Home » Student sprays Pepper on Teacher: ಫೋನ್‌ ಕಿತ್ಕೊಂಡ ಶಿಕ್ಷಕನ ಮುಖಕ್ಕೆ ​​ಪೆಪ್ಪರ್ ಸ್ಪ್ರೇ ಮಾಡಿದ ವಿದ್ಯಾರ್ಥಿನಿ.. ಮುಂದೇನಾಯ್ತು? ಇಲ್ಲಿದೆ ನೋಡಿ ವಿಡಿಯೋ!

Student sprays Pepper on Teacher: ಫೋನ್‌ ಕಿತ್ಕೊಂಡ ಶಿಕ್ಷಕನ ಮುಖಕ್ಕೆ ​​ಪೆಪ್ಪರ್ ಸ್ಪ್ರೇ ಮಾಡಿದ ವಿದ್ಯಾರ್ಥಿನಿ.. ಮುಂದೇನಾಯ್ತು? ಇಲ್ಲಿದೆ ನೋಡಿ ವಿಡಿಯೋ!

by ಹೊಸಕನ್ನಡ
0 comments
Student sprays Pepper on Teacher

Student sprays pepper on teacher: ಶಾಲಾ ಕಾಲೇಜು(School -Collage)ಗಳಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂದು ಅದರದ್ದೇ ಆದ ನಿಯಮಗಳಿವೆ. ಅವುಗಳನ್ನು ಪಾಲಿಸದಿದ್ದರೆ ಶಿಕ್ಷೆ ಖಂಡಿತಾ. ಆದರೆ ಇಲ್ಲೊಂದೆಡೆ ವಿದ್ಯಾರ್ಥಿನಿಯೊಬ್ಬಳು ಕ್ಲಾಸ್‌ನಲ್ಲಿ ಮೊಬೈಲ್(Mobile) ಬಳಸುತ್ತಿದ್ದಳೆಂದು ಶಿಕ್ಷಕರೊಬ್ಬರು ಕೈಯಿಂದ ಮೊಬೈಲ್​ ಕಿತ್ತುಕೊಂಡದಕ್ಕೆ, ಶಿಕ್ಷಕರ ಮೇಲೆಯೇ ಆಕೆ ಪೆಪ್ಪರ್ ಸ್ಪ್ರೇ(Pepper Sprey) ಮಾಡಿದ್ದಾಳೆ.

