Home » IAS transfer: ಮತ್ತೆ ಐಎಎಸ್‌ ಅಧಿಕಾರಿಗಳ ವರ್ಗಾವಣೆ ; ಗೌರವ ಗುಪ್ತ ಕೆಪಿಸಿಎಲ್‌’ಗೆ ನೇಮಕ!

IAS transfer: ಮತ್ತೆ ಐಎಎಸ್‌ ಅಧಿಕಾರಿಗಳ ವರ್ಗಾವಣೆ ; ಗೌರವ ಗುಪ್ತ ಕೆಪಿಸಿಎಲ್‌’ಗೆ ನೇಮಕ!

0 comments
IAS transfer

IAS transfer: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗೆಲುವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಹಲವು ಬದಲಾವಣೆಗಳನ್ನು ತರುತ್ತಲಿದೆ. ಈ ಮಧ್ಯೆ ಘೋಷಣೆ ಮಾಡಿರುವಂತಹ ಐದು ಗ್ಯಾರಂಟಿಗಳ ಜಾರಿಗೆ ಚಿಂತನೆಯೂ ನಡೆಸಿದೆ. ಜೊತೆಗೆ ಕಾಂಗ್ರೆಸ್ ಸರ್ಕಾರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ನೇಮಕಾತಿ ಹಗರಣದ (Psi Recruitment Scam) ಬಗ್ಗೆ ಮರು ತನಿಖೆ ನಡೆಸಲು ಯೋಜನೆ ರೂಪಿಸಿದೆ. ಹಾಗೇ ಇದೀಗ ಹಿರಿಯ ಐಎಎಸ್‌ ಅಧಿಕಾರಿಗಳ ವರ್ಗಾವಣೆ (IAS transfer) ಮುಂದುವರೆಸಿದೆ.

ಹೌದು, ಸರ್ಕಾರ ಮತ್ತೆ ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದೆ‌. ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಹಿರಿಯ ಅಧಿಕಾರಿ ಗೌರವ ಗುಪ್ತ (gaurav Gupta) ಅವರನ್ನು ಕರ್ನಾಟಕ ವಿದ್ಯುತ್‌ ನಿಗಮ ಲಿ.ನ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆ ಮಾಡಲಾಗಿದೆ.

ಅಲ್ಲದೆ, ಮತ್ತೊರ್ವ ಹಿರಿಯ ಐಎಎಸ್‌ ಅಧಿಕಾರಿ, ಕೈಗಾರಿಕೆಗಳ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ ಅವರನ್ನು ಬೇರೆಡೆ ನೇಮಕ ಮಾಡಲಾಗಿದ್ದು, ಅವರಿಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಹುದ್ದೆ ಹೆಚ್ಚುವರಿ ಕಾರ್ಯಭಾರ ನೀಡಲಾಗಿದೆ. ಇನ್ನೂ ಹಲವು ಅಧಿಕಾರಿಗಳ ಪಟ್ಟಿ ಮಾಡಲಾಗಿದೆ. ಸಂಪುಟ ವಿಸ್ತರಣೆ ಮುಗಿದ ಬಳಿಕ ನೇಮಕ ಆದೇಶ ತಿಳಿಯಬಹುದು.

ಸದ್ಯ ಕಾಂಗ್ರೆಸ್‌ ಚುನಾವಣಾ ಪ್ರಚಾರದ ವೇಳೆ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಈ ಹಿನ್ನೆಲೆ ರಾಜ್ಯದಲ್ಲಿ ಸಾಕಷ್ಟು ಗದ್ದಲ ಸೃಷ್ಟಿಯಾಗಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರ ಹೇಳಿದಂತೆ ನಡೆಯಲು ಮುಂದಾಗಿದೆ. ಗ್ಯಾರಂಟಿ ಜಾರಿಗೆ ತರಲು ಚಿಂತನೆ ನಡೆಸಿದೆ. ಅದಕ್ಕಾಗಿ ಉತ್ತಮ ಹಾಗೂ ಅನುಭವ ಇರುವ ಅಧಿಕಾರಿಗಳನ್ನು ನಿಯೋಜಿಸುತ್ತಿದೆ.

ಇದನ್ನೂ ಓದಿ: ಎದ್ದು ನಿಂತ ಕೂಡಲೇ ತಲೆ ತಿರುಗುವ ಹಾಗೆ ಆಗ್ತಾ ಇದ್ಯಾ? ಇಲ್ಲಿದೆ ಫುಲ್​ ಡೀಟೇಲ್ಸ್​

You may also like

Leave a Comment