Rakshita Suresh Accident: ಮೇ.7ರಂದು ಮಲೇಷಿಯಾದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಕನ್ನಡದ ಗಾಯಕಿ ರಕ್ಷಿತಾ ಸುರೇಶ್ (Rakshita Suresh Accident) ಒಳಗಾಗಿದ್ದಾರೆ. ಗಾಯಕಿ ರಕ್ಷಿತಾ ಅವರು ಚಲಿಸುತ್ತಿದ್ದ ಕಾರು ವಿಭಜಕಕ್ಕೆ ಹೊಡೆದಿರುವುದರಿಂದ ಗಾಯಕಿ ರಕ್ಷಿತಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಾಹಿತಿಯನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ( Social Media) ದಲ್ಲಿ ಹಂಚಿಕೊಂಡಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.

ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಮಣಿರತ್ನಂ ನಿರ್ದೇಶನದಲ್ಲಿ ಇತ್ತೀಚೆಗೆ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ಘಟಾನುಘಟಿ ನಾಯಕ, ನಾಯಕಿಯರು ನಟಿಸಿದ್ದಾರೆ. ಈ ಚಿತ್ರದ ಒಂದು ಹಾಡು ʼಕಿರುನಗೆ…ʼ ಈ ಹಾಡನ್ನು ರಕ್ಷಿತಾ ಸುರೇಶ್ ಅವರು ಹಾಡಿದ್ದಾರೆ. ಇತ್ತೀಚೆಗೆ ಮಲೇಷಿಯಾಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ.

’10 ಸೆಕೆಂಡ್ನಲ್ಲಿ ಇಡೀ ಜೀವನ ಒಮ್ಮೆ ಕಣ್ಮುಂದೆ ಹಾದು ಹೋಯಿತು’ ಎಂದು ಭಯದಿಂದಲೇ ಟ್ವೀಟ್ ಮಾಡಿದ್ದಾರೆ ಗಾಯಕಿ.
ಇದನ್ನೂ ಓದಿ: ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್; ಇಂದಿನಿಂದ ಮೂರು ದಿನ ಮದ್ಯ ಮಾರಾಟಕ್ಕೆ ನಿಷೇಧ!!!
