Home » Sanjana Galrani: ಮೆಕ್ಕಾ ಮದೀನಾ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಸಂಜನಾ ಗಲ್ರಾನಿ!

Sanjana Galrani: ಮೆಕ್ಕಾ ಮದೀನಾ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಸಂಜನಾ ಗಲ್ರಾನಿ!

by ಹೊಸಕನ್ನಡ
0 comments
Sanjana Galrani

Sanjana Galrani: ಸದಾ ಏನಾದರೊಂದು ವಿಚಾರವಾಗಿ ಸುದ್ಧಿಯಲ್ಲಿರೋ ಸ್ಯಾಂಡಲ್ ವುಡ್(Sandalwood) ಹೆಸರಾಂತ ನಟಿ ಸಂಜನಾ ಗರ್ಲಾನಿ ಇತ್ತೀಚೆಗೆ (Sanjana Galrani) ಮೆಕ್ಕಾ ಮದೀನಾಗೆ (Medina)ಹೊರಟು ಸುದ್ಧಿಯಾಗಿದ್ದರು. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡು, ಇದು ಅವರ ಮೊದಲ ಆಧ್ಯಾತ್ಮಿಕ ಜರ್ನಿ ಅಂತಾನೂ ಹೇಳಿಕೊಂಡಿದ್ದರು. ಇದೀಗ ಮೆಕ್ಕಾ ಭೇಟಿ ನೀಡಿರೋ ಅವರು ಮೆಕ್ಕಾ ಮದೀನಾ(Mekka madeena) ಭೇಟಿಯ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಂಜನಾ ಗಲ್ರಾನಿ ಯೂಟ್ಯೂಬ್‌ ಚಾನೆಲ್‌(You tube Channel) ಹೊಂದಿದ್ದು ಅದರಲ್ಲಿ ಮೆಕ್ಕಾ ಮದೀನಾ ಭೇಟಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ರೀತಿ ರಿವಾಜುಗಳನ್ನು ಕೂಡಾ ವಿವರಿಸಿದ್ದಾರೆ.

ಅಂದಹಾಗೆ ನಟಿ ಸಂಜನಾ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಬಂಧನವಾದಾಗಲೇ ಅವರು ಬೆಂಗಳೂರಿನ ವೈದ್ಯ ಡಾ.ಅಜೀಜ್ ಪಾಷಾ (Aziz Pasha) ಎಂಬುವವರನ್ನು ಮದುವೆಯಾಗಿರುವ ವಿಚಾರ ಬಹಿರಂಗವಾಗಿತ್ತು. ಸದ್ಯ ಸಂಜನಾ ಸಿನಿಮಾ ರಂಗದಿಂದ ದೂರವಿದ್ದು, ಪತಿ ಮತ್ತು ಮಗುವಿನ ಜೊತೆ ಮೌಲ್ಯಯುತ ವೇಳೆ ಕಳೆಯುತ್ತಿದ್ದಾರೆ. ಅಭಿಮಾನಿಗಳ ಜೊತೆ ಬೆರೆಯುವುದಕ್ಕಾಗಿಯೇ ಅವರು ಯೂಟ್ಯೂಬ್ ಮೂಲಕ ಆಗಾಗ್ಗೆ ವಿಡಿಯೋಗಳನ್ನು ಹಾಕುತ್ತಾರೆ.

ಅಲ್ಲದೆ ಸಂಜನಾ ಈ ಹಿಂದೆಯೇ ತಮ್ಮ ಹೆಸರನ್ನು ಮಹೀರಾ ಎಂದು ಬದಲಾಯಿಸಿಕೊಂಡಿರುವ ಕುರಿತು ದಾಖಲೆಯೊಂದು ಹರಿದಾಡುತ್ತಿತ್ತು. 2018ರಲ್ಲೇ ಸಂಜನಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರು ತಮ್ಮ ಸೋಷಿಯಲ್ ಮೀಡಿಯಾ ಹೆಸರುಗಳನ್ನು ಸಂಜನಾ ಅಂತಾನೇ ಇನ್ನೂ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Samanta ruth prabhu: ಫೋಟೋ ಪೋಸ್ಟ್ ಮಾಡಿ ಮತ್ತೆ ಮದುವೆಯಾಗೊ ಸುಳಿವು ನೀಡಿದ ಸಮಂತಾ! ಹುಡುಗ ಯಾರು?

You may also like

Leave a Comment