Department of Fisheries: ಮೀನುಗಾರಿಕೆ ಇಲಾಖೆಯಿಂದ (Department of Fisheries) 2023-24 ನೇ ಸಾಲಿಗೆ ರಾಜ್ಯವಲಯ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಆನ್’ಲೈನ್ ಸೇವಾಸಿಂಧು ಮೂಲಕ ಅರ್ಜಿ (Application) ಸಲ್ಲಿಸಬಹುದಾಗಿದೆ. ಇನ್ನು ಸಲ್ಲಿಸಿದ ಅರ್ಜಿಯ ಜೊತೆಗೆ ಅಗತ್ಯ ದಾಖಲೆಗಳನ್ನು ಆಯಾ ತಾಲೂಕಿನ ಮೀನುಗಾರಿಗೆ ಇಲಾಖೆಯ ಕಚೇರಿಗೆ ಸಲ್ಲಿಸಬೇಕು.
ಮೀನುಮರಿ ಖರೀದಿಸಲು ನೆರವು ಯೋಜನೆ, ಕೆರೆ, ಜಲಾಶಯಗಳ ಅಂಚಿನ ಕೊಳೆಗಳಲ್ಲಿ ಮೀನುಮರಿ ಪಾಲನೆಗೆ ನೆರವು ಕೆರೆಯನ್ನು ಗುತ್ತಿಗೆಗೆ ಪಡೆದ ಮೀನುಗಾರಿಕೆ ಸಹಕಾರ ಸಂಘ, ವ್ಯಕ್ತಿಗಳಿಗೆ ಮೀನುಮರಿ ಬಿತ್ತನೆಗೆ ಸಹಾಯಧನ ನೀಡಲಾಗುವುದು. ಜಲಾಶಯ, ನದಿಭಾಗದ, ಕೆರೆಗಳ ವ್ಯಾಪ್ತಿಯ ವೃತ್ತಿಪರ ಮೀನುಗಾರರಿಗೆ ಮೀನು ಹಿಡಿಯುವ ಬಲೆ ಅಥವಾ ಫೈಬರ್ ಹರಿಗೋಲು ಖರೀದಿಗೆ ಸಹಾಯಧನ ಸಿಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ.
ಸಂಡೂರು ವ್ಯಾಪ್ತಿಗೆ ಜೆ. ಶಾಂತಕುಮಾರ್ ಮೊ.9620177588
ಬಳ್ಳಾರಿ, ಸಿರುಗುಪ್ಪ ಕಂಪ್ಲಿ ತಾಲೂಕು ವ್ಯಾಪ್ತಿಗೆ ಶಿವಣ್ಣ-ಮೊ.9449593156.
ಇದನ್ನೂ ಓದಿ: ಈಜು ಕೊಳದಲ್ಲಿ ಈಜಿ ಮಿಂದೆದ್ದ ಎಮ್ಮೆಗಳು, ಮನೆಯ ಯಜಮಾನರಿಗೆ ಆದದ್ದು ಬರೋಬ್ಬರಿ 25 ಲಕ್ಷ ಲಾಸ್ !