ಹೌದು, ಕ್ಲಾಸ್‌ನಲ್ಲಿ ಮೊಬೈಲ್ ಬಳಸುತ್ತಿದ್ದ ವಿದ್ಯಾರ್ಥಿಯೊಬ್ಬಳು ಶಿಕ್ಷಕರ ಕೈಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಶಿಕ್ಷಕರು ಆಕೆಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿ ಪಾಠ ಮಾಡಿದ ಗುರು ಎಂಬುವುದನ್ನು ನೋಡದೇ ಟೀಚರ್ ಮುಖಕ್ಕೆ ಖಾರದ ಪುಡಿ ಸ್ಪ್ರೇ (Student sprays pepper on teacher) ಮಾಡಿದ್ದು, ಇದರಿಂದ ಶಿಕ್ಷಕ ಕಣ್ಣು ಮುಖ ಉರಿ ತಡೆಯಲಾಗದೇ ಜೋರಾಗಿ ಬೊಬ್ಬೆ ಹಾಕುತ್ತಾ ಓಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ನ್ಯೂಯಾರ್ಕಿನ(New york) ನ್ಯಾಶ್ವಿಲ್ಲೆ(Nyashville) ಸಮೀಪದ ಟೆನ್ನೆಸ್ಸೀ(Tennessi) ಎಂಬಲ್ಲಿ ಇರುವ ಅಂಟಿಯೋಚ್ ಹೈ(Antiyoch high) ಎಂಬಲ್ಲಿನ ಶಾಲೆಯಲ್ಲಿ ಶಿಕ್ಷಕರೊಬ್ಬರು ಪಾಠ ಮಾಡುತ್ತಿದ್ದು, ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಪಾಠದ ಬಗ್ಗೆ ಗಮನ ಕೊಡದೇ ಮೊಬೈಲ್‌ ಒತ್ತುತ್ತಾ ಕುಳಿತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಶಿಕ್ಷಕರು, ವಿದ್ಯಾರ್ಥಿನಿ ಬಳಿ ಬಂದು ಆಕೆಯ ಮೊಬೈಲ್‌ ಕಿತ್ತುಕೊಂಡು ಹೋಗಿದ್ದಾರೆ. ಮೊದಲಿಗೆ ಶಿಕ್ಷಕನ ಕೈಯಿಂದ ಮೊಬೈಲ್ (Smart Phone)ಕಿತ್ತುಕೊಳ್ಳಲು ಯತ್ನಿಸಿದ ವಿದ್ಯಾರ್ಥಿನಿ ಅದು ಸಾಧ್ಯವಾಗದೇ ಇದ್ದಾಗ ಶಿಕ್ಷಕನ ಮುಖಕ್ಕೆ ಪೆಪ್ಪರ್ ಸ್ಪೇ ಮಾಡಿದ್ದಾಳೆ. ಇದರಿಂದ ಶಿಕ್ಷಕ ಖಾರ ಹಾಗೂ ಉರಿ ತಡೆದುಕೊಳ್ಳಲಾಗದೇ ನೆಲದ ಮೇಲೆ ಬಿದ್ದು ಒದ್ದಾಡಿದ್ದಲ್ಲದೇ ಜೋರಾಗಿ ಬೊಬ್ಬೆ ಹಾಕಿದ್ದಾನೆ. ಅಲ್ಲದೇ ಈ ವೇಳೆ ಶಿಕ್ಷಕನ ಬೊಬ್ಬೆ ಕೇಳಿ ಮತ್ತೊಬ್ಬ ಶಿಕ್ಷಕ ಅಲ್ಲಿಗೆ ಬಂದಿದ್ದು, ವಿದ್ಯಾರ್ಥಿನಿಯನ್ನು ಸುಮ್ಮನಿರುವಂತೆ ಹೇಳಿದ್ದಾನೆ. ಈ ವೇಳೆ ಆಕೆ ನನಗೆ ನನ್ನ ಫೋನ್ ವಾಪಸ್ ಪಡೆಯಬೇಕು ಹಾಗೂ ನನಗೆ ನನ್ನ ಫೋನ್ ಬೇಕು ಎಂದು ಜೋರಾಗಿ ಬೊಬ್ಬೆ ಹೊಡೆದಿದ್ದಾಳೆ.

ಅಲ್ಲದೇ ಈ ವೇಳೆ ಹತ್ತಿರದ ತರಗತಿಯ ಶಿಕ್ಷಕರು (Teacher) ಕೂಡ ಅಲ್ಲಿಗೆ ಬಂದಿದ್ದು, ಈ ವೇಳೆ ಶಿಕ್ಷಕ ಮೆಣಸಿನ (Mirchi Powder) ಹುಡಿಯ ಖಾರ ನೆತ್ತಿಗೇರಿ ಕೆಮ್ಮುತ್ತಿರುವುದು ಕಂಡು ಬಂದಿದೆ. ಅಲ್ಲದೇ ಇನ್ನು ಕೆಲವರು ಅಲ್ಲಿಗೆ ಬಂದಿದ್ದು, ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಫೋನ್ ವಿಚಾರಕ್ಕೆ ಈ ರೀತಿ ಮಾಡಿದ್ದೇ ಇದೊಂದು ಹುಚ್ಚುತನ ಎಂದು ಒಬ್ಬರು ಉದ್ಘರಿಸುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ.

ಆದರೆ ಈ ನಡುವೆ ಶಿಕ್ಷಕನಿಂದ ಫೋನ್ ಕಿತ್ತುಕೊಂಡ ವಿದ್ಯಾರ್ಥಿನಿ ಆ ಫೋನ್ ಅನ್ನು ಶಾಲೆಯ ಪಠ್ಯಕ್ಕೆ ಸಂಬಂಧಿಸಿದಂತೆ ಉತ್ತರವನ್ನು ಗೂಗಲ್ ಮಾಡಲು ಬಳಸುತ್ತಿದ್ದಳು ಎಂದು ತಿಳಿದು ಬಂದಿದೆ. ಆದರೂ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದು, ಶಿಕ್ಷಕರಿಗೇ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದು, ದೂರಾದೃಷ್ಟವೇ ಸರಿ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ: Marriage Twist : ತಂಗಿಗೆ ಹಾರ ಹಾಕಿ, ಅಕ್ಕನಿಗೆ ತಾಳಿ ಕಟ್ಟಿದ ವರ! ಮದುವೆ ಮಂಟಪದಲ್ಲಿ ಕಾದಿತ್ತು ಶಾಕ್!

 

You may also like

Leave a Comment