Home » Vidya Lakshmi Scheme: ವಿದ್ಯಾ ಲಕ್ಷ್ಮಿ ಯೋಜನೆಯಡಿಯಲ್ಲಿ ಸಾಲ ಪಡೆಯಲು ಈ ಅರ್ಹತೆಗಳನ್ನು ಹೊಂದಿರಲೇಬೇಕು

Vidya Lakshmi Scheme: ವಿದ್ಯಾ ಲಕ್ಷ್ಮಿ ಯೋಜನೆಯಡಿಯಲ್ಲಿ ಸಾಲ ಪಡೆಯಲು ಈ ಅರ್ಹತೆಗಳನ್ನು ಹೊಂದಿರಲೇಬೇಕು

0 comments
Vidya Lakshmi Scheme

Vidya Lakshmi Scheme: ಆರ್ಥಿಕ ನೆರವಿನ ಕೊರತೆಯಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಉನ್ನತ ಶಿಕ್ಷಣವು ಸಾಮಾನ್ಯವಾಗಿ ದುಬಾರಿಯಾಗಿದೆ ಈ ಕಾರಣದಿಂದ ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ವೃತ್ತಿಪರ ಶಿಕ್ಷಣ, ಉನ್ನತ ಶಿಕ್ಷಣ ಬಡವರಿಗೆ ಕೈಗೆಟುಕದಂತಾಗಿದೆ. ಮೆರಿಟ್ ಮೇಲೆ ಹೋದರೂ ವೃತ್ತಿಪರ ಶಿಕ್ಷಣಕ್ಕೆ ಲಕ್ಷಾಂತರ ರೂ ವ್ಯಯವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವೂ ವಿದ್ಯಾರ್ಥಿಗಳ ಶಿಕ್ಷಣ ಸಾಲಕ್ಕೆ ವಿದ್ಯಾ ಲಕ್ಷ್ಮೀ ಯೋಜನೆ (Vidya Lakshmi Scheme) ತಂದಿದೆ.

ಶಿಕ್ಷಣ ಸಾಲದೊಂದಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸರ್ಕಾರವು ಪರಿಚಯಿಸಿದ ಮೊದಲ ಯೋಜನೆ ಇದಾಗಿದ್ದು. ವಿಶ್ವಾಸಾರ್ಹವಾಗಿದೆ. ಪ್ರತಿ ವರ್ಷ ಹಲವು ವಿದ್ಯಾರ್ಥಿಗಳು ಈ ಯೋಜನೆಯಿಂದ ಆರ್ಥಿಕ ನೆರವು ಪಡೆದಿದ್ದಾರೆ ಮತ್ತು ಪಡೆಯುತ್ತಿದ್ದಾರೆ.

ವಿದ್ಯಾಲಕ್ಷ್ಮೀ ಯೋಜನೆ ಅಡಿ ಶಿಕ್ಷಣ ಸಾಲ ಪಡೆಯುವ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 5 ಲಕ್ಷ ರೂಗಿಂತ ಕಡಿಮೆ ಇರಬೇಕು ಎನ್ನುವ ಷರುತ್ತು ಇದೆ. ಅಂದರೆ ಕೆಳಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಈ ಯೋಜನೆಯಲ್ಲಿ ಎಜುಕೇಶನ್ ಲೋನ್ ಸಿಗುತ್ತದೆ.

ಮುಖ್ಯವಾಗಿ ಹಣಕಾಸು ಸೇವೆಗಳ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(IBA) ಈ ಪೋರ್ಟಲ್ ರಚನೆಗೆ ಮಾರ್ಗದರ್ಶನ ನೀಡಿದೆ ಅದರಂತೆ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.

ಅದಲ್ಲದೆ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನೀವು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಿಂದ ನಿಮ್ಮ ಬ್ಯಾಂಕ್ ಶಿಕ್ಷಣ ಸಾಲದ ಅರ್ಜಿಗಳನ್ನು ವೀಕ್ಷಿಸಬಹುದು, ಅರ್ಜಿ ಸಲ್ಲಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು.

ಇನ್ನು KYC ಅವಶ್ಯಕತೆಗಳಿಗಾಗಿ, ನಿಮಗೆ ಮತದಾರರ ಗುರುತಿನ ಚೀಟಿ, PAN ಕಾರ್ಡ್ ಅಥವಾ ಆಧಾರ್ ಕಾರ್ಡ್‌ನಂತಹ ಗುರುತಿನ ದಾಖಲೆಗಳ ಅಗತ್ಯವಿದೆ. ನೀವು ಸಂಬಂಧಿತ ವಿಶ್ವವಿದ್ಯಾಲಯದಿಂದ ಪ್ರವೇಶ ಪತ್ರವನ್ನು ಒದಗಿಸಬೇಕು.

ವಿದ್ಯಾ ಲಕ್ಷ್ಮಿ ಯೋಜನೆ ಪ್ರಯೋಜನ ಪಡೆಯಲು ಮುಖ್ಯವಾಗಿ ನೀವು ಭಾರತದ ಪ್ರಜೆಯಾಗಿರಬೇಕು. ನಿಮ್ಮ ಪ್ರೌಢಶಾಲಾ ಪರೀಕ್ಷೆಯಲ್ಲಿ ನೀವು ಕನಿಷ್ಟ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀವು ಹೊಂದಿರಬೇಕು.

ನೀವು ಸಾಲವನ್ನು ವಿನಂತಿಸಿದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಗೆ ನೀವು ಪ್ರವೇಶವನ್ನು ಪಡೆದುಕೊಂಡಿರಬೇಕು. ಸಾಲದ ಅರ್ಜಿದಾರ ಮತ್ತು ಸಹ-ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು ಬೇಕಾಗುತ್ತದೆ.

ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ಇಂಟಿಗ್ರೇಟೆಡ್ ಕೋರ್ಸ್​ಗಳಿಗೆ ಶಿಕ್ಷಣ ಸಾಲ ಪಡೆಯಬಹುದು. ಆದರೆ, ಒಬ್ಬ ವಿದ್ಯಾರ್ಥಿ ಒಮ್ಮೆ ಮಾತ್ರ ಶಿಕ್ಷಣ ಸಾಲ ಪಡೆಯಬಹುದು.

 

ಇದನ್ನು ಓದಿ: PM Rozgar Mela: ಗ್ರೂಪ್‌ ಸಿ, ಡಿ ಹುದ್ದೆಗಳ ಸಂದರ್ಶನ ನಿಲ್ಲಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ: ಪ್ರಧಾನಿ ನರೇಂದ್ರ ಮೋದಿ!! 

You may also like

Leave a Comment