Home » PM Modi Karnataka Assembly Election: ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ 26 ಕಿಲೋಮೀಟರ್ ರೋಡ್ ಶೋನಲ್ಲಿ ಕಾಣಿಸಿಕೊಂಡ ‘ಬಜರಂಗಬಲಿ’

PM Modi Karnataka Assembly Election: ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ 26 ಕಿಲೋಮೀಟರ್ ರೋಡ್ ಶೋನಲ್ಲಿ ಕಾಣಿಸಿಕೊಂಡ ‘ಬಜರಂಗಬಲಿ’

by Mallika
1 comment
PM Modi Karnataka Assembly Election

 

Karnataka assembly election: ಕರ್ನಾಟಕ ವಿಧಾನಸಭಾ ಚುನಾವಣೆ(Karnataka assembly election) ಪ್ರಚಾರ ಬಹಳ ಬಿರುಸಿನಿಂದ ಸಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೆಗಾ ರೋಡ್‌ ಶೋ ನಡೆಸುತ್ತಿದ್ದಾರೆ. ಈ ರೋಡ್‌ ಶೋ 26 ಕಿ.ಮೀ. ನಷ್ಟು ಸಾಗಲಿದೆ. ಈ ಸಂದರ್ಭದಲ್ಲಿ ರೋಡ್‌ ಶೋ ಸಮಯದಲ್ಲಿ ವ್ಯಕ್ತಿಯೊಬ್ಬ ಭಜರಂಗ ಬಲಿಯ ವೇಷದಲ್ಲಿ ಕಾಣಿಸಿಕೊಂಡಿದ್ದು, ಮತ್ತೊಂದು ಕಡೆ ರಸ್ತೆಯ ಇಕ್ಕೆಲಗಳಲ್ಲಿ ಭಾರೀ ಸಂಖ್ಯೆಯ ಜನರು ಇದ್ದು, ಮೋದಿ ಮೋದಿ ಎಂಬ ಘೋಷಣೆಗಳನ್ನು ಮಾಡುತ್ತಾ ಪುಷ್ಪವೃಷ್ಟಿ ಮಾಡುತ್ತಾ, ಪ್ರಧಾನಿಗೆ ಜಯಘೋಷಗಳನ್ನು ಹಾಕುತ್ತಾ ಸ್ವಾಗತಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಕುರಿತು ಹೇಳಿತ್ತು. ಈ ವಿಷಯವನ್ನು ಬಿಜೆಪಿ ಬಹಳವಾಗಿ ಖಂಡಿಸಿತ್ತು. ಈ ವಿಷಯ ಕುರಿತು ಪ್ರಧಾನಿ ಮೋದಿ ಸಹಿತ ಹಲವಾರು ರಾಜಕೀಯ ವ್ಯಕ್ತಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದರು.

ಪ್ರಧಾನಿ ಮೋದಿ ಅವರು ಈ ರೋಡ್‌ ಶೋ ನಂತರ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಬಾದಾಮಿಯಲ್ಲಿ ಮೊದಲ ಸಾರ್ವಜನಿಕ ಸಭೆ ಹಾಗೂ ಸಂಜೆ ಐದು ಗಂಟೆ ಹಾವೇರಿಯಲ್ಲಿ ಎರಡನೇ ಸಾರ್ವಜನಿಕ ಸಭೆ ಇದೆ. ಪ್ರಧಾನಿ ಮೋದಿಯವರು ಇಂದು ಬೆಂಗಳೂರಿನ ರಾಜಭವನದಲ್ಲೇ ಉಳಿದುಕೊಳ್ಳಲಿದ್ದಾರೆ. ಹಾಗೂ ಭಾನುವಾರ ಮತ್ತೊಮ್ಮೆ ರೋಡ್‌ ಶೋನಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:  ಈ ಬಾರಿಯ ಏಕದಂತ ಸಂಕಷ್ಟ ಚತುರ್ಥಿ ಯಾವಾಗ? ಪೂಜೆಯ ವಿಧಾನದ ಮಾಹಿತಿ ನಿಮಗಾಗಿ ಇಲ್ಲಿದೆ!

You may also like

Leave a Comment