Home » Prakash Raj: ಕಾಂಗ್ರೆಸ್‌ಗೆ ಗೆಲುವು, ಬಿಜೆಪಿಗೆ ಸೋಲು-ಕರ್ನಾಟಕ ಚುನಾವಣಾ ಫಲಿತಾಂಶಕ್ಕೆ ಪ್ರಕಾಶ್​ ರಾಜ್ ಖುಷಿ!!!

Prakash Raj: ಕಾಂಗ್ರೆಸ್‌ಗೆ ಗೆಲುವು, ಬಿಜೆಪಿಗೆ ಸೋಲು-ಕರ್ನಾಟಕ ಚುನಾವಣಾ ಫಲಿತಾಂಶಕ್ಕೆ ಪ್ರಕಾಶ್​ ರಾಜ್ ಖುಷಿ!!!

by Mallika
0 comments
Prakash Raj

Prakash Raj: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌(Congress) ಪಕ್ಷಕ್ಕೆ ಭರಪೂರ ಜನಬೆಂಬಲ ದೊರೆತಿದ್ದು, ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ ರೆಡಿಯಾಗಿದೆ. 135 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್‌ಗೆ ಚಿತ್ರನಟ, ಖಳನಟ ಪ್ರಕಾಶ್‌ ರಾಜ್‌ ಅವರು ಟ್ವಿಟ್ಟರ್‌ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಕಾಶ್ ರಾಜ್‌ (Prakash Raj) ಮೊದಲಿನಿಂದಲೂ ಬಿಜೆಪಿ ನಿಲುವಿನ ಬಗ್ಗೆ ಉತ್ತಮ ಅಭಿಪ್ರಯಾ ಹೊಂದಿಲ್ಲ. ಆದರೆ ಈ ಬಾರಿಯ ಕರ್ನಾಟಕ ವಿಧಾನಸಭಾ ಫಲಿತಾಂಶ ಖುಷಿ ನೀಡಿದ್ದು, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌, ಅಮಿತ್‌ ಶಾ ಅವರನ್ನೆಲ್ಲ ವ್ಯಂಗ್ಯವಾಡಿದ ರೀತಿಯ ಫೋಟೋವನ್ನು ಹಾಕಿದ್ದಾರೆ. ಈಗ ಅವರ ಟ್ವೀಟ್‌ ವೈರಲ್‌ ಆಗಿದ್ದು, ಇದಕ್ಕೆ ಜನರು ಅನೇಕ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಇಲ್ಲಿ ಪರ ವಿರೋಧ ಮಾತು ವ್ಯಕ್ತವಾಗುತ್ತಿದೆ.

ಪ್ರಕಾಶ್​ ರಾಜ್​ ಟ್ವೀಟ್​ನಲ್ಲಿ ಏನಿದೆ?

‘ದ್ವೇಷ ಮತ್ತು ಧರ್ಮಾಂಧತೆಯನ್ನು ಒದ್ದೋಡಿಸಿದ್ದಕ್ಕಾಗಿ ಕರ್ನಾಟಕಕ್ಕೆ ಧನ್ಯವಾದಗಳು. ಬೆತ್ತಲೆಯಾದ ಚಕ್ರವರ್ತಿ’ ಎಂದು ಪ್ರಕಾಶ್​ ರಾಜ್​ ಅವರು ಟ್ವೀಟ್​ ಮಾಡಿದ್ದಾರೆ.

ಪ್ರಕಾಶ್‌ ರಾಜ್‌ ಅವರು ಚಿತ್ರ ನಟ ಸುದೀಪ್‌ ಅವರು ಬಿಜೆಪಿಗೆ ಬೆಂಬಲ ಸೂಚಿಸಿದಾಗ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ಸೋಲು ಕಾಣಲಿದೆ ಕರ್ನಾಟಕದಲ್ಲಿ ಎಂದು ಹೇಳಿದ್ದರು. ಅಂತಿಮವಾಗಿ ಬಿಜೆಪಿ ಸೋತಿದೆ.

ಇದನ್ನೂ ಓದಿ:ಹೊನ್ನಾಳಿ ಶಾಸಕ ರೇಣುಕಾಚಾರ್ಯ ರಾಜಕೀಯ ನಿವೃತ್ತಿ ಘೋಷಣೆ, ಕೆಲಸ ಮಾಡಿದರೂ ಸೋಲಿಸಿದ ಬಗ್ಗೆ ತೀವ್ರ ಬೇಸರದ ಹಿನ್ನೆಲೆ !

You may also like

Leave a Comment