Home » Karnataka Rains: ಸುರಿಯಲಿದೆ ಅಬ್ಬರದ ಮಳೆ ಮುಂದಿನ 24ಗಂಟೆಗಳಲ್ಲಿ! ಬೆಂಗಳೂರು, ಕರಾವಳಿಯ ಜನರೇ ಎಚ್ಚರ!

Karnataka Rains: ಸುರಿಯಲಿದೆ ಅಬ್ಬರದ ಮಳೆ ಮುಂದಿನ 24ಗಂಟೆಗಳಲ್ಲಿ! ಬೆಂಗಳೂರು, ಕರಾವಳಿಯ ಜನರೇ ಎಚ್ಚರ!

by Mallika
0 comments
Karnataka Rains

Karnataka Rains: ಬೆಂಗಳೂರಿನಲ್ಲಿ ನಿನ್ನೆ ಗುಡುಗು ಸಹಿತ ಭಾರೀ ಮಳೆಯ ಪ್ರಭಾವದಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇದಕ್ಕೂ ನಂತರ ಮೇ.11ರಂದು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆಯಿದ್ದು, ಎಲ್ಲಾ ಕಡೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ತಜ್ಞ ಪ್ರಸಾದ್‌ ಹೇಳಿದ್ದಾರೆ. ಬೆಂಗಳೂರು, ದಕ್ಷಿಣ ಒಳನಾಡು, ಕರಾವಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ (Karnataka Rains) ಎಂದು ವರದಿಯಾಗಿದೆ.

ಬಂಗಾಳಕೊಲ್ಲಿಯಲ್ಲಿ ಉದ್ಭವಿಸಿರುವ ಚಂಡಮಾರುತ ಮೋಚಾದಿಂದಾಗಿ ಕರ್ನಾಟಕದೆಡೆಗೆ ಕೂಡಾ ಇದರ ಪ್ರಭಾವ ಕಾಣಿಸಲಿದೆ. ಹಾಗಾಗಿ ಎಲ್ಲೆಡೆ ಮಳೆಯಾಗುವ ಭಾರೀ ಸಂಭವನೀಯತೆ ಇದೆ. ಬೆಂಗಳೂರಿನಲ್ಲಿ ಮೇ.12ರವರೆಗೂ ಗುಡುಗು, ಮಿಂಚು ಸಹಿತ ಭಾರೀ ಮಳೆಯಯಾಗುತ್ತದೆ ಎಂಬುವುದಾಗಿ ಹವಮಾನ ಇಲಾಖೆ ಈಗಾಗಲೇ ತಿಳಿಸಿದೆ. ಕಲಬುರಗಿಯಲ್ಲಿ 38.1 ಡಿಗ್ರಿ ಸೆಲ್ಸಿಯಸ್​ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಬೆಂಗಳೂರು ನಗರ, ಸಿಂದಗಿ, ಬಾದಾಮಿ, ಆಳಂದ, ಚಿಕ್ಕಮಗಳೂರು, ಹುಕ್ಕೇರಿ, ಚಿಂತಾಮಣಿ, ಕಲಬುರಗಿ, ಬಿಳಗಿ, ಗೋಕಾಕ, ಕೋಲಾರ, ದೇವನಹಳ್ಳಿ, ಟಿ ನರಸೀಪುರದಲ್ಲಿ ಮಳೆಯಾಗಿದೆ. ಬೆಂಗಳೂರಲ್ಲಿ ಬೆಳಗ್ಗೆ ಬೆಳಗ್ಗಿನ ಸಮಯದಲ್ಲಿ ಮಳೆಯ ಯಾವುದೇ ಕುರುಹು ಇರುವುದಿಲ್ಲ. ಆದರೆ ಸಾಯಂಕಾಲ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Gold-Silver Price today: ಇಂದು ಚಿನ್ನದ ದರದಲ್ಲಿ ಏರಿಕೆ!

You may also like

Leave a Comment