Home » Election Result: ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ನುಡಿದಿದ್ದ ಭವಿಷ್ಯವಾಣಿ! ʼಅಂಬಲಿ ಹಳಸಿತು ಕಂಬಲಿ ಬಿಸಿತಲೆ ಪರಾಕ್‌ʼ ನಿಜವಾಯಿತೇ ಭವಿಷ್ಯ!!!

Election Result: ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ನುಡಿದಿದ್ದ ಭವಿಷ್ಯವಾಣಿ! ʼಅಂಬಲಿ ಹಳಸಿತು ಕಂಬಲಿ ಬಿಸಿತಲೆ ಪರಾಕ್‌ʼ ನಿಜವಾಯಿತೇ ಭವಿಷ್ಯ!!!

0 comments
Election Result

Election Result: ಕೆಲವು ತಿಂಗಳ ಹಿಂದೆಯಷ್ಟೇ ಅದ್ಧೂರಿಯಾಗಿ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವ ನಡೆದಿತ್ತು. ಆ ವೇಳೆ ಗೊರವಯ್ಯ ರಾಮಪ್ಪಜ್ಜಕಾರಣಿಕ ರಾಜ್ಯದ ರಾಜಕೀಯ ಕುರಿತು ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಭವಿಷ್ಯ ನುಡಿದಿದ್ದರು.

ಹೌದು, ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ನುಡಿದಿದ್ದ ಭವಿಷ್ಯವಾಣಿ ಪ್ರಕಾರ, ಇದನ್ನು ಹಲವು ಜನರು ಹಲವಾರು ರೀತಿಯಲ್ಲಿ ವರ್ಣಿಸಿದ್ದರು. ಒಂದು ವರ್ಗದ ಜನರು ಬಿಜೆಪಿ ಆಡಳಿತದಲ್ಲಿ ಬರುತ್ತದೆ ಎಂದರೆ ಇನ್ನೊಬ್ಬರು ಜೆಡಿಎಸ್‌, ಇನ್ನು ಕೆಲವರು ಕಾಂಗ್ರೇಸ್‌ ಎಂದಿದ್ದರು.

ಆದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಸಾಧ್ಯತೆ ಎನ್ನುವುದು ಮೈಲಾರ ಕಾರ್ಣಿಕದ ರಾಜಕೀಯವಾಗಿ ವಿಶ್ಲೇಷಣೆಯಾಗಿದೆ ಎಂದು ವರದಿಯೊಂದು ತಿಳಿಸಿತ್ತು.
ಪ್ರಾಮಾಣಿಕವಾಗಿ, ನಿಷ್ಠೆಯಿಂದಿರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಭಗವಂತ ದೈವವಾಣಿ ಮೂಲಕ ಇದನ್ನು ತಿಳಿಸಿದ್ದಾನೆ ಎಂದು ರಾಜಕೀಯವಾಗಿ ಈ ಕಾರಣಿಕದ ನುಡಿಯನ್ನು ವಿಶ್ಲೇಷಿಸಿದ್ದರು .

ರೈತರ ಪ್ರಕಾರ, ಇನ್ನು ಮಳೆ ಬೆಳೆ ಜಾಸ್ತಿ ಆಗಲಿದ್ದು ಸಮೃದ್ಧಿಯಾಗಿ ರೈತರಿಗೆ ಒಳ್ಳೆಯದಾಗುತ್ತದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ, ಎನ್ನುವ ಸೂಚನೆ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ನುಡಿದಿದೆ ಎಂದಿದ್ದಾರೆ.

ಚುನಾವಣೆ ಫಲಿತಾಂಶದಲ್ಲಿ (Election Result) ರಾಜ್ಯದ್ಯಾಂತ ಕಾಂಗ್ರೆಸ್‌ ಪಕ್ಷ 135 ಸೀಟ್‌ಗಳಿಂದ ಬಹುಮತ ಹಾಗೂ ಬಿಜೆಪ 66 ಇತರೆ ಜೆಡಿಎಸ್‌ 19, ಇತರೆ 4 ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ನೋಡೊದಾರೆ ಗೊರವಯ್ಯ ರಾಮಪ್ಪಜ್ಜ ಕಾರಣಿಕದ ನುಡಿ ನಿಜವಾಯಿತ್ತು ಎಂದೇ ಹೆಚ್ಚಿನವರು ಅಭಿಪ್ರಾಯ ಪಟ್ಟಿದ್ದಾರೆ

ಇದನ್ನೂ ಓದಿ:Bat Protein: ಬಾವಲಿ ಪ್ರೋಟೀನ್ ಎಂದರೇನು? ನಿಮ್ಮನ್ನು ಯೌವನರನ್ನಾಗಿ ಮಾಡುವುದು ಮಾತ್ರವಲ್ಲದೇ, ಕೋವಿಡ್, ಹೃದ್ರೋಗದಂತಹ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ- ಸಂಶೋಧನಾ ತಂಡ

You may also like

Leave a Comment