Home » Cat Superstition: ರಸ್ತೆಯಲ್ಲಿ ಬೆಕ್ಕು ಅಡ್ಡ ಬಂದ್ರೆ ಅಪಶಕುನವೇ? ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?

Cat Superstition: ರಸ್ತೆಯಲ್ಲಿ ಬೆಕ್ಕು ಅಡ್ಡ ಬಂದ್ರೆ ಅಪಶಕುನವೇ? ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?

1 comment
Cat Superstition

Cat Superstition: ರಸ್ತೆಯಲ್ಲಿ ಬೆಕ್ಕು (Cat) ಅಡ್ಡ ಬಂದ್ರೆ, ಕಪ್ಪು ಬೆಕ್ಕು (black cat) ಕಣ್ಣಿಗೆ ಕಾಣಿಸಿದರೆ, ರಸ್ತೆ ದಾಟಿದರೆ ಅಪಶಕುನ. ಈ ರೀತಿಯ ಬೆಕ್ಕುಗಳ ಬಗೆಗಿನ ಮೂಡನಂಬಿಕೆಯು (Cat Superstition) ನಿನ್ನೆ, ಮೊನ್ನೆಯದಲ್ಲ ಪೂರ್ವಜರ ಕಾಲದ್ದು. ಇಂದಿಗೂ ಜನರು ಇದನ್ನು ನಂಬುತ್ತಿದ್ದಾರೆ‌. ಆದರೆ, ರಸ್ತೆಯಲ್ಲಿ ಬೆಕ್ಕು ಅಡ್ಡ ಬಂದ್ರೆ ಅದು ಅಪಶಕುನ ಅಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣನೂ ಇದೆ. ಹೆಚ್ಚಿನ ಜನರಿಗೆ ಇದು ತಿಳಿದಿಲ್ಲ. ಬನ್ನಿ ಈ ಲೇಖನದ ಮೂಲಕ ತಿಳಿಯೋಣ‌.

ಜ್ಯೋತಿಷ್ಯದ ಪ್ರಕಾರ, ಬೆಕ್ಕು ರಾಹುವಿನ ವಾಹನವಾಗಿದೆ. ಹಾಗಾಗಿ ಬೆಕ್ಕಿನ ಮೇಲೆ ಅದರ ಪ್ರಭಾವ ಇರುತ್ತದೆ. ಇದರಿಂದ ಬೆಕ್ಕು ರಸ್ತೆ ದಾಟಿದರೆ ಅದು ಅಪಘಾತಕ್ಕೆ ಕಾರಣವಾಗಬಹುದು, ಬೆಕ್ಕು ಅಪಶಕುನ ಎಂಬುದು ಜನರ ನಂಬಿಕೆ.

ಇದರ ಹಿಂದಿನ ವೈಜ್ಞಾನಿಕ ಕಾರಣ ಏನಂದ್ರೆ, ಬೆಕ್ಕುಗಳು ಇಲಿಗಳನ್ನು ತಿನ್ನುವುದು ಸಾಮಾನ್ಯ ಹಾಗೂ ಪ್ರಕೃತಿ ನಿಯಮ. ಆದರೆ, ಪ್ಲೇಗ್ ಸಾಂಕ್ರಾಮಿಕ ರೋಗ ಇಲಿಗಳಿಂದ ಹರಡುತ್ತದೆ. ಇಲಿಯನ್ನು ತಿಂದು ಬೆಕ್ಕು ಕೂಡ ಈ ಸೋಂಕನ್ನು ಹರಡುತ್ತದೆ ಎಂಬ ಕಾರಣಕ್ಕೆ ಜನರು ಬೆಕ್ಕು ಅಡ್ಡ ಬಂದರೆ ಪ್ಲೇಗ್ ಹರಡುವ ಭೀತಿಯಲ್ಲಿ ಈ ರೋಗವನ್ನು ತಡೆಗಟ್ಟಲು ಜನರು ನಿಲ್ಲುವುದು ಅಥವಾ ಬೇರೆ ದಾರಿಯಲ್ಲಿ ಸಂಚರಿಸುವುದು ಹೀಗೆಲ್ಲಾ ಮಾಡುತ್ತಿದ್ದರು. ನಂತರದಲ್ಲಿ, ಈ ಸೋಂಕು ಹರಡುವ ಕಾರಣ ಬೆಕ್ಕು ಎದುರಿಗೆ ಬಂದರೆ ಅಪಶಕುನ ಎಂಬ ಮೂಢನಂಬಿಕೆಯಾಗಿ ಬದಲಾಯಿತು. ಇಂದಿಗೂ ಅದೇ ಮೂಡನಂಬಿಕೆ ಹಲವರಲ್ಲಿ ಬೇರೂರಿದೆ.

ಆದರೆ ಕೆಲವು ದೇಶಗಳಲ್ಲಿ ಬೆಕ್ಕನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದೆಷ್ಟೋ ಜನರು ಕಪ್ಪು ಬೆಕ್ಕು ಶುಭ ಎಂದು ಮನೆಯಲ್ಲಿ ಸಾಕುತ್ತಾರೆ. ಮನೆಗೆ ದೃಷ್ಟಿಯಾಗುವುದಿಲ್ಲ ಎಂಬ ನಂಬಿಕೆಯೋ, ಮೂಡನಂಬಿಕೆಯೋ. ಬೆಕ್ಕುಗಳ ಬಗೆಗಿನ ವೈಜ್ಞಾನಿಕ ಕಾರಣ ತಿಳಿಯದವರು ಮೂಢನಂಬಿಕೆಯನ್ನು ನಂಬುತ್ತಾರೆ.

ಇದನ್ನೂ ಓದಿ:Mangaluru: ಈ ಬಾರಿ ಚುನಾವಣಾ ಫಲಿತಾಂಶ ಸರಿಯಾಗಿ ತಿಳಿಸಿದ ಜ್ಯೋತಿಷಿಗಳಿಗೆ ಬಂಪರ್ ಬಹುಮಾನ ; ಬರೋಬ್ಬರಿ 10 ಲಕ್ಷ ರೂ. ಘೋಷಣೆ!!

You may also like

Leave a Comment