Home » Congress 5 Guarantee: ದಾರಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕೊಡಲಾಗುತ್ತ – ಡಿಕೆಶಿ ಪ್ರಶ್ನೆ | ದಾರೀಲಿ ಹೋಗುವವರು ಕನ್ನಡಿಗರಲ್ಲವೇ -ಬಿಜೆಪಿ ಪ್ರತಿ ಪ್ರಶ್ನೆ !

Congress 5 Guarantee: ದಾರಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕೊಡಲಾಗುತ್ತ – ಡಿಕೆಶಿ ಪ್ರಶ್ನೆ | ದಾರೀಲಿ ಹೋಗುವವರು ಕನ್ನಡಿಗರಲ್ಲವೇ -ಬಿಜೆಪಿ ಪ್ರತಿ ಪ್ರಶ್ನೆ !

0 comments
Congress 5 Guarantee

Congress 5 Guarantee: ಬೆಂಗಳೂರು: ಗ್ಯಾರಂಟಿ ಘೋಷಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ (Congress) ಮುಂದೆ ಸಾಲು ಸಾಲು ಸವಾಲುಗಳಿವೆ. ಹೇಗಾದರೂ ಸರಿ, ಈ ಸಾರಿ ಅಧಿಕಾರ ಹಿಡಿಯಲೇ ಬೇಕೆಂದು ಐದು ಗ್ಯಾರಂಟಿಗಳನ್ನು ಕನ್ನಡಿಗರ (Kannadigas) ಮುಂದೆ ಇರಿಸಿತ್ತು, ‘ಒಂದು ಅವಕಾಶ ಕೊಡಿ’ ಎಂದು ಕಾಂಗ್ರೆಸ್ ಮತ ಕೇಳಿತ್ತು. ಕಾಂಗ್ರೇಸ್ ಗ್ಯಾರಂಟಿಗಳ ಆಸೆಗೆ ಮನ ಸೋತ ಮತದಾರರು ಕಾಂಗ್ರೆಸ್ ಗೆ ಅದ್ಭುತ ಪೂರ್ವವಾದ ಯಶಸ್ಸನ್ನು ತಂದು ಕೊಟ್ಟಿದ್ದರು ಕಳೆದ 304 ವರ್ಷಗಳಲ್ಲಿ ದೊರೆಯಾದ ಬಹುಮತವನ್ನು ಕಾಂಗ್ರೆಸ್ಗೆ ಜನರು ನೀಡಿದ್ದಾರೆ.

ಇದೇ ಐದು ಗ್ಯಾರಂಟಿಗಳನ್ನು (Congress 5 Guarantee) ಸಿದ್ದರಾಮಯ್ಯ ಸರ್ಕಾರ (Siddaramaiah Government) ತಾತ್ವಿಕ ಒಪ್ಪಿಗೆ ನೀಡಿದರೂ, ಈ ಗ್ಯಾರಂಟಿಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಈಡೇರಿಸಲಾಗದ ಗ್ಯಾರಂಟಿಗಳನ್ನು ತರಲಾಗಿದೆ ಎಂದು ಕಿಡಿಕಾರಿದೆ. ಅದರ ಮಧ್ಯೆ ನಿಯೋಜಿತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯಂದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ದಾರಿಯಲ್ಲಿ ಹೋಗುವವರಿಗೆಲ್ಲಾ ‘ ಗ್ಯಾರಂಟಿಗಳನ್ನು’ ಕೊಡಲಾಗುತ್ತದೆಯೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಡಿಕೆ ಶಿವಕುಮಾರ್ ಅವರ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ” ಚುನಾವಣೆಗೂ ಮುನ್ನ ಹಾದಿಯಲ್ಲಿ ಹೋಗುವವರಿಗೆಲ್ಲಾ ಗ್ಯಾರಂಟಿ ಕಾರ್ಡ್‌ ನೀಡಿ ಈಗ ಈ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಹಾಗಾದರೆ ದಾರಿಯಲ್ಲಿ ಹೋಗುವವರು ಕನ್ನಡಿಗರಲ್ಲವೇ ? ” ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

