Home » Property Guidance Value: ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ಮೌಲ್ಯ ಹೆಚ್ಚಳ, ಕಾಂಗ್ರೆಸ್ ಸರಕಾರದಲ್ಲಿ ಆಸ್ತಿ ಮಾರಂಗಿಲ್ಲ, ಕೊಳ್ಳೋದು ಸಾಧ್ಯವೇ ಇಲ್ಲ ?! !!

Property Guidance Value: ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ಮೌಲ್ಯ ಹೆಚ್ಚಳ, ಕಾಂಗ್ರೆಸ್ ಸರಕಾರದಲ್ಲಿ ಆಸ್ತಿ ಮಾರಂಗಿಲ್ಲ, ಕೊಳ್ಳೋದು ಸಾಧ್ಯವೇ ಇಲ್ಲ ?! !!

0 comments
Property Guidance Value

Property Guidance Value: ಕರ್ನಾಟಕ (Karnataka) ಸರ್ಕಾರವು ರಿಯಲ್ ಎಸ್ಟೇಟ್ (real estate) ಕ್ಷೇತ್ರಕ್ಕೆ ಆಸ್ತಿ ಮಾರ್ಗಸೂಚಿ ಮೌಲ್ಯವನ್ನು (Property Guidance Value) ಹೆಚ್ಚಿಸಲು ಚಿಂತನೆ ನಡೆಸಿದೆ. ಮಾರ್ಗಸೂಚಿ ಮೌಲ್ಯವು ರಾಜ್ಯ ಸರ್ಕಾರದಲ್ಲಿ ಆಸ್ತಿಯನ್ನು (Property) ಮಾರಾಟ ಮಾಡಲು ನೋಂದಾಯಿಸಬಹುದಾದ ಕನಿಷ್ಠ ಮೌಲ್ಯವಾಗಿದೆ. ಇದನ್ನು ವೃತ್ತ ದರ ಎಂದೂ ಕರೆಯುತ್ತಾರೆ. ಇದನ್ನು ಸರ್ಕಾರ ಸುಮಾರು 10-30% ರಷ್ಟು ಹೆಚ್ಚಿಸಲು ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ. ಈ ಮೂಲಕ ಮಾರುವ ಮತ್ತು ಕೊಳ್ಳುವ ಆಸ್ತಿಗಳ ಮೇಲೆ ಟ್ಯಾಕ್ಸ್ ಅಧಿಕ ಆಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ತಲೆ ಮೇಲೊಂದು ಸೂರು ಮಾಡಿಕೊಳ್ಳುವ ಜನರ ಕನಸಿಗೆ ಭಗ್ನ ತರೋ ಯೋಜನೆ ಹಾಕಿಕೊಂಡಿದೆ ಕಾಂಗ್ರೆಸ್ ಸರ್ಕಾರ.

ಸರ್ಕಾರವು 2018-19 ರಲ್ಲಿ ಕೊನೆಯ ಬಾರಿಗೆ ಮಾರ್ಗಸೂಚಿ ಮೌಲ್ಯವನ್ನು 25% ರಷ್ಟು ಹೆಚ್ಚಿಸಿತ್ತು. ಆನಂತರ ಇದೇ ಮೊದಲ ಬಾರಿಗೆ ತನ್ನ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಿಸಲು ಯೋಚಿಸಿದೆ.
ಕೊರೋನಾ ಸಂದರ್ಭದಲ್ಲಿ ಜುಲೈ 2022 ರವರೆಗೆ ಸರ್ಕಾರವು 10% ರಿಯಾಯಿತಿಯನ್ನು ನೀಡಿತ್ತು.

ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಕೊಡುತ್ತೇನೆ ಎನ್ನುವ ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಅದನ್ನು ಪೂರೈಸಲು ಸಂಪನ್ಮೂಲಗಳ ಅವಶ್ಯಕತೆ ಇದೆ. ಅದಕ್ಕಾಗಿ ಎಲ್ಲೆಲ್ಲಿ ಸಾಧ್ಯವೊ ಅಲ್ಲಲ್ಲಿ ಬಡವರ ಮತ್ತು ತಲೆಯ ಮೇಲೊಂದು ಸೂರು ಮಾಡಿಕೊಂಡು ಮನೆ ಕಟ್ಟಿಕೊಳ್ಳುವ ಪ್ಲಾನ್ ಉಳ್ಳವರ ತಲೆಯ ಮೇಲೆ ಚಪ್ಪಡಿ ಎಳೆಯಲು ಕಾಂಗ್ರೆಸ್ ಸರಕಾರ ಹೊರಟಿದೆ.

