Home » BBMP: ಪೌರಕಾರ್ಮಿಕರಿಗೆ ಸಿಹಿಸುದ್ದಿ ; ಸಿಗಲಿದೆ ಜೂ.1 ರಿಂದ 1500 ರೂ. ತಿಂಡಿ ಭತ್ಯೆ!

BBMP: ಪೌರಕಾರ್ಮಿಕರಿಗೆ ಸಿಹಿಸುದ್ದಿ ; ಸಿಗಲಿದೆ ಜೂ.1 ರಿಂದ 1500 ರೂ. ತಿಂಡಿ ಭತ್ಯೆ!

0 comments
BBMP

BBMP: ಪೌರ ಕಾರ್ಮಿಕರಿಗೆ ಸಿಹಿಸುದ್ದಿ ಇಲ್ಲಿದೆ. ಹೌದು, ಕಾರ್ಮಿಕರೇ ನಿಮಗೆ ಸಿಗಲಿದೆ ಪ್ರತಿದಿನ ಉಪಹಾರ ಭತ್ಯೆ. ಜೂನ್ 1ರಿಂದ ಕಾರ್ಮಿಕರಿಗೆ ತಿಂಡಿ ಭತ್ಯೆಯಾಗಿ ಪ್ರತಿದಿನ 50 ರೂ. ನೀಡಲಾಗುತ್ತದೆ. ಹಾಗಾಗಿ ನೌಕರರ ಖಾತೆಗೆ ತಿಂಗಳಿಗೆ 1500 ರೂ. ಹಣ ನೇರವಾಗಿ ಬೀಳಲಿದೆ.

ಬಿಬಿಎಂಪಿಯಲ್ಲಿ (BBMP) ಸ್ವಚ್ಚತಾ ಕಾರ್ಯ ಮಾಡುವ ಸಾಕಷ್ಟು ಜನರಿದ್ದಾರೆ. ಪ್ರತಿದಿನ ಊರುಗಳನ್ನು ಸ್ವಚ್ಚವಾಗಿಡುವವರಿಗೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಮತ್ತು ಕಾಯಂ ಪೌರ ಕಾರ್ಮಿಕರಿಗೆ ಇಸ್ಕಾನ್ ಮೂಲಕ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಉಪಹಾರ ನೀಡಲಾಗುತ್ತಿತ್ತು. ಆದರೆ ತಿಂಡಿ ಚೆನ್ನಾಗಿರಲ್ಲ ಎಂದು ಕಾರ್ಮಿಕರು ದೂರಿದ್ದರು.

ಈ ಹಿನ್ನೆಲೆ ಬಿಬಿಎಂಪಿಯು ಕಾರ್ಮಿಕರಿಗೆ ಬೆಳಗ್ಗಿನ ತಿಂಡಿಗಾಗಿ ಪ್ರತಿದಿನ 50 ರೂ. ಅಂದ್ರೆ, ನೌಕರರಿಗೆ ತಿಂಗಳಿಗೆ 1500 ರೂ. ಹಣ ನೀಡಲು ನಿರ್ಧರಿಸಿದೆ. ಬಿಬಿಎಂಪಿಯ ಸುಮಾರು 15.000 ಕ್ಕೂ ಹೆಚ್ಚು ಕಾರ್ಮಿಕರಿಗೆ ಉಪಹಾರ ಭತ್ಯೆ ನೀಡಲಾಗುತ್ತಿದೆ.

ಇದನ್ನೂ ಓದಿ: IAS transfer: ಮತ್ತೆ ಐಎಎಸ್‌ ಅಧಿಕಾರಿಗಳ ವರ್ಗಾವಣೆ ; ಗೌರವ ಗುಪ್ತ ಕೆಪಿಸಿಎಲ್‌’ಗೆ ನೇಮಕ!

You may also like

Leave a Comment