Home » PM Modi Road Show: ಎರಡನೇ ದಿನದ ಪ್ರಧಾನಿ ಮೋದಿ ರೋಡ್‌ ಶೋ ವಿವರ ಇಲ್ಲಿದೆ ! ಇಂದು ಈ ರಸ್ತೆಗಳೆಲ್ಲ ಬಂದ್‌

PM Modi Road Show: ಎರಡನೇ ದಿನದ ಪ್ರಧಾನಿ ಮೋದಿ ರೋಡ್‌ ಶೋ ವಿವರ ಇಲ್ಲಿದೆ ! ಇಂದು ಈ ರಸ್ತೆಗಳೆಲ್ಲ ಬಂದ್‌

by Mallika
1 comment
PM Modi Road Show

Second Day Road Show: ಬೆಂಗಳೂರಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ದಿನದ ರೋಡ್‌ ಶೋ (Second Day Road Show) ನಡೆಯಲಿದೆ. ಇಂದು ಬೆಳಗ್ಗೆ ಹತ್ತು ಗಂಟೆಗೆ ಈ ರೋಡ್‌ ಶೋ ಆರಂಭವಾಗಲಿದ್ದು. ಇದು ಸುಮಾರು 6.5ಕಿ.ಮೀ. ವರೆಗೆ ಈ ಮೆರವಣಿಗೆ ನಡೆಯಲಿದೆ. ಎಚ್‌ಎಎಲ್‌ ಬಳಿಯ ಸುರಂಜನ್‌ ದಾಸ್‌ ರಸ್ತೆ ಮೂಲಕ ಈ ಅಬ್ಬರದ ರೋಡ್‌ ಶೋ ಪ್ರಾರಂಭವಾಗಲಿದೆ. ಹಾಗಾಗಿ 20 ರಸ್ತೆಗಳಲ್ಲಿ ಪೊಲೀಸರು ಸಂಚಾರ ನಿರ್ಬಂಧ ಮಾಡಿದೆ. ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ತನಕ ಬದಲಿ ಮಾರ್ಗ ಬಳಸು ಸೂಚಿಸಲಾಗಿದೆ. ಇಂದು ಬೆಳಗ್ಗೆ 10ಕ್ಕೆ ಆರಂಭವಾಗಲಿರುವ ರೋಡ್‌ ಶೋ 11.30 ಕ್ಕೆ ಮುಕ್ತಾಯಗೊಳ್ಳಲಿದೆ.

ರಾಜಭವನಕ್ಕೆ ರಸ್ತೆ, ಮೇಖ್ರಿ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ, ಸುರಂಜನ್ ದಾಸ್ ರಸ್ತೆ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಜಗದೀಶ ನಗರ ಕ್ರಾಸ್,ಬಿಇಎಂಎಲ್ ಕ್ರಾಸ್, ಜೆ ಬಿ ನಗರ ರಸ್ತೆ, ಇಂದಿರಾನಗರ, ನ್ಯೂ ತಿಪ್ಪಸಂದ್ರ, ಸಿಎಂಎಚ್ ರಸ್ತೆ, ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ಮತ್ತು ಟ್ರಿನಿಟಿ ಸರ್ಕಲ್​ ಇಲ್ಲಿನ ರಸ್ತೆಗಳು ಬಂದ್‌ ಆಗಲಿವೆ ಇಂದು.

ಇಂದು ಬೆಳಗ್ಗೆ 9.30ಕ್ಕೆ ರಾಜಭವನದಿಂದ HQTC ಹೆಲಿಪ್ಯಾಡ್‌ನಿಂದ ಪ್ರಯಾಣ ಮಾಡಲಿದ್ದಾರೆ. HAL ವಿಮಾನ ನಿಲ್ದಾಣ ತಲುಪಿದ ನಂತರ ಸುರಂಜನ್‌ ದಾಸ್‌ ಸರ್ಕಲ್‌ನಿಂದ ರೋಡ್‌ ಶೋ ಪ್ರಾರಂಭವಾಗಲಿದೆ.

ಇಂದು ನಡೆಯುವ ರೋಡ್‌ ಶೋ ವೇಳಾಪಟ್ಟಿ ಈ ರೀತಿ ಇದೆ;
ಬೆಳಗ್ಗೆ 10 ಗಂಟೆ: ಕೆಂಪೇಗೌಡ ಪ್ರತಿಮೆ, ನ್ಯೂ ತಿಪ್ಪಸಂದ್ರ ರಸ್ತೆ
ಬೆಳಗ್ಗೆ 10.15: HAL 2ನೇ ಹಂತ, 80 ಅಡಿ ರಸ್ತೆ ಜಂಕ್ಷನ್
ಬೆಳಗ್ಗೆ 10:25: HAL 2ನೇ ಹಂತ, 12ನೇ ಮುಖ್ಯ ರಸ್ತೆ ಜಂಕ್ಷನ್
ಬೆಳಗ್ಗೆ 10:35: 100 ಫೀಟ್ ರೋಡ್ ಜಂಕ್ಷನ್
ಬೆಳಗ್ಗೆ 10:50: ಇಎಸ್​ಐ ಆಸ್ಪತ್ರೆ ರಸ್ತೆ
ಬೆಳಗ್ಗೆ 11:10: ಮೆಟ್ರೋ ಪಿಲ್ಲರ್ 76, ಸಿಎಂಹೆಚ್ ರಸ್ತೆ
ಬೆಳಗ್ಗೆ 11:20: ಹಲಸೂರು ಮೆಟ್ರೋ ಸ್ಟೇಷನ್
ಬೆಳಗ್ಗೆ 11:30: ಟ್ರಿನಿಟಿ ಸರ್ಕಲ್

ಇದನ್ನೂ ಓದಿ:ನೋ-ಫಾಲ್ಟ್ ವಿಚ್ಛೇದನ ಎಂದರೇನು? ಅಮೆರಿಕದಲ್ಲಿ ಏಕೆ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ?

 

You may also like

Leave a Comment