Mallikarjuna Kharge: ಬೆಂಗಳೂರು: ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಹೊಣೆ ಹೊರಲು ತಾನು ಸಿದ್ಧ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅವರು ಇಂಡಿಯಾ ಟುಡೇ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಕಾಂಗ್ರೆಸ್ ಸೋತರೆ ನಾನು ಯಾವುದೇ ಹೊಣೆ ಹೊರಲು ಸಿದ್ಧ, ಆದರೆ ಕಾಂಗ್ರೆಸ್ ಗೆಲ್ಲಬೇಕು’ ಎಂದು ಹೇಳಿದ್ದಾರೆ.
ಈ ಬಾರಿ ನಮಗೆ ಸ್ಪಷ್ಟ ಬಹುಮತ ಸಿಗಲಿದೆ. ನಾವು ಸ್ಥಿರ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಖರ್ಗೆ (Mallikarjuna Kharge) ಅವರು,ತಾವು ಸತತ ಚುನಾವಣಾ ರ‌್ಯಾಲಿಗಳಲ್ಲಿ ಭಾಗವಹಿಸುತ್ತಿರುವ ಬಗ್ಗೆ ಮಾತನಾಡಿದ ಖರ್ಗೆ, “ಇಚ್ಛಾಶಕ್ತಿ ಮತ್ತು ಬದ್ಧತೆ ಇರಬೇಕು. ನಾನು ಪ್ರತಿನಿತ್ಯ ನಾಲ್ಕು ಸಭೆಗಳನ್ನು ನಡೆಸುತ್ತೇನೆ.
ಕೆಲವೊಮ್ಮೆ ಸಂಜೆಯ ಸಭೆಗೆ ಹಾಜರಾಗಲು ನಾನು 100 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ನಾವು ಬಿಜೆಪಿಯನ್ನು ಸೋಲಿಸಲು ನಿರ್ಧರಿಸಿದ್ದೇವೆ ಆದ್ದರಿಂದ ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.
