ರಾಜಕೀಯ ಜಂಜಾಟಗಳ ನಡುವೆ ನಿನ್ನೆ ರಾತ್ರಿ ಟಿವಿಯ ಮೂಲಕ ಆರ್ಸಿಬಿ ಮ್ಯಾಚ್ ವೀಕ್ಷಿಸಿ ಸಿದ್ದರಾಮಯ್ಯ ರಿಲ್ಯಾಸ್ ಆಗಿದ್ದಾರೆಂದು ವರದಿಯಾಗಿದೆ.
ಮೇ.10 ಕರ್ನಾಟಕ ವಿಧಾನ ಸಭೆ ಚುನಾವಣೆ ನಡೆಯಿತು. ಮೇ.13ರಂದು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತು. ಈ ಬೆನ್ನಲ್ಲೆ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕಾಗಿ ಅವಿರತ ಹೋರಾಟ ಮಾಡಿದ ಸಿದ್ದರಾಮಯ್ಯ ಒತ್ತಡದಲ್ಲೇ ಕಾಲಕಾಳೆದಿದ್ದಾರೆ. ಬಳಿಕ ಗೆದ್ದರು ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಹುದ್ದೆಗಾಗಿ ಸಿದ್ದು ಮತ್ತು ಡಿಕೆಶಿ ನಡುವೆ ಬಿಗ್ ಫೈಟ್ ನಡೆಯಿತು. ಬಳಿಕ ಹೈಕಮಾಂಡ್ ಆದೇಶ ಮೆರೆಗೆ ನಾಳೆ ಸಿದ್ದರಾಮಯ್ಯ ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದಲ್ಲಿ ಸರ್ಕಾರದ ರಚನೆಯಾಗುವ ಭರದಲ್ಲಿ ಸಿದ್ದರಾಮಯ್ಯ ರಾಜಕೀಯ ಜಂಜಾಟಗಳ ನಡುವೆಯೇ ನಿನ್ನೆ ಆರ್ಸಿಬಿ ಮ್ಯಾಚ್ ವೀಕ್ಷಿಸಿ ರಿಲ್ಯಾಸ್ ಆಗಿದ್ದಾರೆಂದು ವರದಿಯಾಗಿದೆ.
ರಾಜಕೀಯ ಜಂಜಾಟಗಳ ನಡುವೆಯೇ ನಿನ್ನೆ ಸಿಎಲ್‍ಪಿ ಸಭೆ ಮುಗಿಸಿ ನಿವಾಸಕ್ಕೆ ಬಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಕೊನೆಯ ಓವರ್ ನೋಡಿ ಎಂಜಾಯ್ ಮಾಡಿದ್ದಾರೆ. ಸಿದ್ದರಾಮಯ್ಯ ಕೊನೆಗೂ ಕ್ರಿಕೆಟ್ ಅಭಿಮಾನಿ ಅನ್ನೋದನ್ನು ಮೆಲ್ನೋಟಕ್ಕೆ ಸಾಬೀತು ಪಡಿಸಿದ್ದಾರೆ.
