Sushil Kumar Shinde: ಚುನಾವಣೆಯಲ್ಲಿ ಕರ್ನಾಟಕದ ಜನತೆ ಆಡಳಿತ ರೂಡ ಬಿಜೆಪಿ(BJP)ಯನ್ನು ಹೀನಾಯವಾಗಿ ಸೋಲಿಸಿ, ಕಾಂಗ್ರೆಸ್(Congress) ಕೈಗೆ ಅಧಿಕಾರದ ಗದ್ದುಗೆಯನ್ನು ನೀಡಿದ್ದಾರೆ. ಮುಂದಿನ ವಾರವೇ ಹೊಸ ಸರ್ಕಾರ ಕೂಡ ರಚನೆಯಾಗಲಿದೆ. ಸದ್ಯ ಇದೀಗ ಮುಂದಿನ ಪ್ರಶ್ನೆ ಎದ್ದಿರುವುದು ರಾಜ್ಯದ ಮುಂದಿನ ಸಿಎಂ(CM) ಯಾರಾಗಲಿದ್ದಾರೆ ಎಂಬುದು. ಕೊಂಚ ಮಟ್ಟದ ಪೈಪೋಟಿ ಇರೋದ್ರಿಂದ ಇದು ಹೈಕಮಾಂಡ್ ಗೂ ಸವಾಲಾಗಿದೆ.
ಹೌದು, ಸಿದ್ದು ಹಾಗೂ ಡಿಕೆಶಿ ನಡುವೆ ಪೈಪೋಟಿ ಏರ್ಪಟ್ಟಿರೋದ್ರ ಕೊಂಚಮಟ್ಟಿಗಿದು ಕಾಂಗ್ರೆಸ್ ಹೈಕಮಾಂಡ್ ಗೆ ಸವಾಲಾಗಿ ಪರಿಣಮಿಸಿದೆ. ಕಾಂಗ್ರೆಸ್ ನ ಅಭೂತಪೂರ್ವ ಗೆಲುವಿಗಾಗಿ ಶ್ರಮಿಸಿದ ಈ ಇಬ್ಬರು ನಾಯಕರನ್ನು ದೂರ ಮಾಡುವಂತಿಲ್ಲ. ಹೀಗಾಗಿ ಈ ವಿಚಾರವಾಗಿ ಜಾಣತನದ ಹೆಜ್ಜೆ ಇಟ್ಟಿರೋ ಹೈಕಮಾಂಡ್ ಸದ್ಯ ಸಿಎಂ ಆಯ್ಕೆಯಾಗಿ ಹೊಸ ಸಾರಥಿಯನ್ನು ನೇಮಿಸಿದೆ.
ಯಸ್, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ ಕಾಂಗ್ರೆಸ್ ಈಗ ಸರ್ಕಾರ ರಚಿಸುವ ಕಸರತ್ತು ಮಾಡುತ್ತಿದೆ. ಪ್ರಮುಖವಾಗಿ ಮುಂದಿನ ಸಿಎಂ ಅನ್ನು ಆಯ್ಕೆ ಮಾಡುವ ಸವಾಲು ಕಾಂಗ್ರೆಸ್ ಹೈಕಾಂಡ್‌ಗೆ ಎದುರಾಗಿದೆ. ಈ ಹಿನ್ನೆಲೆ ರಾಜ್ಯದ ವೀಕ್ಷಕರಾಗಿ ಮಹಾರಾಷ್ಟ್ರ(Maharastra) ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ(Sushil Kumar Shinde) ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಇವರನ್ನು ನೇಮಕ ಮಾಡಿದ್ದು, ಮುಂದಿನ ಸಿಎಂ ಆಯ್ಕೆ ಮಾಡಲು ಇವರ ಸಲಹೆ ಕೋರಿದೆ.
ಅಂದಹಾಗೆ ಪ್ರಚಂಡ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ ಇಂದು ಸಂಜೆ ನಡೆಯಲಿದ್ದು, ನೂತನ ಮುಖ್ಯಮಂತ್ರಿಯ ಹೆಸರನ್ನು ನಿರ್ಧರಿಸುವ ಸಾಧ್ಯತೆ ಇದೆ.
