆಲ್ಸ ಏನು ಗೊತ್ತಾ ?

Pooja Dadlani salary: ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದಾದ್ಲಾನಿ ಕೋಟಿ ಲೆಕ್ಕದ ಸಂಬಳ ಕೇಳಿದ್ರೆ ನೀವ್ ಪಕ್ಕಾ ಶಾಕ್, ಅಷ್ಟಕ್ಕೂ ಆಕೆ ಮಾಡೋ ಕೆಲ್ಸ ಏನು ಗೊತ್ತಾ ?

2 comments
Pooja dadlani salary

Pooja Dadlani Salary: ನಟ ಶಾರುಖ್ ಖಾನ್ (Shah Rukh Khan) ಮ್ಯಾನೇಜರ್ ಪೂಜಾ ದದ್ಲಾನಿ ಶಾರುಖ್ ಮ್ಯಾನೇಜ್ ಮಾಡಬೇಕಾದ ಎಲ್ಲಾ ವಿಚಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಪೂಜಾ 2012 ರಿಂದ ಶಾರುಖ್ ಖಾನ್ ಅವರ ಮ್ಯಾನೇಜರ್ ಆಗಿದ್ದಾರೆ. ಅವರು ಸೂಪರ್‌ಸ್ಟಾರ್ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಅಲ್ಲದೆ, ಪೂಜಾ ಅವರು SRK ಅವರ ಕ್ರಿಕೆಟ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸಹ ನಿರ್ವಹಿಸುತ್ತಿದ್ದಾರೆ.
ಪೂಜಾ ದದ್ಲಾನಿ (Pooja Dadlani) ಆಗರ್ಭ ಶ್ರೀಮಂತೆಯೂ ಹೌದು. ಇವರಿಗೆ ವರ್ಷಕ್ಕೆ ಸಿಗೋ ಸಂಭಾವನೆ (Pooja Dadlani Salary) ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!!.

ಪೂಜಾ ದದ್ಲಾನಿ ಅವರಿಗೆ ವರ್ಷಕ್ಕೆ 7-9 ಕೋಟಿ ರೂಪಾಯಿ ಸಂಭಾವನೆ ಸಿಗುತ್ತದೆ. ಅವರ ಒಟ್ಟು ಆಸ್ತಿ ಬರೋಬ್ಬರಿ 45 ಕೋಟಿ ರೂಪಾಯಿಗಿಂತ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಪೂಜಾ ದದ್ದಾನಿ ಮುಂಬೈನಲ್ಲಿರುವ ಲಿಸ್ಟಾ ಜ್ಯುವೆಲ್ಸ್‌ನ ನಿರ್ದೇಶಕ ಹಿತೇಶ್ ಗುರ್ನಾನಿ ಅವರನ್ನು 2008ರಲ್ಲಿ ಮದುವೆಯಾಗಿದ್ದಾರೆ. ದಂಪತಿಗೆ ರೆಯಾ ಎಂಬ ಪುತ್ರಿಯಿದ್ದಾಳೆ. ಇತ್ತೀಚೆಗೆ ಪೂಜಾ ಬಾಂದ್ರಾದಲ್ಲಿ ಮನೆ ಖರೀದಿಸಿದ್ದಾರೆ. ಈ ಮನೆಯ ಒಳಭಾಗವನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರೇ ಡಿಸೈನ್ ಮಾಡಿದ್ದಾರೆ.

2021ರಲ್ಲಿ ಆರ್ಯನ್ ಖಾನ್ ಅವರು ಡ್ರಗ್ ಕೇಸ್​ನಲ್ಲಿ ಸಿಕ್ಕಿ ಬಿದ್ದರು. ಆರ್ಯನ್ ಖಾನ್​ಗೆ (Aryan Khan) ಜಾಮೀನು ಕೊಡಿಸಲು ಮುಂದೆ ನಿಂತು ಪ್ರಯತ್ನಪಟ್ಟಿದ್ದರು. ಶಾರುಖ್ ಖಾನ್ ಕುಟುಂಬಕ್ಕೆ ಪೂಜಾ ದದ್ದಾನಿ ಎಷ್ಟು ಆಪ್ತರು ಅಂದ್ರೆ, ಆರ್ಯನ್ ಖಾನ್ ಅರೆಸ್ಟ್ ಆದಾಗ ಪೂಜಾ ದದ್ದಾನಿ ಕಣ್ಣೀರಿಟ್ಟಿದ್ದರು. ಸಂಕಷ್ಟದ ಸಮಯದಲ್ಲಿ ಶಾರುಖ್, ಗೌರಿ, ಜೊತೆ ಪೂಜಾ ನಿಂತಿದ್ದರು.

ಶಾರುಖ್ ಖಾನ್ ಅವರ ಕೆಕೆಆರ್ (KKR) ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೇನೆಂಟ್‌ನ ವ್ಯವಹಾರಗಳನ್ನೂ ಪೂಜಾ ದಜ್ಞಾನಿ ನೋಡಿಕೊಳ್ಳುತ್ತಾರೆ. ಶಾರುಖ್ ಖಾನ್ ಅವರು ಅನೇಕ ಬ್ರ್ಯಾಂಡ್​ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಪೂಜಾ ಅವರೇ ನೋಡಿಕೊಳ್ಳುತ್ತಾರೆ. ಒಟ್ಟಾರೆ ಶಾರುಖ್ ನ ವಿಶ್ವಾಸಾರ್ಹ ಹಿತೈಷಿ ಎಂದರೆ ಪೂಜಾ.

 

ಇದನ್ನೂ ಓದಿ: ಒಲಂಪಿಕ್‌ ಚಿನ್ನದ ಪದಕ ವಿಜೇತೆ, ಅಮೇರಿಕನ್‌ ಓಟಗಾರ್ತಿ ಟೋರಿ ಬೋವಿ ಶವವಾಗಿ ಪತ್ತೆ!

You may also like

Leave a Comment