Home » Marriage: ಅಬ್ಬಬ್ಬಾ..!! ಸಹೋದರಿಯರನ್ನು ವರಿಸಿದ ಯುವಕ; ಕಾರಣವೇನು? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ವಿಚಾರ

Marriage: ಅಬ್ಬಬ್ಬಾ..!! ಸಹೋದರಿಯರನ್ನು ವರಿಸಿದ ಯುವಕ; ಕಾರಣವೇನು? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ವಿಚಾರ

0 comments
Marriage

Marriage: ಮದುವೆ (Marriage) ವಿಚಾರದಲ್ಲಿ ಹಲವಾರು ನಿರೀಕ್ಷಿತ- ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಎಷ್ಟೋ ಮದುವೆಗಳು ಕೊನೆಕ್ಷಣದಲ್ಲಿ ಮುರಿದು ಬಿದ್ದಿರುವ ಘಟನೆಗಳೂ ಇವೆ. ಆದರೆ, ಇದೀಗ ವೈರಲ್ ಆಗುತ್ತಿರುವ ವಿಚಾರ ನಿಮಗೆ ಖುಷಿ ನೀಡುತ್ತದೆ. ಹೌದು, ಯುವಕನೊಬ್ಬ ಸಹೋದರಿಯರನ್ನು ವರಿಸಿದ ಘಟನೆ ಟೋಂಕ್ ಜಿಲ್ಲೆಯ ಮೋರ್ಜಾಲಾದ ಕುಗ್ರಾಮವಾದ ಉನಿಯಾರಾದಲ್ಲಿ ನಡೆದಿದೆ.

ಅಷ್ಟಕ್ಕೂ ಈತ ಇಬ್ಬರನ್ನು ಏಕೆ ವಿವಾಹವಾದ? ಇಂದಿನ ದಿನದಲ್ಲಿ ವಿವಾಹವಾಗಲು ಒಂದು ಹುಡುಗಿ ಸಿಗೋದೇ ಕಷ್ಟ ಅಂತಹದ್ರಲ್ಲಿ ಈತನಿಗೆ ಎರಡು ವಧುಗಳು. ಹಾಗಿದ್ದರೆ ಇಲ್ಲಿ ನಡೆದಿದ್ದಾದರೂ ಏನು? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ವಿಚಾರ.

ಯುವಕನ ಹೆಸರು ಹರಿ ಓಂ ಮೀನಾ ಎಂದಾಗಿದ್ದು, ಈತ ಸಿಂದಾಳ ನಿವಾಸಿ ಬಾಬುಲಾಲ್ ಮೀನಾ ಅವರ ಪುತ್ರಿಯರಾದ ಕಾಂತಾ ಹಾಗೂ ಸುಮನ್​​ಳನ್ನು ವಿವಾಹವಾಗಿದ್ದು, ಸುಖ -ಸಂಸಾರ ನಡೆಸುತ್ತಿದ್ದಾನೆ.

ಹರಿ ಓಂ ಪದವಿ ಪೂರ್ಣಗೊಳಿಸಿದ್ದರೆ, ಕಾಂತಾ ಉರ್ದುವಿನಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾಳೆ. ಆಕೆಯ ಸಹೋದರಿ ಸುಮನ್ ಎಂಟನೇ ತರಗತಿವರೆಗೆ ಓದಿದ್ದಾಳೆ. ಆದರೆ, ಸುಮನ್ ಎಲ್ಲರಂತಲ್ಲ ಈಕೆ ಮಾನಸಿಕ ಅಸ್ವಸ್ಥೆ. ಆದರೂ ಯುವಕ ಇಬ್ಬರನ್ನೂ ವರಿಸಿದ್ದಾನೆ. ಯಾಕಾಗಿ?!

ಕಾಂತಾಳನ್ನು ವಿವಾಹವಾಗುವ ಬಗ್ಗೆ ಹರಿ ಓಂ ಕುಟುಂಬಸ್ಥರಿಂದ ಪ್ರಸ್ತಾಪ ಬಂದಿದ್ದು, ಈ ವೇಳೆ ಕಾಂತಾ ವರನಿಗೆ ಷರತ್ತು ಹಾಕಿದ್ದಾಳೆ. ನನ್ನ ಸಹೋದರಿ ಮಾನಸಿಕ ಅಸ್ವಸ್ಥಳು. ಈವರೆಗೂ ನನ್ನೊಂದಿಗೆ ಸದಾ ಇರುತ್ತಿದ್ದಳು. ಮುಂದೆಯೂ ಅವಳು ನನ್ನೊಂದಿಗೆ ಇರಬೇಕು. ಹಾಗಾಗಿ ನನ್ನನ್ನು ಮದುವೆಯಾಗುವುದಾದರೆ ಆಕೆಯನ್ನೂ ವಿವಾಹವಾಗಬೇಕು ಎಂದು ಷರತ್ತು ಹಾಕಿದಳು. ಇದಕ್ಕೆ ವರ ಹಾಗೂ ಆತನ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ನಂತರ ವರ ಸಹೋದರಿಯರನ್ನು ವಿವಾಹವಾಗಿದ್ದಾನೆ. ಸಂತೋಷವಾಗಿಯೂ ಇದ್ದೇನೆ ಎಂದು ತಿಳಿಸಿದ್ದಾನೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವರನ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:Economic Offendres: ಆರ್ಥಿಕ ಅಪರಾಧಗಳಲ್ಲಿ ಶಾಮೀಲಾದ ವ್ಯಕ್ತಿಗಳಿಗೆ ವಿಶಿಷ್ಟ ಕೋಡ್! ಯಾರೆಲ್ಲ ಈ ಲಿಸ್ಟ್ ನಲ್ಲಿದ್ದಾರೆ? ಇಲ್ಲಿದೆ ವಿವರ

You may also like

Leave a Comment