Home » Bank Account: RBI ನಿಂದ ಗುಡ್ ನ್ಯೂಸ್! ಇನ್ನು ನಿಮ್ಮ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಗೆ ದಂಡ ಇಲ್ಲ!

Bank Account: RBI ನಿಂದ ಗುಡ್ ನ್ಯೂಸ್! ಇನ್ನು ನಿಮ್ಮ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಗೆ ದಂಡ ಇಲ್ಲ!

0 comments
Bank Account

Bank Account: ಪ್ರತಿಯೊಬ್ಬರಲ್ಲೂ ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಯಾಕೆಂದರೆ ಬ್ಯಾಂಕಿಂಗ್ ಸೇವೆಗಳು ಎಲ್ಲರಿಗೂ ಅತೀ ಮುಖ್ಯವಾದುದು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಬ್ಯಾಂಕ್ ಖಾತೆಯನ್ನು ಒಳಗೊಂಡಿದ್ದಾರೆ.

ಬ್ಯಾಂಕ್ ಖಾತೆಗಳಲ್ಲಿ(Bank Account) ಸಾಕಷ್ಟು ಬ್ಯಾಲೆನ್ಸ್ ಇಲ್ಲದೇ ಇದ್ದರೆ ಬ್ಯಾಂಕ್‌ಗಳು ದಂಡ ವಿಧಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಜನಸಾಮಾನ್ಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಿಸುವ ಸಮಸ್ಯೆಯನ್ನು ಪರಿಹರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಕೆಲವು ಬ್ಯಾಂಕ್‌ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ 1,000 ರೂಪಾಯಿಗಳಿದ್ದರೆ ಕೆಲವುಬ್ಯಾಂಕ್‌ಗಳಲ್ಲಿ 2000ರಿಂದ 3000 ರೂಪಾಯಿಗಳು ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ 5 ಸಾವಿರದಿಂದ 10 ಸಾವಿರ ರೂಪಾಯಿಗಳು ಆಗಿರುತ್ತವೆ.

ಬ್ಯಾಂಕ್ ಖಾತೆಗಳ ತುರ್ತು ಪರಿಸ್ಥಿತಿಗಾಗಿ ಇಡುವ ಹಣವನ್ನು ಕೂಡ ‘ಕನಿಷ್ಠ ಬ್ಯಾಲೆನ್ಸ್’ ಶುಲ್ಕದ ಹೆಸರಿನಲ್ಲಿ ಕಡಿತಗೊಳಿಸಲಾಗುತ್ತಿದೆ. ಮೇಲಾಗಿ ಇತರ ಅಗತ್ಯಗಳಿಗೆ ಹಣ ಖರ್ಚು ಮಾಡಿದರೂ ಅದರ ಶುಲ್ಕ ಕಡಿತಗೊಳಿಸಲಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಗ್ರಾಹಕರಿಂದ ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಆರ್‌ಬಿಐ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಉಳಿತಾಯ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯಡಿ ಕರೆಂಟ್ ಶುಲ್ಕವನ್ನು ನಿಲ್ಲಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ. ಕೆಲವು ಬ್ಯಾಂಕ್‌ಗಳು ಆ ಕ್ರಮ ಕೈಗೊಂಡಿವೆ ಎಂದು ವರದಿಯಾಗಿದೆ.

ಮುಖ್ಯವಾಗಿ ಜನಪ್ರಿಯ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೂ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಘೋಷಿಸಲಾಗಿದೆ. ಅದಲ್ಲದೆ ಆಕ್ಸಿಸ್ ಬ್ಯಾಂಕ್ ಕೂಡ ಅದೇ ನಿರ್ಧಾರ ಕೈಗೊಂಡಿದ್ದು, ಜೊತೆಗೆ ಕೆಲವು ಸರ್ಕಾರಿ ಬ್ಯಾಂಕ್‌ಗಳು ಕೂಡ ಇದೇ ರೀತಿ ಯೋಚಿಸುತ್ತಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ:Food Oil Price: ಇಳಿಕೆಯಾಗಿರುವ ಖಾದ್ಯ ತೈಲ ಬೆಲೆ! ಇಲ್ಲಿದೆ ಡಿಟೇಲ್ಸ್

You may also like

Leave a Comment