Home » Karnataka cabinet: ಸಿದ್ದು ಸರ್ಕಾರದ ಪೂರ್ಣ ಕ್ಯಾಬಿನೆಟ್ ರಚನೆಗೆ ಹೈಕಮಾಂಡ್ ಒಪ್ಪಿಗೆ! ದೇಶಪಾಂಡೆ, ಹರಿಪ್ರಸಾದರಿಗಿಲ್ಲ ಮಂತ್ರಿಗಿರಿ; ಇಲ್ಲಿದೆ ನೋಡಿ ನೂತನ ಸಚಿವರ ಪಟ್ಟಿ!!

Karnataka cabinet: ಸಿದ್ದು ಸರ್ಕಾರದ ಪೂರ್ಣ ಕ್ಯಾಬಿನೆಟ್ ರಚನೆಗೆ ಹೈಕಮಾಂಡ್ ಒಪ್ಪಿಗೆ! ದೇಶಪಾಂಡೆ, ಹರಿಪ್ರಸಾದರಿಗಿಲ್ಲ ಮಂತ್ರಿಗಿರಿ; ಇಲ್ಲಿದೆ ನೋಡಿ ನೂತನ ಸಚಿವರ ಪಟ್ಟಿ!!

by ಹೊಸಕನ್ನಡ
0 comments
Karnataka cabinet

Karnataka cabinet: ಸಿಎಂ ಸಿದ್ದರಾಮಯ್ಯ(Siddaramaiah) ಸರ್ಕಾರದ ಪೂರ್ಣ ಪ್ರಮಾಣದ ಕ್ಯಾಬಿನೆಟ್(Karnataka cabinet) ರಚನೆಗೆ ಕಾಂಗ್ರೆಸ್ ಹೈಕಮಾಂಡ್(Congress High command) ಅಸ್ತು ಎಂದಿದ್ದು, ನಾಳೆ ಅಂದರೆ ಶನಿವಾರ 24 ಜನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.  ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಇನ್ನು ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ. ಯಾರಿಗೆಲ್ಲ ಮಂತ್ರಿಗಿರಿ ಸಿಕ್ಕಿದೆ ಗೊತ್ತಾ?

ಹೌದು, ಅವರ ಸಚಿವ ಸಂಪುಟ ರಚನೆಗೆ ದೆಹಲಿಯ ಕಾಂಗ್ರೆಸ್ ವಾರ್ ರೂಮ್​ನಲ್ಲಿ ಭಾರೀ ಕಸರತ್ತು ನಡೆದಿತ್ತು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವೆ ಒಮ್ಮತದ ನಿರ್ಧಾರ ಬಾರದ ಹಿನ್ನೆಲೆ ಸಚಿವ ಸಂಪುಟ ರಚನೆ ಹೈಕಮಾಂಡ್​ಗೆ ತಲೆನೋವಾಗಿ ಪರಿಣಮಿಸಿತ್ತು. ಸದ್ಯ, ನೂತನ ಸಚಿವರ (Cabinet Ministers) ಪ್ರಮಾಣವಚನ ಮೇ 28ರಂದು ನಡೆಯಲಿದ್ದು, ಸಚಿವರ ಪಟ್ಟಿಯೂ ಅಂತಿಮಗೊಂಡಿದೆ. ಅಧೃಕೃತ ಘೋಷಣೆಯೊಂದೇ ಬಾಕಿ ಇದೆ. ಈ ನಡುವೆ ನೂತನ ಸಚಿವರ ಪಟ್ಟಿ ಟಿವಿ9ಗೆ ಲಭ್ಯವಾಗಿದೆ. ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಇನ್ನು ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ.

