Home » The Kerala story: ಬಾಗಲಕೋಟೆಯಲ್ಲಿ‌ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗೆ ಕಾಲೇಜಿಗೆ ಅರ್ಧ ದಿನ ರಜೆ.!

The Kerala story: ಬಾಗಲಕೋಟೆಯಲ್ಲಿ‌ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗೆ ಕಾಲೇಜಿಗೆ ಅರ್ಧ ದಿನ ರಜೆ.!

0 comments
The Kerala story

The Kerala story : ದೇಶದಲ್ಲೇ  ಸುದೀಪ್ತೋ ಸೇನ್​ ನಿರ್ದೇಶನದ  ದಿ ಕೇರಳ ಸ್ಟೋರಿ (The Kerala story) ಸಿನಿಮಾ ಭಾರೀ ವಿವಾದಕ್ಕೀಡಾಗಿದ್ದು, ಈ ಬೆನ್ನಲ್ಲೆ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದೆ. ಬಾಗಲಕೋಟೆಯಲ್ಲಿ‌ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಗೆ ಕಾಲೇಜಿಗೆ ಅರ್ಧ ದಿನ ರಜೆ ಘೋಷಣೆ ಮಾಡಲಾಗಿದೆ.

ಮೇ 5ರಂದು ನಟಿ ಅದಾ ಶರ್ಮಾ ಅವರು ಮುಖ್ಯಭೂಮಿಕೆ ನಿಭಾಯಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೆ ಭಾರೀ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ವಿವಾದಕ್ಕೆ ಸಿಲುಕಿದೆ.

ವಿದ್ಯಾರ್ಥಿಗಳು ನೋಡಬೇಕಾದ ಸಿನಿಮಾ ಇದಾಗಿದ್ದು ಈ ಕಾರಣಕ್ಕಾಗಿ ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿರುವ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಬುಧವಾರ ಮಧ್ಯಾಹ್ನ ತನ್ನ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಿದ್ದು, ಪಟ್ಟಣದ ಶ್ರೀನಿವಾಸ್ ಟಾಕೀಸ್‌ನಲ್ಲಿ ಸಿನಿಮಾ ವೀಕ್ಷಣೆಗೆ  ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು  ಪ್ರಕಟಣೆಯಲ್ಲಿ ಮೇ 23 ರಂದು ನೀಡಲಾಗಿದೆ .

ಅಷ್ಟೇ ಅಲ್ಲದೇ  ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ದಿ ಕೇರಳ ಸಿನಿಮಾವನ್ನು  ಮೇ 23ರಿಂದ ಮೇ 25ರ ವರೆಗೆ ಮೂರು ದಿನಗಳ ಕಾಲ ಫ್ರೀ ಶೋ ನೋಡಲು ಅವಕಾಶ ಕಲ್ಪಿಸಿದ್ದಾರೆ.

ಇದನ್ನೂ ಓದಿ: Crime News: ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಭೀಕರವಾಗಿ ಕೊಲೆಗೈದ ಪಾಪಿಗಳು ; ಅಷ್ಟಕ್ಕೂ ಯಾಕಾಗಿ ಈ ಕೃತ್ಯ?

You may also like

Leave a Comment