Home » Kichcha Sudeep: ಕಿಚ್ಚ ಸುದೀಪ್ ಹೋದಲೆಲ್ಲಾ ಸೋಲು?, ಹೀಗಂದ್ರು ಮಾಜಿ ಸಿಎಂ ಬೊಮ್ಮಾಯಿ!!

Kichcha Sudeep: ಕಿಚ್ಚ ಸುದೀಪ್ ಹೋದಲೆಲ್ಲಾ ಸೋಲು?, ಹೀಗಂದ್ರು ಮಾಜಿ ಸಿಎಂ ಬೊಮ್ಮಾಯಿ!!

by ಹೊಸಕನ್ನಡ
0 comments
Kichcha Sudeep

Basavaraj Bommai Reaction: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಅತಿಯಾದ ಆತ್ಮವಿಶ್ವಾಸ ಇಟ್ಟು ಮೆರೆಯುತ್ತಿದ್ದ ಬಿಜೆಪಿ ಮುಗ್ಗರಿಸಿಬಿಟ್ಟಿದೆ. ಮತ್ತೊಮ್ಮೆ ಬಿಜೆಪಿ(BJP) ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದೇ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದ್ದವು. ಆದರೆ ಎಲ್ಲ ಲೆಕ್ಕಾಚಾರಗಳನ್ನು ಮತದಾರ ತಲೆಕೆಳಗಾಗಿದೆ

ಸ್ವತಃ ಭಾರತದ ಪ್ರಧಾನಿ ಮೋದಿ(PM Modi) ಯನ್ನೊಳಗೊಂಡು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಮೇತ ರಾಜ್ಯಕ್ಕೆ ಬಂದು ಭರ್ಜರಿ ಪ್ರಚಾರ, ರೋಡ್ ನಡೆಸಿಯೂ ಬಿಜೆಪಿಯು ಹೀನಾಯವಾಗಿ ಸೋಲು ಕಂಡಿದೆ. ಮುಖ್ಯವಾಗಿ ಸ್ಟಾರ್ ಪ್ರಚಾರಕರಾಗಿ ಪ್ರಮುಖ ಪಾತ್ರ ವಹಿಸಿದ್ದ ಸುದೀಪ್(Kiccha Sudeep) ಹೋದಲೆಲ್ಲ ಬಿಜೆಪಿ ಸೋಲುಂಡಿದೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಈ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ(Ex CM Bommai) ಪ್ರತಿಕ್ರಿಸಿದ್ದು ಏನಂದಿದ್ದಾರೆ ಗೊತ್ತಾ?

ಹೌದು, ರಾಜೀನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿಯವರು (Basavaraj Bommai Reaction), ಪಕ್ಷಕ್ಕೆ ಹಿನ್ನಡೆಯಾಗಿರುವುದನ್ನು ನಾನೇ ಹೊರತುತ್ತೇನೆ. I take responsibility ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಕಾರಣ ಬಗ್ಗೆ ಕುಳಿತು ಚರ್ಚಿಸುತ್ತೇವೆ ಎಂದರು. ಅಲ್ಲದೆ ವೇಳೆ ಬಿಜೆಪಿ ಹಿನ್ನೆಡೆಗೆ ನಟ ಸುದೀಪ ಕಾರಣವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ರಾಜಕಾರಣಿಯಲ್ಲ. ಪಕ್ಷದ ಸೋಲಿಗೆ ಅವರ ಹೊಣೆ ಮಾಡುವುದು ಸರಿಯಲ್ಲ.ಸೋಲಿನ ಹೊಣೆ ನಾನು ಹೊರುತ್ತೇನೆ ಎಂದು ಹೇಳಿದ್ದೇನಲ್ಲ ಪ್ರಶ್ನಿಸಿದ್ದಾರೆ.

ಬಳಿಕ ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ(BJP) ಸೋಲಾಗಿದೆಯಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ವೋಟ್‌ಬ್ಯಾಂಕ್(Vote Bank) ಸರಿಯಾಗಿ ಕ್ರೋಢಿಕರಣವಾಗಿಲ್ಲ. ವಿಪಕ್ಷಗಳು ಬೇಗನೆ ಪ್ರಚಾರ ಶುರು ಮಾಡಿದ್ರು. ಅನೇಕ ಕಾರಣಗಳು ಹಿನ್ನೆಡೆಗೆ ಕಾರಣವಾಗಿವೆ. ನಾವು ಹಿಂದೆ ಇಂತಹ ಎಷ್ಟೋ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವೆ. ಸೋಲು-ಗೆಲುವು ಕಂಡಿದ್ದೇವೆ. ಗೆಲುವಿಗೆ ಇದ್ದ ಹಾಗೆ ಸೋಲಿಗೆ ಹಲವು ಕಾರಣಗಳಿವೆ. ಎಲ್ಲವನ್ನೂ ಕುಳಿತು ಚರ್ಚೆ ಮಾಡ್ತೀವಿ. ಯಾವ ಕಾರಣದಿಂದ ಹಿನ್ನೆಡೆ, ಏನು ವ್ಯತ್ಯಾಸ ಆಗಿದೆ ಎಂದು ಚರ್ಚಿಸುತ್ತೇವೆ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪುಟಿದೇಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:Independent candidates: ಕರ್ನಾಟಕ ಚುನಾವಣೆಯಲ್ಲಿ ಪಕ್ಷೇತರ, ಇತರಪಕ್ಷಗಳಿಂದ ಗೆದ್ದು ಭೀಗಿದ ಕಲಿಗಳಿವರು!

You may also like

Leave a Comment