” ನೀಡಲು ಕೊಡಲು ಸಾಧ್ಯವಿಲ್ಲದ ಗ್ಯಾರಂಟಿಗಳನ್ನು ಮುಂದಿಟ್ಟು, ಜನತೆಯನ್ನು ವಂಚಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಈಗ ಸಾಬೀತಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಜಾರಿಗೆ ತರುತ್ತೇವೆ ಎಂದಿದ್ದ ಗ್ಯಾರಂಟಿಗಳ ಲಾಭವನ್ನು ಯಾರಿಗೆ ಮತ್ತು ಹೇಗೆ ಕೊಡುತ್ತೇವೆ ಎಂಬ ಯಾವುದೇ ವಿವರ ನೀಡದೆ ಸಿದ್ದರಾಮಯ್ಯ ಸರ್ಕಾರ ಆದೇಶ ನೀಡುವ ನಾಟಕವಾಡಿದೆ ” ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಕಾಂಗ್ರೆಸಿನ ಗ್ಯಾರಂಟಿಗಳ ಬಗ್ಗೆ ಕಟು ಟೀಕೆ ಮಾಡಿದ ಬಿಜೆಪಿಯು ” ಇವು ಕೊಡುವ ಗ್ಯಾರಂಟಿಗಳಲ್ಲ, ಬದಲಾಗಿ ಕೈ ಎತ್ತುವ ಗ್ಯಾರಂಟಿಗಳು ಎಂಬುದನ್ನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ ಹಾವಭಾವಗಳೇ ಸುಸ್ಪಷ್ಟವಾಗಿ ತೋರಿಸಿವೆ. ಈಡೇರಿಸಲಾಗದ ಗ್ಯಾರಂಟಿಗಳನ್ನು ನೀಡಿ, ಈಗ ಅದನ್ನು ಕೇಂದ್ರ ಸರ್ಕಾರದ ಮೇಲೆ ಹಾಕುವ ಕೆಲಸ ಆಗುತ್ತಿದೆ. ಈಗ ಸಂಪನ್ಮೂಲ ಕ್ರೋಢೀಕರಣ ಎಂಬ ಸಬೂಬು ಹೇಳಲಾಗುತ್ತಿದೆಯಷ್ಟೆ ” ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

” ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಸಾಲ ಮಾಡಿ ಅದರ ಹೊಣೆಯನ್ನು ಮುಂದಿನ ಸರ್ಕಾರಗಳ ಹೆಗಲಿಗೆ ಹಾಕಿದ ಅಪಕೀರ್ತಿ ಸಿದ್ದರಾಮಯ್ರದ್ದು. ಈಗಿನ ಗ್ಯಾರಂಟಿಗಳೂ ಜನರ ಒಂದು ಜೇಬಿನಿಂದ ತೆಗೆದು ಇನ್ನೊಂದು ಜೇಬಿಗೆ ಹಾಕುವ ನಾಟಕ. ಅದರಲ್ಲೂ ಸೋರಿಕೆಯಾಗಿರುವ ಕಾಂಗ್ರೆಸ್ಸಿಗರ ಜೇಬುಗಳು ತುಂಬಿ ತುಳುಕಲಿರುವುದು ಇವರ ಗ್ಯಾರಂಟಿಯ ಅಸಲಿಯತ್ತು ” ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಇದನ್ನೂ ಓದಿ: 5 ಗ್ಯಾರಂಟಿʼಗೆ ತಾತ್ವಿಕ ಒಪ್ಪಿಗೆ ಎಂದು ತಿಪ್ಪೆ ಸಾರಿಸಿದ ಸಿದ್ದರಾಮಯ್ಯ | ಮೊದಲ ವಚನ ಭ್ರಷ್ಟತೆಗೆ ಗುರಿಯಾದ ಕಾಂಗ್ರೆಸ್ ! ರಾಜ್ಯದ ಜನರಿಗೆ ಭಾರೀ ಮೋಸ !!

You may also like

Leave a Comment