Home » CT Ravi: ಕಾಂಗ್ರೆಸ್ ನವರು ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಳ್ಳಬಹುದು: ಸಿಟಿ ರವಿ

CT Ravi: ಕಾಂಗ್ರೆಸ್ ನವರು ನೋಟು ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಳ್ಳಬಹುದು: ಸಿಟಿ ರವಿ

0 comments
CT Ravi

CT Ravi: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ (CT Ravi) ಅವರು 2004ರಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದ ಅವರಿಗೆ ಈ ಬಾರಿ ಗೆಲುವು ಗಿಟ್ಟಿಸಲಿಲ್ಲ. ಹೌದು, ಕಾಂಗ್ರೆಸ್‌ನ ಹೆಚ್‌ಡಿ ತಮ್ಮಯ್ಯ ಅವರು ರವಿ ವಿರುದ್ಧ ಭರ್ಜರಿ ಗೆಲುವು ಕಂಡಿದ್ದಾರೆ.

ಸದ್ಯ ಮತದಾರರು ಈ ಬಾರಿ ಸಿಟಿ ರವಿ ಅವರಿಗೆ ಒಲವು ತೋರಿಸಲಿಲ್ಲವೆಂದು ಈ ಸೋಲಿನ ಮೂಲಕ ಸ್ಪಷ್ಟವಾಗಿ ಅರಿವಾಗಿದೆ. ಇದೀಗ ಮಾಧ್ಯಮ ಮುಂದೆ, ಹನಿಮೂನ್ ಅವಧಿ ಎಲ್ಲವೂ ಚೆನ್ನಾಗಿರುತ್ತೆ ಆಮೇಲೆ ಏನಾಗುತ್ತದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಶಾಸಕ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಿಟಿ ರವಿ, ಕಾಂಗ್ರೆಸ್ ನವರು ಉಚಿತ ವಿದ್ಯುತ್ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದಾರೆ, ಅದಲ್ಲದೆ ಈ ಬಾರಿಯ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ನಾವು ಸೈದ್ಧಾಂತಿಕ ಹೋರಾಟ ಮುಂದುವರಿಸುತ್ತೇವೆ, ಜೆಡಿಎಸ್ ನವರು ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದಾರೆ, ಅಲ್ಲದೆ ಉಚಿತ ವಿದ್ಯುತ್, 2000 ಹಣ, 10 ಕೆಜಿ ಅಕ್ಕಿ ಕೊಡುವುದು ಒಳ್ಳೆಯ ಯೋಜನೆ ಅಲ್ವಾ..? ಕಾಂಗ್ರೆಸ್ ನವರು ನೋಟು ಪ್ರಿಂಟ್ ( printing Machine)ಮಾಡುವ ಮೆಷಿನ್ ಇಟ್ಟುಕೊಳ್ಳಬಹುದು ಎಂದು ವ್ಯಂಗ್ಯ ವಾಡಿದ್ದಾರೆ.

 

 

ಇದನ್ನು ಓದಿ: Lamp: ಪ್ರತಿದಿನ ಸಂಜೆ ಮನೆಯ ಮುಖ್ಯ ಬಾಗಿಲಿನ ಬಳಿ ದೀಪವನ್ನು ಏಕೆ ಬೆಳಗಿಸಲಾಗುತ್ತದೆ?  

You may also like

Leave a Comment