CM Ibrahim: ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ( JDS state president’s post) ಕ್ಕೆ ಇಂದು ಸಿ.ಎಂ.ಇಬ್ರಾಹಿಂ ರಾಜೀನಾಮೆ(CM Ibrahim ) ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಸಿಎಂ ಇಬ್ರಾಹಿಂ ಮಾತನಾಡಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋತ ಬೆನ್ನಲ್ಲೆ ಗೌಡ್ರು ಹಿರಿಯರು, ಮುಖಂಡರು ಎಲ್ಲರನ್ನ ಕರೆದಿದ್ದಾರೆ. ಇಂದು ನೈತಿಕ ಹೊಣೆಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡುವೆ ಎಂದಿದ್ದಾರೆ. ಅಲ್ಲದೇ ಹೊಸ ಸರ್ಕಾರ ರಚನೆಯಾಗಿದೆ ಶುಭವಾಗಲಿ. ಕಾಂಗ್ರೆಸ್‌ನಲ್ಲಿದ್ದರೆ ಮಂತ್ರಿಯಾಗುತ್ತಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿ, ಗೌರವ ಇಲ್ಲದ ಕಡೆ ಸ್ಥಾನಕ್ಕೆ ಹೋಗಲ್ಲ, ಮಾನಕ್ಕೆ ಹೋಗುತ್ತೇವೆ ಎಂದು ಖಡಕ್ ಅಗಿ ಉತ್ತರ ನೀಡಿದ್ದಾರೆ. ಕರ್ನಾಟಕ ವಿಧಾನ ಸಭೆ ಚುನಾವಣೆ ಮೇ.10ರಂದು ನಡೆದಿದ್ದು,ಮೇ.13ರಂದು ಫಲಿತಾಂಶ ಹೊರಬಿದ್ದಿದ್ದು ಭಾರೀ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಳಿಕ ಮೇ.20ರಂದು ಸಿದ್ದರಾಮಯ್ಯ ಸಿಎಂಆಗಿ, ಡಿಕೆಶಿವಕುಮಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ
ಇದನ್ನು ಓದಿ: Vastu Tips: ಪರ್ಸ್‌ನಲ್ಲಿ ಪುರುಷರು ತಪ್ಪಾಗಿಯೂ ಈ ವಸ್ತುಗಳನ್ನು ಇಡಬಾರದು!
