Bigg Boss New Season: ಬಿಗ್ ಬಾಸ್ ಹೊಸ ಸೀಸನ್ ಆರಂಭಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಸದ್ಯ ಜೂನ್ನಿಂದ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. 100 ದಿನಕ್ಕೂ ಹೆಚ್ಚು ಕಾಲ ನಡೆಯುವ ಈ ಆಟ ನೋಡೋಕೆ ದೊಡ್ಡ ವೀಕ್ಷಕ ವರ್ಗ ಇದೆ.
ಮುಖ್ಯವಾಗಿ ‘ಬಿಗ್ ಬಾಸ್’ ಎಲ್ಲಾ ಭಾಷೆಗಳಲ್ಲೂ ಜನಪ್ರಿಯತೆ ಪಡೆದುಕೊಂಡಿರೋ ರಿಯಾಲಿಟಿ ಶೋ. ಮಲಯಾಳಂ, ಕನ್ನಡ, ಹಿಂದಿ, ತೆಲುಗು ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ. ಇದೀಗ ತೆಲುಗು ಬಿಗ್ ಬಾಸ್ (Bigg Boss New Season) ಹೊಸ ಸೀಸನ್ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ತೆಲುಗಿನಲ್ಲಿ ಈಗಾಗಲೇ ಆರು ಸೀಸನ್ಗಳು ಪೂರ್ಣಗೊಂಡಿವೆ. ಈಗ ಏಳನೇ ಸೀಸನ್ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಜನಪ್ರಿಯ ಕಲಾವಿದರನ್ನು ಮನೆ ಒಳಗೆ ಕಳುಹಿಸುವ ಆಲೋಚನೆಯಲ್ಲಿ ಚಿತ್ರತಂಡದವರು ಇದ್ದಾರೆ.
ಜುಲೈ ವೇಳೆಗೆ ಸ್ಪರ್ಧಿಗಳ ಆಯ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸೆಪ್ಟೆಂಬರ್ ವೇಳೆಗೆ ಹೊಸ ಸೀಸನ್ ಶುರು ಆಗಲಿದೆ. ಜನಪ್ರಿಯ ಕಲಾವಿದರನ್ನು ಮೊದಲೇ ಸಂಪರ್ಕಿಸಬೇಕು. ಅವರಲ್ಲಿ ಹೊಸ ಸಿನಿಮಾ ಒಪ್ಪಿಕೊಳ್ಳದಂತೆ ಕೋರಿಕೊಳ್ಳಬೇಕು. ಹೀಗಾಗಿ, ಜೂನ್ನಲ್ಲೇ ಎಲ್ಲರನ್ನೂ ಸಂಪರ್ಕಿಸಲಾಗುತ್ತಿದೆ. ಒಂದೊಮ್ಮೆ ಅವರು ಮನೆ ಒಳಗೆ ಹೋಗಲು ಒಪ್ಪದೇ ಇದ್ದರೆ ಬೇರೆ ಕಲಾವಿದರ ಆಯ್ಕೆ ಅನಿವಾರ್ಯ ಆಗುತ್ತದೆ.
ಈ ರೀತಿಯ ಶೋಗಳಿಗೆ ಆ್ಯಂಕರ್ ತುಂಬಾನೇ ಮುಖ್ಯ. ಸದ್ಯ ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಆದರೆ, ಈ ಮೊದಲ ಸೀಸನ್ಗೆ ಟಿಆರ್ಪಿ ಕುಗ್ಗಿದೆ. ನಿರೂಪಕರನ್ನು ಬದಲಾಯಿಸಿ ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಕಾರಣಕ್ಕೆ ಈ ಬಾರಿ ನಿರೂಪಕರ ಬದಲಾವಣೆ ಖಚಿತ ಎನ್ನಲಾಗುತ್ತಿದೆ. ರಾಣಾ ದಗ್ಗುಬಾಟಿ ಅವರು ಹೊಸ ಶೋ ನಡೆಸಿಕೊಡೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ತೆಲುಗು ಭಾಷೆಯ ಏಳನೇ ಸೀಸನ್ ಈ ಬಾರಿ ಹೊಸ ನಿಯಮಗಳೊಂದಿಗೆ ಹೊಸ ನಿರೂಪಕನೊಂದಿಗೆ ಈ ಆಟವನ್ನು ಜನರು ಮನರಂಜಿಸಬಹುದಾಗಿದೆ.
ಇದನ್ನು ಓದಿ: CT Ravi: ಕಾಂಗ್ರೆಸ್ ನವರು ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಳ್ಳಬಹುದು: ಸಿಟಿ ರವಿ