“ಒಮ್ಮೆ ಹೊಸ ಸರ್ಕಾರದ ಕ್ಯಾಬಿನೆಟ್ ರಚನೆಯಾದ ನಂತರ, ನಾವು ನಿರ್ದೇಶನಗಳ ಕುರಿತು ಕೇಳುತ್ತೇವೆ ಮತ್ತು ಅದರ ಪ್ರಕಾರ ಸೂಚನೆ ನೀಡುತ್ತೇವೆ. ಈಗ ಕೋವಿಡ್ ಅಂತ್ಯಗೊಳ್ಳುತ್ತಿದೆ, ರಾಜ್ಯದಾದ್ಯಂತ ರಿಯಲ್​ ಎಸ್ಟೇಟ್ ಮೌಲ್ಯ ಹೆಚ್ಚಾಗಿದೆ. ಹಾಗಾಗಿ ನಾವು ನಮ್ಮ ಗೈಡೆನ್ಸ್​ ಮೌಲ್ಯವನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇವೆ ” ಎಂದು ಸ್ಟ್ಯಾಂಪ್‌ ಮತ್ತು ನೋಂದಣಿ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಪ್ರತಿಷ್ಠಿತ ಪ್ರದೇಶಗಳ ಅಂದರೆ CBD ಪ್ರದೇಶಗಳಿಗೆ ಮಾರ್ಗದರ್ಶಿ ಮೌಲ್ಯದ ಹೆಚ್ಚಳವು ಆಸ್ತಿ ಬೆಲೆಗಳು ಈಗಾಗಲೇ ಅಸ್ತಿತ್ವದಲ್ಲಿರುವ ಮಾರುಕಟ್ಟೆ ಮೌಲ್ಯಗಳಿಗೆ ಸಮನಾಗಿರುತ್ತದೆ. ಆಸ್ತಿ ಮಾರ್ಗಸೂಚಿ ಮೌಲ್ಯದ ಹೆಚ್ಚಳದಿಂದ ಸ್ಟ್ಯಾಂಪ್ ಡ್ಯೂಟಿ ಮತ್ತು ಮನೆ ಖರೀದಿದಾರರಿಗೆ ನೋಂದಣಿ ವೆಚ್ಚಗಳ ಮೇಲೆ ಪರಿಣಾಮ ಬಿದ್ದೆ ಬೀಳುತ್ತದೆ. ಒಂದು ಕೋಟಿ ಮೌಲ್ಯದ ಆಸ್ತಿಗೆ 10% ಮೂಲ ಬೆಲೆಯಲ್ಲಿ ವ್ಯತ್ಯಾಸ ಆದರೆ 75,000 ವರೆಗೆ ಹೆಚ್ಚಿನ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಅದೇ 30 % ಮಾರ್ಗದರ್ಶಿ ಮೌಲ್ಯದ ಹೆಚ್ಚಳವು 2.5 ಲಕ್ಷದವರೆಗೆ ಹೆಚ್ಚಿನ ಟ್ಯಾಕ್ಸ್ ಕಟ್ಟುವಂತೆ ಮಾಡಲಿದೆ. ಇದರಿಂದಾಗಿ, ಮುಂದಿನ 1 ವರ್ಷಗಳಲ್ಲಿ ಜನರು ಆಸ್ತಿಗಳನ್ನು ಕೊಳ್ಳುವಾಗ ಮತ್ತು ಮಾರುವಾಗ ಪಡಿಪಾಟಲು ಪಡುವುದು ಅನಿವಾರ್ಯ ಎನ್ನಲಾಗಿದೆ. ಒಟ್ಟಾರೆಯಾಗಿ ಜನರಿಗೆ ಲಾಭವಾಗಲಿ ಎಂದು ಗ್ಯಾರಂಟಿಗಳನ್ನು ನೀಡಲು ಹೊರಟ ಸರಕಾರ ಇನ್ನೊಂದು ಕಡೆ ಕಿತ್ತುಕೊಳ್ಳಲು ಹೊರಟಿದೆ ಎನ್ನುವುದಕ್ಕೆ ಅಡ್ಡಿಯಿಲ್ಲ.

 

ಇದನ್ನು ಓದಿ: Randeep Singh Surjewala: ಯಾರು ಅನಗತ್ಯ ಹೇಳಿಕೆ ನೀಡಬಾರದು, ಆಡಳಿತ ನೀಡುವುದಷ್ಟೇ ನಮ್ಮ ಆದ್ಯತೆ : ಸುರ್ಜೇವಾಲ ಖಡಕ್‌ ಎಚ್ಚರಿಕೆ 

You may also like

Leave a Comment