DK Suresh – MB Patil: ಬೆಂಗಳೂರು: ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆಂಬ ಎಂಬಿ ಪಾಟೀಲ್ ಅವರ. ಜಗಳ ಇನ್ನೊಂದು ಹಂತಕ್ಕೆ ಹೋಗುತ್ತಿದೆ. ಎಂಬಿ ಪಾಟೀಲ್ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಕಂಪನವನ್ನೇ ಸೃಷ್ಟಿ ಮಾಡಿದ್ದು, ಈ ಬೆಳವಣಿಗೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಣಗಳ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿ ಮಾಧ್ಯಮಗಳಿಗೆ ಮತ್ತು ಜನಸಾಮಾನ್ಯರಿಗೆ ದೊಡ್ಡ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.
ವಿಧಾನಸೌಧದಲ್ಲಿ ಇಂದು ಡಿಕೆ.ಸುರೇಶ್ ಹಾಗೂ ಎಂಬಿ ಪಾಟೀಲ್ ಇಬ್ಬರು ಮುಖಾಮುಖಿಯಾಗಿದ್ದು, ಉಭಯ ನಾಯಕರ ನಡುವೆ ಮಾತಿನ ಸಮರ ನಡೆದಿದೆ. ವಿಧಾನಸೌಧದಲ್ಲಿ ಇಂದು ಮುಖಾಮುಖಿಯಾದ ಎಂಬಿ ಪಾಟೀಲ್ ಅವರನ್ನು ಡಿಕೆ.ಸುರೇಶ್ (DK Suresh – MB Patil)ಅವರು ಗುರಾಯಿಸಿದ್ದಾರೆ. ಅಲ್ಲದೆ, ‘ ಇದೆಲ್ಲಾ ಸರಿ ಇರಲ್ಲ ‘ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ಇಂದು ಶಾಸಕಾಂಗ ಸಭೆಯ ಬಳಿಕ ಸಭಾಂಗಣದ ಹೊರ ಭಾಗದಲ್ಲಿ ಡಿಕೆ ಸುರೇಶ್ ಹಾಗೂ ಎಂಬಿ ಪಾಟೀಲ್ ಮುಖಾಮುಖಿಯಾಗಿದ್ದಾರೆ. ಈ ಸಂದರ್ಭ ಕಾರಿಡಾರ್‌ನಲ್ಲಿಯೇ ಡಿಕೆ ಸುರೇಶ್ ಮಾತು.ಆರಂಭಿಸಿದ್ದಾರೆ. ಮೊದಲು ಎಂಬಿ ಪಾಟೀಲ್ ಗೆ, ‘ ಇದೆಲ್ಲಾ ಸರಿ ಇರಲ್ಲ ‘ ಎಂದು ಸಿಟ್ಟಿನಿಂದ ಎಂಬಿ ಪಾಟೀಲ್‌ಗೆ ಹೇಳಿದ್ದಾರೆ. ಇದಕ್ಕೆ ತಕ್ಷಣ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ಎಂಬಿ ಪಾಟೀಲ್‌ಗೆ ಗೊತ್ತಾಗಿಲ್ಲ.
