Home » Elephant: ಒಂಟಿ ಸಲಗದ ಜೊತೆ ಫೋಟೋ ಪೋಸ್! ಈತನ ಹುಚ್ಚಾಟ ವಿಡಿಯೋ ನೀವೇ ನೋಡಿ!

Elephant: ಒಂಟಿ ಸಲಗದ ಜೊತೆ ಫೋಟೋ ಪೋಸ್! ಈತನ ಹುಚ್ಚಾಟ ವಿಡಿಯೋ ನೀವೇ ನೋಡಿ!

0 comments
Elephant

Elephant viral video: ಆನೆಗಳು ತಮ್ಮ (Elephant) ನಡಿಗೆ, ನಡವಳಿಕೆ ಮತ್ತು ಜೀವನಶೈಲಿ ಗಂಭೀರತೆಯಿಂದ ದೊಡ್ಡ ಹಿಂಡುಗಳಲ್ಲಿ ಸಾಗುವ ಅವು ಗರ್ಭಿಣಿ ಹೆಣ್ಣುಗಳು, ಪುಟ್ಟ ಮರಿಗಳು, ವಯಸ್ಸಾದವು ಅಥವಾ ಗಾಯಗೊಂಡ ತಮ್ಮ ಕುಟುಂಬದ ಯಾವ ಸದಸ್ಯನನ್ನೂ ಹಿಂದೆ ಬಿಡದೆ ಅನುಕರಣೀಯ ರೀತಿಯಲ್ಲಿ ಜೀವಿಸುವ ಪ್ರಾಣಿ ಆಗಿದೆ.

ಆದರೆ ಆನೆಗಳ ತಂಟೆಗೆ ವಿನಾಕಾರಣ ಹೋದರೆ ಅವುಗಳ ಸಹನೆ ಮೀರಿ ಹೋದರೆ ಪರಿಸ್ಥಿತಿ ಕೆಟ್ಟದಾಗಿರುತ್ತೆ. ಅವುಗಳು ತಮಗೆ ಕಿರಿಕಿತಿ ಎನ್ನಿಸಿದಾಗ ಮೊದಲಿಗೆ ಅವು ಘೀಳಿಟ್ಟು, ಕಾಲಿಂದ ಧೂಳೆಬ್ಬಿಸಿ ಎಚ್ಚರಿಕೆ ಕೊಡುತ್ತವೆ. ಅದನ್ನು ನೋಡಿ ದೂರ ಸರಿದರೆ ಉಂಟು, ಇಲ್ಲವಾದಲ್ಲಿ ಮುನ್ನುಗ್ಗಿ ಅಟ್ಟಿಸಿಕೊಂಡು ಬರುತ್ತವೆ. ಮುಂದೆ ಊಹಿಸಲು ಕೂಡ ಸಾಧ್ಯವಿಲ್ಲ.

ಇಲ್ಲೊಬ್ಬ ಮನುಷ್ಯ ಕುಡಿದ ಮತ್ತಿನಲ್ಲಿ ಕಾರಿನಿಂದಿಳಿದು ಕಾಡಿನಂಚಲ್ಲಿ ಸುಮ್ಮನೆ ಮೇಯುತ್ತ ನಿಂತಿದ್ದ ಸಲಗವೊಂದರ ತೀರ ಹತ್ತಿರ ಹೋಗಿದ್ದು ಅಲ್ಲದೆ, ನಮಸ್ಕರಿಸಿ ಕಾಲಿಗೆ ಬಿದ್ದಂತೆ ಮಾಡುವಾಗ ಅದು ತೊಲಗು ಇಲ್ಲಿಂದ ಎಂದು ಎಚ್ಚರಿಕೆ ಕೊಟ್ಟಿದೆ. ಆದರೆ ಈತನ ಚಾಲಿ ಮತ್ತೇ ಮುಂದುವರಿಸಿದ್ದಾನೆ. ತಾನೇನೋ ಗೆದ್ದು ಬೀಗಿದಂತೆ ಫೋಟೋ ಪೋಸು ಬೇರೆ ಕೊಟ್ಟಿದ್ದಾನೆ.

ಈ ವಿಡಿಯೋ ಇದೀಗ ವೈರಲ್ ( Elephant viral video) ಕೂಡ ಆಗಿದ್ದು, ಈತನ ಈ ಹುಚ್ಚಾಟ ಕ್ಕೆ ‘ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಇವನನ್ನು ಬಂಧಿಸಬೇಕು’ ಎಂದೂ ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: AR Krishnamurthi: ಒಂದು ಮತದ ಅಂತರದಿಂದ ಸೋತಿದ್ದ ಅಭ್ಯರ್ಥಿ 59 ಸಾವಿರ ಮತದ ಮುನ್ನಡೆಯಲ್ಲಿ ಗೆಲುವು

You may also like

Leave a Comment