ಪ್ರಸ್ತುತ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಶಿವಕುಮಾರ್‌ (DK Shivakumar) ಸೇರಿದಂತೆ 10 ಮಂದಿ ಸಂಪುಟದಲ್ಲಿದ್ದು 34 ಸದಸ್ಯ ಬಲದ ಸಂಪುಟದಲ್ಲಿ 24 ಸ್ಥಾನಗಳು ಖಾಲಿಯಿದೆ. ಗುರುವಾರ ಸುದೀರ್ಘ ಸಭೆ ಬಳಿಕ ಅಂತಿಮ ಪಟ್ಟಿಗೆ ಮುದ್ರೆ ಬಿದ್ದಿದೆ. ವೇಣುಗೋಪಾಲ್ ನೇತೃತ್ವದಲ್ಲಿ ಇಂದು ಸಭೆ ನಡೆಸಿ ಖಾತೆಯನ್ನು ಹಂಚಿಕೆ ಮಾಡಲಾಗುತ್ತದೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ ಅವರನ್ನು ಭೇಟಿಯಾದ ಬಳಿಕ ಸಚಿವಕಾಂಕ್ಷಿಗಳಿಗೆ ಕರೆ ಹೋಗಲಿದೆ.

ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ಕರ್‌, ಶಿವಾನಂದ ಪಾಟೀಲ್, ದರ್ಶನಾಪುರ, ಬಸವರಾಜ್ ರಾಯರೆಡ್ಡಿ, ಡಾ. ಮಹಾದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ಎಸ್.ಎಸ್. ಮಲ್ಲಿಕಾರ್ಜುನ, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ರಹೀಂ ಖಾನ್, ಅಜಯ್ ಸಿಂಗ್, ಪುಟ್ಟರಂಗ ಶೆಟ್ಟಿ, ನರೇಂದ್ರ ಸ್ವಾಮಿ, ಹಿರಿಯೂರು ಸುಧಾಕರ್, ಎಚ್.ಕೆ. ಪಾಟೀಲ್, ಚೆಲುವರಾಯಸ್ವಾಮಿ, ಸಂತೋಷ ಲಾಡ್, ಎಂ ಕೃಷ್ಣಪ್ಪ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ಶಿವರಾಜ್ ತಂಗಡಗಿ, ಮಧುಗಿರಿ ರಾಜಣ್ಣ, ನಾಗೇಂದ್ರ ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ. ಇನ್ನು, ವಿಧಾನಸಭೆ ಉಪಸಭಾಪತಿ ಸ್ಥಾನ ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್‌ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.

ದೇಶಪಾಂಡೆ(R V Deshpamde), ಹರಿಪ್ರಸಾದ್​(Hariprasad)ಗಿಲ್ಲ ಸಚಿವ ಸ್ಥಾನ ಹಿರಿಯ ಶಾಸಕರಾದ ಆರ್‌ವಿ ದೇಶಪಾಂಡೆ ಹಾಗೂ ಬಿಕೆ ಹರಿಪ್ರಸಾದ್‌ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಬಿ.ಕೆ.ಹರಿಪ್ರಸಾದ್‌ ಬದಲು ಎಂಎಲ್‌ಸಿ ಬೋಸರಾಜು ಅವರಿಗೆ ಸಚಿವ ಸ್ಥಾನ ಒಲಿದುಬಂದಿದೆ. ಹಿರಿಯರ ಸಂಪುಟ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಿಬಂದಿಲ್ಲ.

ಅಂದಹಾಗೆ ನಾಳೆ ಬೆಳಗ್ಗೆ 11:45ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು ರಾಜ್ಯಪಾಲರ(Governor) ಕಚೇರಿಯಿಂದ ಸಿಎಂ ಕಚೇರಿ ಸಮಯ ಪಡೆದಿದೆ. ಮುಂದಿನ ಎರಡೂವರೆ ವರ್ಷ ಯಾವುದೇ ತಕರಾರುಗಳಿಲ್ಲದೇ ಸರ್ಕಾರ ನಡೆಸಲು ಕಾಂಗ್ರೆಸ್‌ ಪ್ಲ್ಯಾನ್‌ ಮಾಡಿಕೊಂಡಿದೆ.

ಇದನ್ನೂ ಓದಿ: ಸಿದ್ದು ವಿರುದ್ಧ ಅಶ್ವತ್ಥ ನಾರಾಯಣ ವಿವಾದಾತ್ಮಕ ಹೇಳಿಕೆ ವಿಚಾರ : ಕೇಸ್‌ ಮೈಸೂರಿನಿಂದ ಮಂಡ್ಯಕ್ಕೆ ವರ್ಗಾವಣೆ

You may also like

Leave a Comment