Home » Sarath Babu Passes Away: ಕನ್ನಡದ ಜನಪ್ರಿಯ ನಟ ಶರತ್ ಬಾಬು ನಿಧನ! ಕೊನೆಗೂ ಫಲಿಸಲಿಲ್ಲ ಪ್ರಾರ್ಥನೆ

Sarath Babu Passes Away: ಕನ್ನಡದ ಜನಪ್ರಿಯ ನಟ ಶರತ್ ಬಾಬು ನಿಧನ! ಕೊನೆಗೂ ಫಲಿಸಲಿಲ್ಲ ಪ್ರಾರ್ಥನೆ

by ಹೊಸಕನ್ನಡ
0 comments
Actor Sarath Babu

Actor Sarath Babu: ಕನ್ನಡದ ಜನಪ್ರಿಯ ನಟ ಶರತ್ ಬಾಬು (Sarath Babu) ಇಂದು (ಮೇ 22 ) ಹೈದರಾಬಾದ್​ನಲ್ಲಿ ಕೊನೆ ಉಸಿರೆಳೆದಿದ್ದಾರೆ.

ಹಿರಿಯ ನಟ ಶರತ್ ಬಾಬು ( Actor Sarath Babu) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಕಾರಣ ಅವರನ್ನು ಬೆಂಗಳೂರಿನ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಇರುವ ಕಾರಣ ಇಂದು ಅವರು ನಿಧನ ಹೊಂದಿದ್ದಾರೆ.

ಕನ್ನಡದ ಅಮೃತವರ್ಷಿಣಿ (Amruthavarshini) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ಶರತ್ ಬಾಬು (Sharath Babu) ಅವರಿಗೆ 71 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನ ಹೊಂದಿದ್ದಾರೆ.

ಇವರು ಆಂದ್ರಪ್ರದೇಶದಲ್ಲಿ 1951 ರಲ್ಲಿ ಜನಿಸಿದ್ದರು. ಇವರ ಮೂಲ ಹೆಸರು ಸತ್ಯಂ ಬಾಬು ದೀಕ್ಷಿತಲು. ಶರತ್ ಬಾಬು ರಮಾಪ್ರಭಾ ಮತ್ತು ಸ್ನೇಹಾ ನಂಬಿಯಾರ್ ಅವರನ್ನು ಮದುವೆಯಾಗಿದ್ದರು. ಆದರೆ ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ. `ರಾಮರಾಜ್ಯಂ’ ತೆಲುಗು ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ 1973 ರಲ್ಲಿ ತೆರೆಕಂಡಿತ್ತು. ಇವರು ಸುಮಾರು 8 ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶರತ್ ಬಾಬು ಅವರು ನಾಯಕನಾಗಿ ಮತ್ತು ಪೋಷಕನಟನಾಗಿ ಸಾಕಷ್ಟು ಹೆಸರನ್ನು ಪಡೆದಿದ್ದರು.

 

ಇದನ್ನು ಓದಿ: ಮತದಾರರಿಗೆ ಹಣ ಹಂಚದ್ದೇ ಸೋಲಿಗೆ ಕಾರಣ, ಹಣ ವಾಪಸ್‌ ಕೊಡಿ; ಮಾಜಿ ಸಚಿವ ಕೆಸಿ ನಾರಾಯಣಗೌಡ ಕಿಡಿ

You may also like

Leave a Comment