Home » Job vacancy: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ( NRLM) ನಲ್ಲಿ ಉದ್ಯೋಗವಕಾಶ! ಪುತ್ತೂರಿನಲ್ಲಿ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

Job vacancy: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ( NRLM) ನಲ್ಲಿ ಉದ್ಯೋಗವಕಾಶ! ಪುತ್ತೂರಿನಲ್ಲಿ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ

0 comments
NRLM

NRLM: ಇಂದಿನ ದಿನದಲ್ಲಿ ಕೆಲಸ (Job) ಸಿಗೋದು ತುಂಬಾನೆ ಕಷ್ಟ. ವಿದ್ಯಾವಂತರೇ ಕೆಲಸಕ್ಕಾಗಿ (Job vacancy) ಪರದಾಡುತ್ತಿದ್ದಾರೆ. ಇನ್ನು ಕೆಲಸ ಸಿಕ್ಕಿದರೂ ಬಯಸಿದ ಕೆಲಸ ಸಿಗೋದಿಲ್ಲ. ಬಯಸಿರುವ ಕೆಲಸ ಸಿಗೋದಕ್ಕೆ ಶತಪ್ರಯತ್ನವೇ ಬೇಕು ಎಂದರೆ ತಪ್ಪಾಗಲಾರದು. ಸದ್ಯ ನಿರುದ್ಯೋಗಿಗಳಿಗೆ ಸಿಹಿಸುದ್ದಿ ಇಲ್ಲಿದೆ.

ಮೆ|| ಪನ್ನಗಾ ಎಂಟರ್‌ಪ್ರೈಸಸ್ ಮೈಸೂರು ಸಂಸ್ಥೆಯ ಮುಖಾಂತರ ಕರ್ನಾಟಕ ಸಂಜೀವಿನಿ – ರಾಷ್ಟ್ರೀಯ ಗ್ರಾಮೀಣ ಗ್ರಾಮೀಣ ಜೀವನೋಪಾಯ ಯೋಜನೆಯನ್ನು (NRLM) ಅನುಷ್ಟಾನಗೊಳಿಸಲು ಪುತ್ತೂರು (puttur) ತಾಲ್ಲೂಕುಗಳ ಅಭಿಯಾನ ನಿರ್ವಹಣಾ ಘಟಕದಲ್ಲಿ ಕಾರ್ಯನಿರ್ವಹಿಸಲು ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/05/2023

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ವೆಬ್ ಸೈಟ್ http://jobsksrlps.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಅಭ್ಯರ್ಥಿಗಳಿಗೆ ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಬೇಕಾದಲ್ಲಿ
http://jobsksrlps.karnataka.gov.in ಗೆ ಭೇಟಿ ನೀಡಿ.
ಅಥವಾ ಸಂಪರ್ಕಿಸಿ ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್, ಮಂಗಳೂರು ಹಾಗೂ ಪನ್ನಗಾ ಎಂಟರ್‌ ಪ್ರೈಸಸ್, ಮೈಸೂರು- ದೂರವಾಣಿ ಸಂಖ್ಯೆ : 0821-4000092.

ಇದನ್ನೂ ಓದಿ: Gnanavapi Masjid – Adi Vishweshwar Temple: ಜ್ಞಾನವಾಪಿ ಪ್ರಕರಣ: ಯಾವುದೇ ಶಿವಲಿಂಗ ಪತ್ತೆಯಾಗಿಲ್ಲ- ಮಸೀದಿ ಸಮಿತಿ

You may also like

Leave a Comment