ಬಳಿಕ ಪ್ರತಿಕ್ರಿಯಿಸಿದ ಎಂಬಿ ಪಾಟೀಲ್ ರೌಡಿಸಂ ರೀತಿಯಲ್ಲಿ ಮಾತನಾಡ್ತೀರಿ, ಚೆಂಬರ್‌ಗೆ ಬನ್ನಿ ಮಾತನಾಡೋಣ, ಏನ್ ವಿಷಯ ಇದೆ ಬಗೆಹರಿಸೋಣ ಬನ್ನಿ ಎಂದು ಕರೆದಿದ್ದಾರೆ. ಈ ವೇಶೆ ಸಿಟ್ಟಿನಲ್ಲಿಯೇ ಮರು ಮಾತನಾಡಿದ ಡಿಕೆ ಸುರೇಶ್ ಮಾತನಾಡುವ ಮುನ್ನ ಎಚ್ಚರವಿರಲಿ ಎಂದು ಹೇಳಿ ಹೊರಟು ಹೋಗಿದ್ದಾರೆ ಎನ್ನಲಾಗಿದೆ. ಈಗ ಎಂಬಿ ಪಾಟೀಲ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
“ನಮ್ಮ ಬಗ್ಗೆ ಇಂಥ ಯಾವುದೇ ಮಾತುಕತೆ ನಡೆದಿಲ್ಲ. ಡಿಕೆ ಸುರೇಶ್ ಅವರು, ‘ ಪಾಟೀಲರೇ ಸ್ವಲ್ಪ ಗಟ್ಟಿಯಾಗಿರಿ ಎಂದಿದ್ದಾರೆ. ಅದು ಚೇಷ್ಟೆ ಮಾಡಿದ್ದು ಅಷ್ಟೇ’ ” ಎಂದಿದ್ದಾರೆ ಎಂ ಬಿ ಪಾಟೀಲ್.
ಆದರೆ ಎಂಬಿ ಪಾಟೀಲ್ ಅವರು ಡಿಕೆ ಶಿವಕುಮಾರ್ ಗ್ಯಾಂಗ್ಗೆ ರಿವೆಂಜ್ ತೆಗೆದುಕೊಳ್ಳುತ್ತಿದ್ದಾರೆ. ಅವತ್ತು ಸಭೆಯಲ್ಲಿ ಎಂ ಬಿ ಪಾಟೀಲ್ ಅವರು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸುತ್ತಿರುವಾಗ, ಡಿಕೆಶಿ ಅವರು ‘ ಡೋಂಟ್ ಡಿಸ್ಟರ್ಬ್ ‘ ಎಂದು ಪಾಟೀಲರಿಗೆ ಬೆರಳು ತೋರಿಸಿ ಅಂದಿದ್ದರು. ಪಾಟೀಲ್ ಅಂದು ಸುಮ್ಮನಿದ್ದರೂ ಒಳಗೊಳಗೆ ಕುದ್ದು ಹೋಗಿದ್ದರು. ನಂತರ ಮೈಸೂರಿಗೆ ಹೋಗಿದ್ದ ಸಂದರ್ಭ ಎಂ ಬಿ ಪಾಟೀಲರು ಅಲ್ಲಿ, ‘ ಐದು ವರ್ಷಕ್ಕೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ’ ಎಂದು ದೊಡ್ಡ ಬತ್ತಿ ಇಟ್ಟು ಬಿಟ್ಟಿದ್ದರು. ಇವತ್ತು ರಾಜ್ಯದಲ್ಲಿ ಎಲ್ಲೆಡೆ ಸಂಚಾರ ಸೃಷ್ಟಿ ಮಾಡಿತ್ತು. ಇದೀಗ ಎಂ ಬಿ ಪಾಟೀಲರು, ‘ ನಾನು ಯಾವುದಕ್ಕೂ ಹೆದರೋ ಮಗನಲ್ಲ, ನಾನು ಬಿಜಾಪುರದವನು. ಕಳೆದ 30 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ಅಪ್ಪ ಅಮ್ಮನನ್ನು ಬಿಟ್ಟು ಬೇರೆ ಯಾರು ನನ್ನತ್ತ ಬೆರಳು ತೋರಿಸಲು ನಾನು ಬಿಡುವುದಿಲ್ಲ’ ಎಂದು ಡಿಕೆ ಗ್ಯಾಂಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: Buffaloes: ಈಜು ಕೊಳದಲ್ಲಿ ಈಜಿ ಮಿಂದೆದ್ದ ಎಮ್ಮೆಗಳು! ಮನೆಯ ಯಜಮಾನರಿಗೆ ಆದದ್ದು ಬರೋಬ್ಬರಿ 25 ಲಕ್ಷ ಲಾಸ್ !
