2
Vehicle parking issue: ವಿಜಯಪುರ: ನಗರದ ಟಕ್ಕೆಯಲ್ಲಿ ಮನೆಯ ಬಳಿ ವಾಹನ ಪಾರ್ಕಿಂಗ್ ಮಾಡುವ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಕೊಡಲಿಯಿಂದ ವ್ಯಕ್ತಿ ಮೇಲೆ ಹಲ್ಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ. ಬೈಕ್ ಪಾರ್ಕಿಂಗ್ ವಿಚಾರಕ್ಕೆ (Vehicle parking issue) ಕಿರಣ ಗಜಕೊಶ ಎಂಬ ವ್ಯಕ್ತಿ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠ ಅವರಿಂದ ಕಿರಣ ಗಜಕೊಶ ಮೇಲೆ ಮಾರಾಂತೀಕವಾಗಿ ಕೊಡಲಿಯಿಂದ ಹಲ್ಲೆನಡೆಸಿದ್ದಾರೆ. ಕ್ರೂರವಾಗಿ ಮಚ್ಚು ಕೊಡಲಿಯಿಂದ ಹಲ್ಲೆನಡೆಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
