Home » E-permit For Transportation of Cow: ಗೋ ಸಾಗಾಣೆಗೆ ಇ – ಪರವಾನಗಿ ಕಡ್ಡಾಯ; ಲೈಸೆನ್ಸ್ ಪಡೆಯಲು ಇಲ್ಲಿದೆ ಮಾಹಿತಿ!

E-permit For Transportation of Cow: ಗೋ ಸಾಗಾಣೆಗೆ ಇ – ಪರವಾನಗಿ ಕಡ್ಡಾಯ; ಲೈಸೆನ್ಸ್ ಪಡೆಯಲು ಇಲ್ಲಿದೆ ಮಾಹಿತಿ!

0 comments
E-permit For cow Transportation

E-permit for cow transportation: ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ.‌ ಹಾಗಾಗಿ ಯಾವುದೇ ಜನರು ಗೋ ಹತ್ಯೆಯನ್ನು ಮಾಡುವಂತಿಲ್ಲ. ಹತ್ಯೆ ಮಾಡಬಾರದು ಎಂಬ ನಿಟ್ಟಿನಲ್ಲಿ ಹಲವು ರೀತಿಯ ಕ್ರಮ‌ ಕೈಗೊಳ್ಳಲಾಗಿದೆ. ಇದೀಗ ಅಕ್ರಮ ಪಶು ಸಾಗಾಣೆ ತಡೆಯಲು ಗೋ ಸಾಗಾಣೆಗೆ ಇ – ಪರವಾನಗಿ (E-permit for cow transportation) ಕಡ್ಡಾಯವಾಗಿ ಬೇಕು ಎಂದು ಪಶು ಸಂಗೋಪನಾ ಇಲಾಖೆ ಅದೇಶ ಹೊರಡಿಸಿದೆ.

ಸದ್ಯ ಅನುಮತಿ ಪತ್ರವನ್ನು ತೋರಿಸಿ ಗೋ ಸಾಗಾಣೆ ಮಾಡಬಹುದಾಗಿತ್ತು. ಆದರೆ, ಕೆಲವರು ಅನುಮತಿ ಪಡೆದ ಬಳಿಕ ಅದರ ದುರ್ಬಳಕೆ ಮಾಡಿಕೊಳ್ಳುವ ಹಿನ್ನೆಲೆ ಇದೀಗ ಪಶು ಸಂಗೋಪನ ಇಲಾಖೆ ಗೋ ಸಾಗಾಣೆಗೆ ಇ – ಪರವಾನಗಿ ಕಡ್ಡಾಯ ಮಾಡಿದೆ. ಆನ್ಲೈನ್ ಮೂಲಕ ಇ- ಪರವಾನಗಿ ಪಡೆಯಬಹುದಾಗಿದೆ.

ಗೋ ಸಾಗಾಣೆಗೆ ಇ – ಪರವಾನಗಿ ಪಡೆಯುವುದು ಹೇಗೆ?

• ಜಾನುವಾರು ಸಾಗಾಟದಾರರು ಪಶು ಸಂಗೋಪನಾ ಇಲಾಖೆಯ ವೆಬ್’ಸೈಟ್ https://animaltrans.karahvs.in ಗೆ ಭೇಟಿ ನೀಡಿ, ಪರವಾನಗಿ ಪಡೆಯಬಹುದು.
• ಇಲ್ಲಿ ಜಾನುವಾರಿನ ಭಾವಚಿತ್ರದ ಜೊತೆಗೆ ಸರ್ಕಾರ ನೀಡಿರುವ ಅದರ ಕಿವಿ ಓಲೆಯ ಸಂಖ್ಯೆಯನ್ನು ನಮೂದಿಸಬೇಕು.
• ಎಲ್ಲಿಂದ- ಎಲ್ಲಿಯವರೆಗೆ ಜಾನುವಾರನ್ನು ಸಾಗಾಣೆ ಮಾಡಲಾಗುತ್ತಿದೆ ಎಂಬುದನ್ನು ನಮೂದಿಸಬೇಕು.
• ಯಾವ ಉದ್ದೇಶಕ್ಕಾಗಿ ಜಾನುವಾರು ಸಾಗಾಣೆ ಮಾಡಲಾಗುತ್ತಿದೆ.
• ಸಾಗಾಣೆಗೆ ಬಳಸುವ ವಾಹನದ ಸಂಖ್ಯೆ, ಚಾಲಕನ ಹೆಸರು, ಚಾಲನಾ ಪರವಾನಗಿ, ದೂರವಾಣಿ ಸಂಖ್ಯೆ ಇತ್ಯಾದಿ ವಿವರಗಳನ್ನು ನಮೂದಿಸಬೇಕು.

ಅಂದ ಹಾಗೆ, ಕಳೆದ ಕೆಲ ದಿನಗಳ ಹಿಂದೆ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಅಲ್ಪ ಅವಧಿಯಲ್ಲೇ ಗೋಹತ್ಯೆ ನಿಷೇಧ ಸೇರಿ ವಿವಾದಾತ್ಮಕ ಕಾಯ್ದೆಗಳನ್ನು, ರಾಜ್ಯದ ಪ್ರಗತಿಗೆ ಅಡ್ಡಿಯಾಗಿರುವ ಇತರೆ ಕಾನೂನುಗಳನ್ನು ಪರಿಶೀಲಿಸಿ ವಾಪಸ್ ಪಡೆಯುತ್ತೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: BBMP: ಪೌರಕಾರ್ಮಿಕರಿಗೆ ಸಿಹಿಸುದ್ದಿ ; ಸಿಗಲಿದೆ ಜೂ.1 ರಿಂದ 1500 ರೂ. ತಿಂಡಿ ಭತ್ಯೆ!

You may also like

Leave a Comment